Advertisement
ಸೌದಿ ಅರೇಬಿಯಾದ ರಿಯಾದ್ ನಲ್ಲಿ ಆರಂಭಿಕವಾಗಿ ಭಾಗಶಃ ಸೂರ್ಯಗ್ರಹಣ ಗೋಚರಿಸಿತ್ತು. ಭಾರತದಲ್ಲಿ ಅತ್ಯಪರೂಪದ ಕಂಕಣ ಸೂರ್ಯಗ್ರಹಣ ಮೊದಲು ಗೋಚರವಾಗಿದ್ದು ಕೇರಳದ ಚೆರ್ವತ್ತೂರಿನಲ್ಲಿ. ಕರ್ನಾಟಕ ಹಾಗೂ ತಮಿಳುನಾಡಿನಲ್ಲಿ ಜನರು ಬಾನಂಗಳದಲ್ಲಿ ನಡೆದ ಕಂಕಣ ಸೂರ್ಯಗ್ರಹಣದ ಕೌತುಕವನ್ನು ಸೌರ ಕನ್ನಡಕಗಳನ್ನು ಧರಿಸಿ ಕಣ್ತುಂಬಿಕೊಂಡರು.
Related Articles
Advertisement
ಕಂಕಣ ಸೂರ್ಯಗ್ರಹಣ ಪೂರ್ಣ, ಭಾಗಶಃ ಹಾಗೂ ಉಂಗುರಾಕೃತಿ ಸೇರಿದಂತೆ ಮೂರು ವಿಧದಲ್ಲಿ ಗೋಚರವಾಗಿತ್ತು. ಸೂರ್ಯಗ್ರಹಣ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ದೇವಾಲಯಗಳಲ್ಲಿ ಹೋಮ, ಹವನ ನಡೆಯಿತು. ಬಹುತೇಕ ದೇವಾಲಯಗಳು ಸೂರ್ಯಗ್ರಹಣ ಸಮಯದಲ್ಲಿ ಮುಚ್ಚಲಾಗಿದ್ದು, ಸೂರ್ಯಗ್ರಹಣ ಮೋಕ್ಷದ ಬಳಿಕ ಶುದ್ದಿಕಾರ್ಯ ನಡೆಸಿ ಪೂಜೆ, ಪುನಸ್ಕಾರ ಆರಂಭಿಸಿದ್ದವು.