Advertisement

ರಿಲಯನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್‌ನ‌ ಮಾರುಕಟ್ಟೆ ಬಂಡವಾಳ ಏರಿಕೆ

09:40 AM Nov 22, 2019 | Sriram |

ಹೊಸದಿಲ್ಲಿ: ಜಿಯೋ ಸಂಸ್ಥೆ ಒಡೆಯ ಮುಖೇಶ್‌ ಅಂಬಾನಿ ಆಡಳಿತದ ರಿಲಯನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್‌ನ‌ (ಆರ್‌ಐಎಲ್‌) ಮಾರುಕಟ್ಟೆ ಬಂಡವಾಳ (ಎಂ  ಕ್ಯಾಪಿಟಲ್‌) ಮೌಲ್ಯದಲ್ಲಿ ಭಾರಿ ಪ್ರಮಾಣದ ಏರಿಕೆ ಕಂಡು ಬಂದಿದ್ದು, ಸತತವಾಗಿ 11ನೇ ವರ್ಷವೂ ಬಂಡವಾಳ ಹೂಡಿಕೆಯಲ್ಲಿ ರಿಲಯನ್ಸ್‌ ಸಂಸ್ಥೆ ಮುಂದಿದೆ.

Advertisement

3.6 ಲಕ್ಷ ಕೋಟಿ ರೂ. ಸಂಪತ್ತು ಹೊಂದಿರುವ ಬಿಲಿಯನರ್‌ ಮುಖೇಶ್‌ ಅಂಬಾನಿ ಮುಖ್ಯಸ್ಥರಾಗಿರುವ ದೇಶದ ಅತ್ಯಮೂಲ್ಯ ಸಂಸ್ಥೆಯಾದ ರಿಲಯನ್ಸ್‌ ಇಂಡಸ್ಟ್ರೀಸ್‌ ಮಾರುಕಟ್ಟೆ ಮೌಲ್ಯಮಾಪನದಲ್ಲಿ ತನ್ನ ಷೇರು ಬೆಲೆಯಲ್ಲಿ ನಿರಂತರವಾಗಿ ಏರಿಕೆ ಕಂಡು ಬರುತ್ತಿದ್ದು, ಎಂ- ಕ್ಯಾಪ್‌ ಮೌಲ್ಯ 10 ಲಕ್ಷ ಕೋಟಿ ರೂ. ಹತ್ತಿರವಿದೆ ಎಂದು ತಿಳಿಸಿದೆ. ಜತೆಗೆ ಷೇರು ಮೌಲ್ಯದಲ್ಲಿ ಶೇ.4.10ರಷ್ಟು ಏರಿಕೆ ಕಂಡು ಬಂದಿದ್ದು, 1,571.85 ರೂ.ಗೆ ತಲುಪುವ ಮೂಲಕ ಒಟ್ಟಾರೆ ಮೌಲ್ಯದಲ್ಲಿ ಏರಿಕೆ ಕಂಡು ಬಂದಿದೆ ಎಂದು ಕಂಪನಿ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದೆ.

ಮುಂದಿನ ಕೆಲವು ವಾರಗಳಲ್ಲಿ ಟೆಲಿಕಾಂ ನಿಯಮಗಳಿಗೆ ಅನುಸಾರವಾಗಿ ಮೊಬೈಲ್‌ ಕರೆ ಮತ್ತು ಡೇಟಾ ಶುಲ್ಕ ಹೆಚ್ಚಿಸುವುದಾಗಿ ಜಿಯೋ ಮಂಗಳವಾರ ಪ್ರಕಟಣೆ ಹೊರಡಿಸಿತ್ತು. ಇದಕ್ಕೂ ಮೊದಲು ಭಾರ್ತಿ ಏರ್‌ಟೆಲ್‌ ಮತ್ತು ವೋಡಾಫೋನ್‌ ಐಡಿಯಾ ಕೂಡ ಡಿಸೆಂಬರ್‌ನಿಂದ ದರ ಹೆಚ್ಚಿಸುವುದಾಗಿ ತಿಳಿಸಿದ್ದವು.

ಬಿಎಸ್‌ಇನಲ್ಲಿ ಕಂಪನಿಯ ಮಾರುಕಟ್ಟೆ ಮೌಲ್ಯವು 32,525.22 ರೂ. ಕೋಟಿಯಿಂದ 9,90,366.80 ರೂ. (ಬೆಳಿಗ್ಗಿನ ವಹಿವಾಟು) ಕೋಟಿಗೆ ಬಂದು ತಲುಪಿದ್ದು, ಕಳೆದ ತಿಂಗಳ ಮಧ್ಯಂತರ ವಹಿವಾಟಿನಂದು 9 ಲಕ್ಷ ಕೋಟಿ ರೂ. ರಷ್ಟು ಮಾರುಕಟ್ಟೆ ಬಂಡವಾಳ ದಾಟಿದ ಮೊದಲ ಭಾರತೀಯ ಕಂಪನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಮಾರುಕಟ್ಟೆಯಲ್ಲಿ ಬಂಡವಾಳ ಹೂಡಿಕೆ ಮೌಲ್ಯಮಾಪನ ಆಧಾರದಲ್ಲಿ ಕಳೆದ ವರ್ಷ ಅಗಸ್ಟ್‌ ನಲ್ಲಿ ದೇಶಿಯ ಕಂಪನಿಗಳ ಪೈಕಿ ಆರ್‌ಐಎಲ್‌ 8 ಲಕ್ಷ ಕೋಟಿ ಗಡಿ ದಾಟಿತ್ತು. ಈಗ ಅದು 10 ಲಕ್ಷ ಕೋಟಿ ತಲುಪುವ ಸನಿಹದಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next