Advertisement
ಪ್ರತಿಕೂಲದ ಪರಿಸ್ಥಿತಿಗಳಲ್ಲಿ ಶತ್ರುವಿನ ವಿರುದ್ಧ ಹೋರಾಡುವ ಛಾತಿ ಬೆಳೆಸುವ ಉದ್ದೇಶದಿಂದ “ಪ್ಲಾನ್ 190′ ಯೋಜನೆಯಡಿ ಇದನ್ನು ಸ್ಥಾಪಿಸಲಾಗಿದೆ. ಕಷ್ಟಕರವಾದ ವ್ಯಾಯಾಮ, ಹೈ ಇಂಟೆನ್ಸಿಟಿ ದೇಹದಾಡ್ಯ ಕಸರತ್ತುಗಳು, ಕವಾಯತುಗಳು ಹಾಗೂ ಸಶಸ್ತ್ರ ಯುದ್ಧ ತಂತ್ರಗಾರಿಕೆಯನ್ನು ಇಲ್ಲಿ ಕಲಿಸಿಕೊಡಲಾಗುತ್ತದೆ.
ಎಲ್‌ಎಸಿ ಬಳಿ ಕರ್ತವ್ಯದಲ್ಲಿ ಇರುವವರಿಗೆಲ್ಲಾ ಇಲ್ಲಿ ತರಬೇತಿ ನೀಡಲಾಗುತ್ತದೆ. ಕರ್ತವ್ಯದ ಪಾಳಿ ಮುಗಿದ ನಂತರ ದಿನಂಪ್ರತಿ 3 ಗಂಟೆಗಳ ಕಾಲ ಇಲ್ಲಿ ಅವರು ಅಭ್ಯಾಸ ನಡೆಸುವುದನ್ನು ಕಡ್ಡಾಯಗೊಳಿಸಲಾಗಿದೆ. ತರಬೇತಿಯ ನಂತರ 10 ನಿಮಿಷ ಯೋಗಾಭ್ಯಾಸ ಹಾಗೂ ಧ್ಯಾನಕ್ಕೂ ಇಲ್ಲಿ ಅವಕಾಶವಿದೆ. ಇದನ್ನೂ ಓದಿ:ಪಂಚಮಸಾಲಿಗಳ ಒತ್ತಡಕ್ಕೆ ಸರ್ಕಾರ ಮಣಿಯಬಾರದು: ಸಿ.ಎಸ್ ದ್ವಾರಕಾನಾಥ್
Related Articles
ಭಾರತ- ಚೀನಾ ಗಡಿ ನಿಯಂತ್ರಣ ರೇಖೆಯ ಬಳಿ, ಭಾರತದ ಗಡಿಯೊಳಗಿರುವ ತವಾಂಗ್ ಸೆಕ್ಟರ್‌ನ ಬಳಿಯಿರುವ ಯುದ್ಧಾನುಕೂಲ ಜಾಗವಾದ ಬಮ್ ಲಾ ಸನಿಹದಲ್ಲಿದೆ. ಇಲ್ಲಿಂದ ತವಾಂಗ್ ಅನ್ನು ಸಂಪರ್ಕಿಸಲು ಸುಮಾರು 35 ಕಿ.ಮೀ. ದೂರದ ಎರಡು ಕಾಲು ದಾರಿಗಳಿವೆ. ಒಂದು ಎಲ್‌ಎಸಿಯ ಬಮ್ ಲಾಕ್ಕೆ ಹೋದರೆ, ಮತ್ತೂಂದು ನೇರವಾಗಿ ತವಾಂಗ್‌ಗೆ ಹೋಗುತ್ತದೆ.
Advertisement
ತರಬೇತಿ ಕೇಂದ್ರದಲ್ಲಿ ಸಾಮಾನ್ಯ ಸರಾಸರಿ ತಾಪಮಾನ 5 ಡಿಗ್ರಿ ಸೆಂಟಿಗ್ರೇಡ್ ಇರುತ್ತದೆ. ಇನ್ನೆರಡು ತಿಂಗಳಲ್ಲಿ ಅಲ್ಲಿನ ತಾಪಮಾನ -25 ಡಿಗ್ರಿಗೆ ಇಳಿಯುತ್ತದೆ. ಅದೇ ವಾತಾವರಣ 6 ತಿಂಗಳವರೆಗೆ ಇರುತ್ತದೆ. ಇಂಥ ಪ್ರತಿಕೂಲ ಪರಿಸ್ಥಿತಿಯಲ್ಲಿ ತರಬೇತಿ ಪಡೆಯುವ ಯಾವುದೇ ಸೈನಿಕ, ಎಲ್‌ಎಸಿಯಲ್ಲಿ ಎಂಥ ವೈರುಧ್ಯದ ಹವಾಮಾನವಿದ್ದರೂ ಹೋರಾಡಿ ಜಯಿಸಬಲ್ಲ ತಂತ್ರಗಾರಿಕೆ ರೂಢಿಸಿಕೊಳ್ಳುತ್ತಾನೆ.– ಬ್ರಿಗೇಡಿಯರ್ ಜಗತಾಪ್, ತವಾಂಗ್ ಬ್ರಿಗೇಡ್ ಕಮಾಂಡರ್