Advertisement
“ನಾನು ಸೆಂಟ್ರಲ್ ಗವರ್ನಮೆಂಟ್ ಎಂಪ್ಲಾಯಿ’ ಎಂದು ಹಲವರು ಹೆಮ್ಮೆಯಿಂದ ಹೇಳಿಕೊಳ್ಳುವುದನ್ನು ಈಗಲೂ ನೋಡಬಹುದು. ಕೇಂದ್ರ ಸರ್ಕಾರಿ ನೌಕರಿಯಾದರೆ ಅಲ್ಲಿ ಹೆಚ್ಚು ಸಂಬಳ ಮಾತ್ರವಲ್ಲ, ಸೌಲಭ್ಯಗಳೂ ಚೆನ್ನಾಗಿರುತ್ತವೆ. ಈ ಕಾರಣದಿಂದಲೇ ಸೆಂಟ್ರಲ್ ಗವರ್ನಮೆಂಟ್ ಜಾಬ್ ಎಂದಾಕ್ಷಣ ಕೆಲವರು ಕಾಲರ್ ಹಾರಿಸುವುದು. ಹೀಗೆ ಹೆಚ್ಚು ಸೌಲಭ್ಯ ನೀಡುವ ಇಲಾಖೆಗಳ ಪೈಕಿ ರೈಲ್ವೆ ಇಲಾಖೆಯೂ ಒಂದು. ರೈಲ್ವೆ ಡಿಪಾರ್ಟ್‌ಮೆಂಟ್‌ನ ಉದ್ಯೋಗಿಯಾಗಬೇಕು ಎಂಬ ಆಸೆ ನಿಮಗಿದ್ದರೆ ಕೂಡಲೇ ಅರ್ಜಿ ಸಲ್ಲಿಸಲು ಸಿದ್ಧರಾಗಿ. ಅಸಿಸ್ಟೆಂಟ್ ಲೋಕೋ ಪೈಲಟ್ ಮತ್ತು ಟೆಕ್ನಿಶಿಯನ್ ಹುದ್ದೆಗಳೂ ಸೇರಿದಂತೆ ಒಟ್ಟು 26,502 ಹುದ್ದೆಗಳಿಗೆ ದೇಶಾದ್ಯಂತ ಅರ್ಜಿ ಆಹ್ವಾನಿಸಲಾಗಿದೆ. ಅದರಲ್ಲೂ ಅಸಿಸ್ಟೆಂಟ್ ಲೋಕೊ ಪೈಲಟ್ ಹುದ್ದೆಗಳಿಗೆ ಅತಿ ಹೆಚ್ಚಿನ ಪ್ರಾಮುಖ್ಯತೆ ಸಿಕ್ಕಿದೆ.
ಅಸಿಸ್ಟೆಂಟ್ ಲೋಕೊ ಪೈಲೆಟ್ – 17,673
ಟೆಕ್ನೀಶಿಯನ್- 8,829 ಈ ಹುದ್ದೆಗಳನ್ನು ದೇಶಾದ್ಯಂತ ಅಹಮದಾಬಾದ್, ಅಜ್ಮಿàರ್, ಅಲಹಾಬಾದ್ ಸೇರಿದಂತೆ 21 ರೈಲ್ವೆ ವಿಭಾಗಗಳಿಗೆ ವಿಂಗಡಿಸಲಾಗಿದೆ. ಅದರಲ್ಲಿ ಬೆಂಗಳೂರು ವಿಭಾಗಕ್ಕೆ 1,054 ಹುದ್ದೆಗಳಿವೆ. ಇದರಲ್ಲಿ ಲೋಕೊ ಪೈಲೆಟ್ ಮತ್ತು ಟೆಕ್ನೀಶಿಯನ್ ಹುದ್ದೆಗಳನ್ನು ವಿಂಗಡಿಸಿ, ಪರಿಶಿಷ್ಟರು, ಅಂಗವಿಕಲರು, ಸಾಮಾನ್ಯರಿಗೆ ಹುದ್ದೆಗಳನ್ನು ನೀಡಲಾಗುತ್ತದೆ.
Related Articles
ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಯ ವಯೋಮಿತಿ ಜ.7 ಕ್ಕೆ ಅನುಗುಣವಾಗಿ 18-28 ವರ್ಷ ಆಗಿರಬೇಕು. ಎಸ್ಸಿ, ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷ, ಅಂಗವಿಕಲರಿಗೆ 3 ವರ್ಷ ವಯೋಮಿತಿಯಲ್ಲಿ ಸಡಿಲಿಕೆಯಿದೆ.
Advertisement
ಇನ್ನು ಲೋಕೊ ಪೈಲೆಟ…, ಟೆಕ್ನೀಶಿಯನ್ ಹುದ್ದೆಗಳಲ್ಲಿ ಕಾಯಿಲ… ವೆಂಡರ್, ಎಲೆಕ್ಟ್ರಿಶಿಯನ್, ಮೆಕಾನಿಕಲ… ಇತ್ಯಾದಿ ಅನೇಕ ವಿಭಾಗಗಳಿಗೆ ಹುದ್ದೆಯಲ್ಲಿ ಅವಕಾಶ ನೀಡಲಾಗಿದೆ. ಈ ಹುದ್ದೆಗಳನ್ನು ಬಯಸುವವರು ಪ್ರಮಾಣೀಕೃತ ವಿದ್ಯಾಸಂಸ್ಥೆಗಳಿಂದ ಐಟಿಐ ಪದವಿ ಪಡೆದಿರಬೇಕು. ನಿರ್ದಿಷ್ಟ ಹುದ್ದೆ ಆಯ್ಕೆ ಮಾಡಿಕೊಳ್ಳುವ ಅಭ್ಯರ್ಥಿಗಳು ಆಯಾ ವಿಷಯಗಳಲ್ಲಿ ಡಿಪೊÉàಮಾ ಅಥವಾ ಎಂಜಿನಿಯರಿಂಗ್ ಮಾಡಿದ್ದರೆ ಹುದ್ದೆ ಪಡೆಯಲು ಅನುಕೂಲ.
ಆಯ್ಕೆ ಪ್ರಕ್ರಿಯೆಅಭ್ಯರ್ಥಿಗಳ ಆಯ್ಕೆ ಪರೀಕ್ಷೆಯ ಮುಖಾಂತರವೇ ನಡೆಯುತ್ತದೆ. ಪರೀಕ್ಷೆಯು ಎರಡು ಹಂತದಲ್ಲಿ ನಡೆಯಲಿದ್ದು, ಮೊದಲನೇ ಸಿಬಿಟಿ ಹಂತದಲ್ಲಿ ಗಣಿತ, ವಿಜ್ಞಾನ, ಸಾಮಾನ್ಯಜ್ಞಾನ ಸಂಬಂಧಿತ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಮೊದಲ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದವರಿಗೆ ಎರಡನೇ ಹಂತದ ಸಿಬಿಟಿ ಪರೀಕ್ಷೆಯಲ್ಲಿ ಪಾಲ್ಗೊಳ್ಳಲು ಅವಕಾಶ ಸಿಗುತ್ತದೆ. ಇಲ್ಲಿ ಎರಡು ಪರೀಕ್ಷೆ ನಡೆಯುತ್ತದೆ. ಮೊದಲು 100 ಅಂಕಗಳಿಗೆ ಲಿಖೀತ ಪರೀಕ್ಷೆ ಬಳಿಕ ಗಣಕ ಜ್ಞಾನ ಸಂಬಂಧಿತ ಪರೀಕ್ಷೆ ನಡೆಯುತ್ತದೆ. ಪರೀಕ್ಷೆಯಲ್ಲಿ 1/3 ನಕಾರಾತ್ಮಕ ಅಂಕಗಳನ್ನು ತೆಗೆಯಲಾಗುತ್ತದೆ. ದೈಹಿಕ ಸಾಮರ್ಥ್ಯ ಮತ್ತು ನೇತ್ರದೃಷ್ಟಿಯ ಪರೀಕ್ಷೆ ಮಾಡುವುದುಂಟು. ಜೊತೆಗೆ ಅಗತ್ಯ ದಾಖಲೆಗಳ ಪರಿಶೀಲನೆಯನ್ನೂ ನಡೆಸಲಾಗುತ್ತದೆ. ಅರ್ಜಿ ಸಲ್ಲಿಕೆ ಹೇಗೆ
ಅಭ್ಯರ್ಥಿ ಆನ್‌ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕಾಗಿದ್ದು, ದೇಶವ್ಯಾಪಿ ಅರ್ಜಿಗಳನ್ನು ಆಹ್ವಾನಿಸಿರುವುದರಿಂದ ಆಯಾ ವಿಭಾಗದ ಜಾಲ ತಾಣದಲ್ಲೇ ಅರ್ಜಿ ಸಲ್ಲಿಸಬಹುದಾಗಿದೆ. ಬೆಂಗಳೂರಿನಿಂದ ಅರ್ಜಿ ಸಲ್ಲಿಸಲು www.rrbbnc.gov.in ವೀಕ್ಷಿಸಬೇಕಾಗಿದ್ದು, ಅರ್ಜಿ ಸಲ್ಲಿಸುವ ಮುನ್ನ ಅಗತ್ಯ ದಾಖಲೆಗಳ ಸಾ±r… ಕಾಪಿಯನ್ನು( ಅಂಕಪಟ್ಟಿ, ಭಾವಚಿತ್ರ, ಸಹಿ ಇತ್ಯಾದಿ) ಒಂದೆಡೆ ಸಂಗ್ರಹಿಸಿಟ್ಟುಕೊಳ್ಳುವುದು ಉತ್ತಮ. ಅರ್ಜಿಸಲ್ಲಿಕೆಗೆ goo.gl/WWR5Lm ಲಾಗ್ ಆನ್ ಆಗಿ. ಅರ್ಜಿಶುಲ್ಕ ಸಾಮಾನ್ಯರಿಗೆ 500 ರೂ. ಪರಿಶಿಷ್ಟರಿಗೆ 250 ರೂ. ಇದೆ. ಅರ್ಜಿ ಸಲ್ಲಿಸಲು ಮಾ.5 ಕಡೆಯ ದಿನ. ಹೆಚ್ಚಿನ ಮಾಹಿತಿಗೆ 080- 23330378, 080- 23334147 ಸಂಪರ್ಕಿಸಿ. – ಎನ್. ಅನಂತನಾಗ್