ಪ್ರಯಾಗ್‌ರಾಜ್/ಲಕ್ನೋ: ಯಾವುದೇ ಜಾತಿ ಅಥವಾ ಧರ್ಮದವರಿಗೆ ತಮ್ಮ ಜೀವನ ಸಂಗಾತಿ ಆಯ್ಕೆ ಮಾಡುವ ಹಕ್ಕು ಇದೆ. ಅದು ಸಂವಿಧಾನದಲ್ಲಿ ಉಲ್ಲೇಖವಾಗಿರುವ ಜೀವಿಸುವ ಹಕ್ಕು ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಭಾಗವೇ ಆಗಿದೆ ಎಂದು ಅಲಹಾಬಾದ್ ಹೈಕೋರ್ಟ್ ಹೇಳಿದೆ.
ಮುಸ್ಲಿಂ ಸಮುದಾಯದ ಸಲಾಮತ್ ಅನ್ಸಾರಿ ಮತ್ತು ಹಿಂದೂ ಸಮುದಾಯದ ಯುವತಿ ಪ್ರಿಯಾಂಕ ಖರ್ವಾರ್ ಅವರ ವಿವಾಹ ಪ್ರಕರಣಕ್ಕೆ ಸಂಬಂಧಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ವೇಳೆ ಈ ಅಭಿಪ್ರಾಯ ವ್ಯಕ್ತವಾಗಿದೆ. ಪ್ರಿಯಾಂಕಾ ಅವರ ಹೆತ್ತವರು ಅದಕ್ಕೆ ಆಕ್ಷೇಪ ಸಲ್ಲಿಸಿ ಕೋರ್ಟ್‌ಗೆ ಅರಿಕೆ ಮಾಡಿದ್ದರು.
“ಪ್ರಿಯಾಂಕಾ ಖರ್ವಾರ್ ಮತ್ತು ಸಲಾಮತ್ ಹಿಂದೂ ಅಥವಾ ಮುಸ್ಲಿಂ ಸಮುದಾಯಕ್ಕೆ ಸೇರಿದವರೋ ಎಂದು ನ್ಯಾಯಪೀಠ ಗಮನಿಸುವುದಿಲ್ಲ. ಅವರಿಬ್ಬರೂ ಪ್ರಾಪ್ತ ವಯಸ್ಕರಾಗಿರುವ ಕಾರಣ ಜೀವನ ಸಂಗಾತಿಯನ್ನು ಆಯ್ಕೆ ಮಾಡಲು ಅವಕಾಶವಿದೆ. ಅದಕ್ಕೆ ಧಕ್ಕೆಯಾದರೆ ಸಂವಿಧಾನದ 21ನೇ ವಿಧಿಯಲ್ಲಿ ಉಲ್ಲೇಖಗೊಂಡ ವೈಯಕ್ತಿಕ ಸ್ವಾತಂತ್ರ್ಯ ಮತ್ತು ಜೀವಿಸುವ ಹಕ್ಕಿಗೇ ಧಕ್ಕೆ ಬಂದಂತೆ ಆಗುತ್ತದೆ’ ಎಂದು ನ್ಯಾಯಪೀಠ ಹೇಳಿದೆ.
ಇದನ್ನೂ ಓದಿ:400 ಕಿಮೀ ಗುರಿ ಛೇದಿಸುವ ಬ್ರಹ್ಮೋಸ್ ಪರೀಕ್ಷೆ ಯಶಸ್ವಿ
ಕೇವಲ ಮದುವೆಯಾಗುವುದಕ್ಕೇ ಮತಾಂತರಗೊಳಿಸಲಾಗುತ್ತದೆ ಎಂದು 2014 ಮತ್ತು ಅ.31ರಂದು ನೀಡಿದ್ದ ತೀರ್ಪಿಗೆ ಇದು ವ್ಯತಿರಿಕ್ತವಾಗಿದೆ.
ಇದೇ ವೇಳೆ ಮಂಗಳವಾರ ಉ.ಪ್ರ. ಸಚಿವ ಸಂಪುಟ ಮದುವೆಗಾಗಿ ಮತಾಂತರ ನಿಷೇಧಿಸುವ ಸುಗ್ರೀವಾಜ್ಞೆ ಜಾರಿ ಬಗ್ಗೆ ಸಮ್ಮತಿ ನೀಡಿದೆ.