Advertisement

ಪುಂಡಾಟಿಕೆ ಮೆರೆದರೆ ಮುಲಾಜಿಲ್ಲದೇ ಸೂಕ್ತ ಕ್ರಮ

01:13 PM Feb 15, 2022 | Team Udayavani |

ಆಳಂದ: ಶಾಂತಿ ಸುವ್ಯವಸ್ಥೆ ಕಾಪಾಡುವುದು ನಾಗರಿಕರ ಕರ್ತವ್ಯವಾಗಿದೆ. ಇಷ್ಟಾಗಿಯೂ ಕ್ಷುಲಕ ಕಾರಣ ಮುಂದೆ ಮಾಡುವುದಾಗಲಿ ಶಾಲೆ, ಕಾಲೇಜುಗಳ ಮುಂದೆ ಹಿಜಾಬ್‌, ಕೇಸರಿ ಶಾಲು ವಿಷಯದಲ್ಲಿ ಪುಂಡಾಟಿಕೆ ಮೆರೆದರೆ ಯಾವುದೇ ಮುಲಾಜಿಲ್ಲದೇ ಪ್ರಕರಣ ದಾಖಲು ಮಾಡಲಾಗುವುದು ಎಂದು ಸ್ಥಳೀಯ ಡಿವೈಎಸ್‌ಪಿ ರವೀಂದ್ರ ಶಿರೂರ ಅವರು ಎಚ್ಚರಿಸಿದರು.

Advertisement

ಪಟ್ಟಣದ ಪೊಲೀಸ್‌ ಠಾಣೆ ಆವರಣದಲ್ಲಿ ಕರೆದ ನಾಗರಿಕ ಶಾಂತಿ ಸಮಿತಿ ಸಭೆ ಹಾಗೂ ದಲಿತ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಂವಿಧಾನದಡಿ ಬದುಕಬೇಕಾಗಿದೆ. ಅದನ್ನು ಮೀರಿ ನಡೆಯಬಾರದು. ಮತ್ತೂಬ್ಬರ ಹಕ್ಕುಗಳಿಗೆ ಧಕ್ಕೆ ತರುವಂತಹ ಕೆಲಸ ಆಗಬಾರದು. ಮೊದಲು ದೇಶ ದೇಶವಿದ್ದರೆ ನಾವು ನೀವು, ಸ್ವಾರ್ಥಕ್ಕಾಗಿ ಜಾತಿ ಧರ್ಮದ ಆಧಾರದ ಮೇಲೆ ದೇಶ ಒಡೆಯುವುದು ಸಲ್ಲ. ಯಾವುದೇ ಧರ್ಮವು ಹಿಂಸೆಯನ್ನು ಮಾಡುವಂತೆ ಹೇಳುವುದಿಲ್ಲ. ಮಾನವೀಯತೆ ಮತ್ತು ಏಕತೆ ಕಾಪಾಡುವಂತೆ ಬೋಧಿಸಿವೆ. ಮಾನವೀಯತೆ ಮತ್ತೆ ಏಕತೆ ಕಟ್ಟುವರ ಕಡೆಗೆ ಇರಬೇಕು ಹೊರತು ಅದನ್ನು ಕೆಡವಲು ಪ್ರಯತ್ನಿಸುವ ಮನಸ್ಸುಗಳ ಕಡೆಗೆ ತಿರುಗಬಾರದು. ಶಿಕ್ಷಕರು ಎಂದರೆ ದೇಶವನ್ನು ಕಟ್ಟುವವರು ಅವರು ಮನಸ್ಸು ಮಾಡಿದರೆ ಏನೆಯಲ್ಲ ಮಾಡಬಲ್ಲರು ಗುರುವಿನ ಸ್ಥಾನ ದೊಡ್ಡದು ಅದನ್ನು ಗೌರವಿಸುವ ಕೆಲಸ ಆಗಬೇಕು. ಜಾತಿ ನಿಂದನೆ ಪ್ರಕರಣ ದಾಖಲಾದಾಗ ಅನ್ಯಾಯ ಆದವರಿಗೆ ಸರ್ಕಾರದ ಪರಿಹಾರ ನೀಡಲಾಗಿದೆ. ಜಗಳಗಳು ಮಾಡದಂತೆ ಎಲ್ಲ ಮುಖಂಡರು ಸೇರಿ ರಾಜಿಸಂಧಾನ ಪಂಚಾಯಿತಿ ನಡೆಸಿದರೆ ವಾತಾವರಣ ತಿಳಿಗೊಳ್ಳಲು ಸಾಧ್ಯವಾಗುತ್ತದೆ ಎಂದರು.

ಸಿಪಿಐ ಮಂಜುನಾಥ ಮಾತನಾಡಿ, ಶಾಂತಿ ಸೌಹಾರ್ದತೆಗೆ ಇನ್ನೊಂದು ಹೆಸರು ಆಳಂದ ಆಗಿದೆ. ಎಲ್ಲರೂ ಪರಸ್ಪರ ಸ್ನೇಹಬಾಂಧವ್ಯದೊಂದಿಗೆ ಶಾಂತಿ ಸುವ್ಯವಸ್ಥೆ ಕಾಪಾಡುವ ಮೂಲಕ ಕಾನೂನು ಪಾಲಿಸಬೇಕು ಎಂದರು.

ಪುರಸಭೆ ಸದಸ್ಯ ಶಿವಪುತ್ರ ನಡಗೇರಿ, ಫಿರದೋಷ ಅನ್ಸಾರಿ, ಅಮಜದಲಿ ಕರಜಗಿ, ಮುಖಂಡ ಪ್ರಕಾಶ ಮೂಲಭಾರತಿ, ದಯಾನಂದ ಶೇರಿಕಾರ, ಧರ್ಮಾ ಬಂಗರಗಿ, ಮಲ್ಲಿಕಾರ್ಜುನ ಬೋಳಣಿ, ಖಲೀಲ ಅನ್ಸಾರಿ, ದಸ್ತಗೀರ ಗೌರ, ಪರಮೇಶ್ವರ ಖೋಂಬಿನ, ರಾಘವೇಂದ್ರ ಹಿರೋಳಿ, ಸೂರ್ಯಕಾಂತ ತಟ್ಟೆ, ಮೋಹಿಜ ಕಾರಬಾರಿ, ದತ್ತಾತ್ರೇಯ ಅಟ್ಟೂರ ಭಾಗವಹಿಸಿ ಮಾತನಾಡಿ, ತಾಲೂಕಿನಲ್ಲಿ ಜಗಳಗಳು ಆದಾಗ ಯಾವುದೇ ಜನಪತ್ರಿನಿಧಿಗಳ ಮಾತು ಕೇಳಿ ಪ್ರಕರಣ ದಾಖಲಿಸುವುದು, ಕೈಬಿಡುವುದು ಮಾಡಬೇಡಿ. ಅನ್ಯಾಯವಾದಾಗ ನ್ಯಾಯ ನೀಡಿ ತಪ್ಪಿಸ್ಥರಿಗೆ ಶಿಕ್ಷೆಯಾಗಲಿ. ಇದನ್ನು ಬಿಟ್ಟು ತಾರತಮ್ಯ ನೀತಿ ಅನುಸರಿಸಬೇಡಿ ಎಂದು ಒತ್ತಾಯಿಸಿದರು.

Advertisement

ನರೋಣಾ ಪಿಎಸ್‌ಐ ವಾತ್ಸಲ್ಯ, ಮಾದನಹಿಪ್ಪರಗಾ ಪಿಎಸ್‌ಐ ಮಲ್ಲಣ್ಣ ಯಲಗೊಂಡ, ಭಗವಂತರಾಯ ಶಾಂತಿ ಸಭೆ, ದಲಿತ ದಿನಾಚರಣೆ ಉದ್ದೇಶಿಸಿ ಮಾತನಾಡಿದರು. ಮುಖಂಡ ಶ್ರೀಶೈಲ್‌ ಖಜೂರಿ, ಆಸೀಫ ಅನ್ಸಾರಿ, ಲಕ್ಷ್ಮಣ ಝಳಕಿ, ಸಂಜಯ ನಾಯಕ, ಸೀತಾರಾಮ ಜಮಾದಾರ, ಶೇಖರಗೌಡ ಪಾಟೀಲ್‌, ಸರಣು ನರೋಣಿ, ಸತ್ತಾರ ಮುರುಮಕರ್‌, ಸುಲೇಮಾನ್‌ ಮುಗುಟ, ಗುಲಾಮಹುಸೇನ ಟಪ್ಪೆವಾಲೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next