Advertisement
ಸುಬ್ರಹ್ಮಣ್ಯ ಅರಣ್ಯ ವಿಭಾಗ ಅರಣ್ಯ ವ್ಯಾಪ್ತಿಯ ಕೆಲವು ಕಡೆಗಳಲ್ಲಿ ಚಿರತೆ ದಾಳಿ ಪ್ರಕರಣಗಳು ನಡೆದಿವೆ. ಸುಬ್ರಹ್ಮಣ್ಯ, ಕೈಕಂಬ ಬಾಳುಗೋಡು, ಹರಿಹರ, ದೇವಚಳ್ಳ, ಮಡಪ್ಪಾಡಿ, ಕಲ್ಮಕಾರು, ಕೊಲ್ಲಮೊಗ್ರು, ಐನಕಿದು ಈ ಜನವಸತಿ ಪ್ರದೇಶಗಳಲ್ಲಿ ವಾಸವಿದ್ದು, ಕೃಷಿ ಚಟುವಟಿಕೆ ನಡೆಸುತ್ತಿರುವ ಮನೆಗಳಲ್ಲಿ ಕೃಷಿಕರು ಸಾಕಿದ ನಾಯಿ, ಬೆಕ್ಕುಗಳ ಮೇಲೆ ಚಿರತೆಗಳು ದಾಳಿ ನಡೆಸಿವೆ. ಕೃಷಿಕರ ಮನೆಯ ಸಾಕು ಪ್ರಾಣಿಗಳು ಚಿರತೆಗೆ ಆಹಾರವಾಗುತ್ತಿವೆ. ಹೀಗಿದ್ದು ಇದುವರೆಗೆ ಮನೆಯವರು ಅರಣ್ಯ ಇಲಾಖೆಗೆ ದೂರು ನೀಡಿಲ್ಲ. ಮನೆಯಲ್ಲಿ ಕಟ್ಟಿ ಹಾಕಿದ ಸ್ಥಳದಿಂದಲೇ ರಾತ್ರಿ ಹೊತ್ತು ಹೊಂಚು ಹಾಕಿ ದಾಳಿ ನಡೆಸುತ್ತಿರುವುದಾಗಿ ಮನೆಯ ಸಂತ್ರಸ್ತ ಮಂದಿ ಹೇಳುತ್ತಿದ್ದಾರೆ.
ಚಿರತೆ ದಾಳಿ ಪ್ರಕರಣದಿಂದ ಈ ಭಾಗದಲ್ಲಿ ಭೀತಿಯ ವಾತಾವರಣ ನಿರ್ಮಾಣವಾಗಿದೆ. ಇಲ್ಲಿ ತನಕ ಕಾಡಾನೆಗಳ ಅಲ್ಲಲ್ಲಿ ಪ್ರತ್ಯಕ್ಷವಾಗಿ, ಭಯದ ವಾತಾವರಣ ನಿರ್ಮಿಸಿದ್ದವು. ಆನೆಗಳ ದಾಳಿಯಿಂದ ಚೇತರಿಸಿಕೊಳ್ಳುವ ಮೊದಲೇ ಚಿರತೆ ದಾಳಿ ಈ ಭಾಗದ ಜನರನ್ನು ಇನ್ನಷ್ಟು ಆಂತಕಕ್ಕೆ ಒಡ್ಡಿದೆ. ಗೂಡು ನಿರ್ಮಾಣ
ದೇವಚಳ್ಳ ಗ್ರಾಮದ ದೊಡ್ಡಕಜೆ ಪರಿಸರದ ನಿವಾಸಿಗಳ ಪ್ರತಿ ಮನೆಯ ನಾಯಿಗಳು ಕೂಡ ಚಿರತೆಗೆ ಬಲಿಯಾಗಿವೆ. ಸಂಜೆ 4ರ ಬಳಿಕ ಈ ಭಾಗದಲ್ಲಿ ಚಿರತೆಗಳು ದಾಳಿ ನಡೆಸಲು ಶುರು ಮಾಡುತ್ತವೆ. ಹೀಗಾಗಿ ಈ ಭಾಗದ ಪ್ರತಿ ಮನೆಯಲ್ಲಿ ಸಾಕು ನಾಯಿಗಳಿಗೆ ಗೂಡು ನಿರ್ಮಿಸಿಕೊಂಡಿದ್ದಾರೆ. ಚಿರತೆಗಳು ನಾಡಿಗೆ ದಾಳಿ ಇಡುವುದಷ್ಟೆ ಭೀತಿ ಅಲ್ಲ, ಅರಣ್ಯದಂಚಿನ ವಾಸಿಗಳು ಕಾಡಿಗೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ. ಕಟ್ಟಿಗೆ, ಸೊಪ್ಪು ಇತ್ಯಾದಿಗಳ ಸಂಗ್ರಹಕ್ಕೆ ಕೃಷಿಕರು ಕಾಡಿಗೆ ತೆರಳಲು ಭಯಕಾಡಲಾರಂಭಿಸಿದೆ. ದನಕರುಗಳನ್ನು ಮೇಯಲು ಕಾಡಿಗೆ ಬಿಡುವಂತಿಲ್ಲ.
Related Articles
ಕೃಷಿ ಉತ್ಪನ್ನ ಹಾಳುಗೆಡುತ್ತಿರುವ ಕಾಡುಪ್ರಾಣಿಗಳು ನಿದ್ದೆಕೆಡಿಸಿದೆ. ಮಳೆಯ ಆಗಮನದಿಂದ ಹಸಿರಾಗಿದ್ದ ಫಸಲನ್ನು ರಕ್ಷಿಸುವ ಜವಬ್ದಾರಿ ಒಂದೆಡೆಯಾದರೆ, ಚಿರತೆಗಳು ಜೀವ ಭಯವನ್ನು ಹುಟ್ಟುಹಾಕಿವೆ.
Advertisement
ತಟ್ಟಿದ ನೀತಿ ಸಂಹಿತೆ ಬಿಸಿದಾಳಿ ಮಾಡುವ ಚಿರತೆ ಹಾಗೂ ಇತರೆ ಕಾಡು ಪ್ರಾಣಿಗಳನ್ನು ಬೆದರಿಸಿ ರಕ್ಷಣೆ ಪಡೆಯುವ ಎಂದರೆ ಕೋವಿಗಳು ಕೂಡ ಇಲ್ಲ. ಚುನಾವಣೆ ಹಿನ್ನಲೆಯಲ್ಲಿ ಪರವಾನಿಗೆ ಪಡೆದ ಕೋವಿಗಳನ್ನು ರೈತರು ಠಾಣೆಗಳಲ್ಲಿ ಡೆಪಾಸಿಟ್ ಇರಿಸಿದ್ದಾರೆ. ಕೋವಿಯನ್ನು ಹೊರತುಪಡಿಸಿ ಇತರೆ ಓಡಿಸುವ ತಂತ್ರಗಳಿಗೆ ಕಾಡು ಪ್ರಾಣಿಗಳು ಬಗ್ಗುತ್ತಿಲ್ಲ. ಹೀಗಾಗಿ ಬೆದರಿಸಿ ಓಡಿಸಿ ಫಸಲು ಮತ್ತು ಜೀವ ರಕ್ಷಣೆ ಮಾಡುವ ಎಂದರೆ ಅದು ಕೂಡ ಈಗಿನ ಸ್ಥಿತಿಯಲ್ಲಿ ಸಾಧ್ಯವಾಗುತ್ತಿಲ್ಲ. ಹೀಗಾಗಿ ರಕ್ಷಣೆಗೆ ಯಾವುದೇ ಪರಿಕರ ಇಲ್ಲದೆ ಕೈ ಚೆಲ್ಲಿ ಕುಳಿತುಕೊಳ್ಳುವ ಸರದಿ ಕಾಡಿನಂಚಿನ ರೈತರದ್ದಾಗಿದೆ. ದೂರು ಬಂದಿಲ್ಲ
ಈ ಭಾಗದ ಅರಣ್ಯಗಳಲ್ಲಿ ಚಿರತೆಗಳು ಇರುವ ಸಾಧ್ಯತೆ ಹೆಚ್ಚಿವೆ. ಚಿರತೆಗಳಿಂದ ತೊಂದರೆ ಇರುವ ಕುರಿತು ಈವರೆಗೆ ಕೃಷಿಕರು ಯಾರೂ ಅಧಿಕೃತವಾಗಿ ದೂರು ಕೊಟ್ಟಿಲ್ಲ. ಚಿರತೆಗಳು ಇಲ್ಲವೆನ್ನಲು ಬರುವುದಿಲ್ಲ. ದೂರು ಸಲ್ಲಿಸಿದಲ್ಲಿ ಈ ಕುರಿತು ಗಮನಹರಿಸಿ ಅಗತ್ಯ ಎಚ್ಚರಿಕೆ ವಹಿಸಲಾಗುವುದು.
– ತ್ಯಾಗರಾಜ್ ಎಚ್.ಎಸ್., RFO, ಸುಬ್ರಹ್ಮಣ್ಯ ವಿಭಾಗ ಸದ್ಯ ಕಂಡುಬಂದಿಲ್ಲ
ಸುಬ್ರಹ್ಮಣ್ಯ ಅರಣ್ಯ ವಿಭಾಗದಲ್ಲಿ ಕಳೆದ ವರ್ಷ ತಾನು ಕರ್ತವ್ಯ ನಿರ್ವಹಿಸುತ್ತಿದ್ದೆ. ಆ ವೇಳೆ ಚಿರತೆ ದಾಳಿ ಪ್ರಕರಣ ಕಂಡುಬಂದಿತ್ತು. ಇದೀಗ ಸುಳ್ಯ ಹಾಗೂ ಸುತ್ತಮುತ್ತಲ ಸರಹದ್ದಿನಲ್ಲಿ ಇದುವರೆಗೆ ಅವುಗಳ ಹಾವಳಿ ಕಂಡು ಬಂದಿಲ್ಲ.
– ಮಂಜುನಾಥ, RFO-ಸುಳ್ಯ — ಬಾಲಕೃಷ್ಣ ಭೀಮಗುಳಿ