Advertisement

ನಿಖೀಲ್ ಕುಮಾರ್ ಚಿತ್ರ ‘ರೈಡರ್‌’ ಗೆ ಪೈರಸಿ ಕಾಟ!

10:34 AM Dec 27, 2021 | Team Udayavani |

ನಿಖೀಲ್‌ ಕುಮಾರಸ್ವಾಮಿ ಅಭಿನಯದ “ರೈಡರ್‌’ ಚಿತ್ರ ಇದೇ ಡಿ. 24ಕ್ಕೆ ತೆರೆಗೆ ಬಂದಿರುವುದು ನಿಮಗೆ ಗೊತ್ತಿರಬಹುದು. ರಾಜ್ಯಾದ್ಯಂತ “ರೈಡರ್‌’ ಚಿತ್ರ ಬಿಡುಗಡೆಯಾದ ಬಹುತೇಕ ಎಲ್ಲ ಕೇಂದ್ರಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಇನ್ನು ಚಿತ್ರದ ನಾಯಕ ನಟ ನಿಖೀಲ್‌ ಕುಮಾರ್‌ ಕೂಡ ಚಿತ್ರತಂಡದ ಜೊತೆ ರಾಜ್ಯಾದ್ಯಂತ ಚಿತ್ರದ ಪ್ರಚಾರ ಕಾರ್ಯಗಳಲ್ಲಿ ಬಿಝಿಯಾಗಿ ದ್ದಾರೆ. ಇದರ ನಡುವೆಯೇ “ರೈಡರ್‌’ ಚಿತ್ರಕ್ಕೆ ಪೈರಸಿ ಕಾಟ ಎದುರಾಗಿದೆ.

Advertisement

ಹೌದು, “ರೈಡರ್‌’ ಚಿತ್ರ ಶುಕ್ರವಾರ ಬಿಡುಗಡೆಯಾಗಿದ್ದು, ಬಿಡುಗಡೆಯಾದ ಎರಡೇ ದಿನಕ್ಕೆ ಚಿತ್ರ ಆನ್‌ಲೈನ್‌ನಲ್ಲಿ ಸೋರಿಕೆಯಾಗಿದೆ. ಮರಾಠಿ ಹಾಗೂ ತಮಿಳು ರಾಕರ್ ಸೇರಿದಂತೆ ಹಲವು ವೆಬ್‌ಸೈಟ್‌ಗಳಲ್ಲಿ ಮತ್ತು ಟೆಲಿಗ್ರಾಂನಲ್ಲಿಯೂ “ರೈಡರ್‌’ ಸಿನಿಮಾವನ್ನು ಲೀಕ್‌ ಮಾಡಲಾಗಿದ್ದು, ಆನ್‌ಲೈನ್‌ನಲ್ಲಿ ಸಿನಿಮಾದ ಪೈರಸಿ ಕಾಪಿಗಳು ಹರಿದಾಡುತ್ತಿದೆ.

ಇದನ್ನೂ ಓದಿ:ಮೆಚ್ಚುವಂಥ ‘ರಚ್ಚು’ ಕಥೆ: ರಚಿತಾ-ಅಜೇಯ್‌ ಇಮೇಜ್‌ ಬದಲು..?

ಇನ್ನು ತಮ್ಮ “ರೈಡರ್‌’ ಸಿನಿಮಾ ಪೈರಸಿಯಾಗಿರುವುದರ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯಿಸಿರುವ ನಿಖೀಲ್‌ ಕುಮಾರ್‌, “ನಮ್ಮ “ರೈಡರ್‌’ ಚಿತ್ರ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಇದೀಗ ಕೆಲವು ಕಿಡಿಗೇಡಿಗಳು ನಮ್ಮ ಚಿತ್ರವನ್ನು ಪೈರಸಿ ಮಾಡಿದ್ದಾರೆ. ದಯವಿಟ್ಟು ಪೈರಸಿ ವಿಡಿಯೋವನ್ನು ನೋಡದೆ ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಿ. ಕನ್ನಡ ಚಿತ್ರರಂಗವನ್ನು ಉಳಿಸಿ, ಚಿತ್ರತಂಡವನ್ನು ಪ್ರೋತ್ಸಾಹಿಸಿ…’ ಎಂದು ಟ್ವೀಟ್‌ ಮೂಲಕ ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next