Advertisement
ಸದ್ಯ ಆಸ್ಟ್ರೇಲಿಯದ “ಬಿಗ್ ಬಾಶ್ ಲೀಗ್’ನಲ್ಲಿ ವೀಕ್ಷಕ ವಿವರಣೆಕಾರರಾಗಿರುವ ಪಾಟಿಂಗ್, ಮುಂಬರುವ ಐಪಿಎಲ್ ಕೋಚಿಂಗ್ ಜವಾಬ್ದಾರಿಯಿಂದ ಮುಕ್ತರಾಗಲಿದ್ದಾರೆ. ಅವರು ಯಾವುದೇ ಐಪಿಎಲ್ ತಂಡದ ತರಬೇತುದಾರನ ಜವಾಬ್ದಾರಿ ವಹಿಸುವುದಿಲ್ಲ ಎಂದು ವರದಿ ತಿಳಿಸಿದೆ.
ಐಪಿಎಲ್ ಆವೃತ್ತಿಯ ಆರಂಭದಲ್ಲಿ ರಿಕಿ ಪಾಂಟಿಂಗ್, ಕೋಲ್ಕತಾ ನೈಟ್ರೈಡರ್ ತಂಡವನ್ನು ಪ್ರತಿನಿಧಿಸಿದ್ದರು. ಅನಂತರ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸಿದ್ದರು. ಕಳೆದ ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ತರಬೇತುದಾರನಾಗಿದ್ದರು. 2018ರ ಐಪಿಎಲ್ ವೇಳೆ ಪಾಂಟಿಂಗ್, ಡೆಲ್ಲಿ ಡೇರ್ಡೆವಿಲ್ಸ್ ತಂಡದ ಕೋಚ್ ಆಗಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಇದೀಗ ಸುಳ್ಳಾಗಲಿದೆ. ಪಾಂಟಿಂಗ್ 2018ರ ಐಪಿಎಲ್ ಆವೃತ್ತಿಯಲ್ಲಿ ಮುಂದುವರಿಯುವ ನಿರೀಕ್ಷೆಗೆ ತೆರೆ ಬಿದ್ದಿದೆ.