Advertisement

ಈಜಿಪ್ಟ್ ನ ಅತೀ ಪ್ರಾಚೀನ, ಶ್ರೀಮಂತ ದೊರೆ ಚಿತ್ರ ಸಿದ್ಧ!

12:51 PM May 18, 2024 | Team Udayavani |

ಲಂಡನ್‌: ಭೂಮಿಯಲ್ಲಿ ಬದುಕಿದ್ದ ಅತೀ ಶ್ರೀಮಂತ ವ್ಯಕ್ತಿ ಎಂದು ಕರೆಸಿಕೊಂಡಿರುವ ಈಜಿಪ್ಟ್ ನ ಪ್ರಾಚೀನ ದೊರೆ ಅಮೆನ್‌ಹೋಟೆಪ್‌-3ಯ ಮುಖದ ಚಿತ್ರವನ್ನು ಸಂಶೋಧಕರ ತಂಡ ಸಿದ್ಧಪಡಿಸಿದೆ!

Advertisement

3400 ವರ್ಷಗಳಲ್ಲೇ ಮೊದಲ ಬಾರಿಗೆ, ಈಜಿಪ್ಟ್ನ ಅತ್ಯಂತ ಉದಾತ್ತ ದೊರೆ ಹೇಗಿದ್ದ ಎಂಬ ಕುತೂಹಲಗಳಿಗೆ ಸಂಶೋಧಕರ ತಂಡ ಉತ್ತರ ನೀಡಿದೆ. ಕ್ರಿಸ್ತಪೂರ್ವ 14ನೇ ಶತಮಾನಕ್ಕೆ ಸೇರಿದ್ದ ಅಮೆನ್‌ಹೋಟೆಪ್‌-3 ಈಜಿಪ್ಟ್ನ ದೊರೆ ಹಾಗೂ ಧಾರ್ಮಿಕ ಮುಖ್ಯ ಸ್ಥನೂ ಆಗಿದ್ದರು. ಅವರು ನೂರಾರು ದೇಗುಲಗಳನ್ನು ಕಟ್ಟಿಸಿ, ತಮ್ಮ ಕಾಲ ದಲ್ಲಾದ ಕೆಲಸಗಳ ಬಗ್ಗೆ ಶಾಸನಗಳನ್ನು ರಚಿಸಿದ್ದರು. ಅವರ ಹೆಸರಿನಲ್ಲಿ ಹಲವು ವಿಗ್ರಹಗಳು ಈಗಲೂ ಇವೆ. ಇವರ ಸಂರಕ್ಷಿತ ಶವ (ಮಮ್ಮಿ)ದ ತಲೆ ಬುರುಡೆ, ದೇಹದ ಇತರ ಭಾಗಗಳನ್ನು ನಿಕಟವಾಗಿ ಪರಿಶೀಲಿಸಿರುವ ತಂಡ ಅವರ ಮುಖದ ಚಿತ್ರ ಬಿಡಿಸಲು ಯಶಸ್ವಿಯಾಗಿದೆ.

ಬ್ರೆಜಿಲ್‌ನ ಖ್ಯಾತ ಗ್ರಾಫಿಕ್‌ ಡಿಸೈನರ್‌ ಸಿಸೆರೊ ಮೊರೇಸ್‌ ಈ ತಂಡದ ನೇತೃತ್ವ ವಹಿಸಿದ್ದರು. ಇದರೊಂದಿಗೆ ಸಾವಿ ರಾರು ವರ್ಷಗಳಿಂದ ಇದ್ದ ಕುತೂಹಲವೊಂದಕ್ಕೆ ಈ ತಂಡ ಉತ್ತರ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next