Advertisement

ಅಕ್ಕಿ ಹಿಟ್ಟಿನ ಬರ್ಫಿ

10:36 AM Aug 07, 2017 | |

ಬೇಕಾದ ಸಾಮಗ್ರಿ:
250 ಗ್ರಾಂ ಅಕ್ಕಿ ಹಿಟ್ಟು, 150 ಗ್ರಾಂ ಸಕ್ಕರೆಪುಡಿ, 100 ಗ್ರಾಂ ತುಪ್ಪ, ಸ್ವಲ್ಪ ಹಾಲು, ಒಣ ದ್ರಾಕ್ಷಿ, ಗೋಡಂಬಿ, ಪಿಸ್ತಾ.

Advertisement

ತಯಾರಿಸುವ ವಿಧಾನ:
ಮೊದಲು ಬಾಣಲೆಯಲ್ಲಿ ತುಪ್ಪ ಹಾಕಿ ಬಿಸಿಮಾಡಿ. ಅದಕ್ಕೆ ಒಣದ್ರಾಕ್ಷಿ, ಗೋಡಂಬಿ, ಪಿಸ್ತಾ ಹಾಕಿ ಹುರಿದು ತೆಗೆಯಿರಿ. ನಂತರ ಇದೇ ಬಾಣಲೆಯಲ್ಲಿ ಅಕ್ಕಿ ಹಿಟ್ಟು ಹಾಕಿ ಹುರಿಯಿರಿ. ಇದನ್ನು ಒಂದು ಬೇಸನ್‌ಗೆ ಹಾಕಿ ಹುರಿದ ಅಕ್ಕಿ ಹಿಟ್ಟಿಗೆ ಸಕ್ಕರೆ ಪುಡಿ ಮತ್ತು ಹುರಿದುಕೊಂಡಿದ್ದ ಗೋಡಂಬಿ ಮತ್ತು ಪಿಸ್ತಾ ಹಾಕಿ. ಒಂದು ತಟ್ಟೆಯಲ್ಲಿ ಮಿಶ್ರಣವನ್ನು ಹರಡಿ ಬಿಸಿ ಇರುವಾಗಲೇ ಬೇಕಾದ ಆಕಾರಕ್ಕೆ ಕತ್ತರಿಸಿ. ಸ್ವಲ್ಪ ಸಮಯದ ಬಳಿಕ ಅಕ್ಕಿ ಹಿಟ್ಟಿನ ಬರ್ಫಿ ಸವಿಯಲು ಸಿದ್ಧ.

ಅನಿತಾ ಗಣೇಶ್‌, ದಾವಣಗೆರೆ

Advertisement

Udayavani is now on Telegram. Click here to join our channel and stay updated with the latest news.

Next