Advertisement

ರೈಸ್‌ ಟ್ರಾನ್ಸ್‌ ಪ್ಲಾಂಟರ್‌

06:01 PM Feb 16, 2020 | Sriram |

ಭತ್ತದ ಸಸಿಗಳನ್ನು ನಾಟಿ ಮಾಡಲು ಹಲವು ಜನರ ಸಹಾಯ ಬೇಕಾಗುತ್ತದೆ. ಅಲ್ಲದೆ, ಅದಕ್ಕೆ ಸಮಯವೂ ವ್ಯಯವಾಗುತ್ತದೆ. ಈ ವೆಚ್ಚವನ್ನು ಮತ್ತು ಸಮಯವನ್ನು ಉಳಿಸಲು ರೈಸ್‌ ಟ್ರಾನ್ಸ್‌ಪ್ಲಾಂಟರ್‌ ಯಂತ್ರದ ಆವಿಷ್ಕಾರವಾಗಿರುವುದು. ಇದರಲ್ಲಿ ಹಲವು ಬಗೆಗಳಿವೆ. ಮಾನವಚಾಲಿತ ಮತ್ತು ಸ್ವಯಂಚಾಲಿತ ರೈಸ್‌ ಟ್ರಾನ್ಸ್‌ಪ್ಲಾಂಟರ್‌.

Advertisement

ಈ ಯಂತ್ರಗಳನ್ನು ಹಲವು ವಿಧಗಳಲ್ಲಿ ವಿಂಗಡಿಸಬಹುದಾಗಿದೆ. ನಡೆದುಕೊಂಡು ತಳ್ಳುವುದು ಮತ್ತು ಕೂತುಕೊಂಡು ಸವಾರಿ ಮಾಡಬಹುದಾದ್ದು ಅವುಗಳಲ್ಲೊಂದು. ಇನ್ನು, ಏಕಕಾಲಕ್ಕೆ ಎಷ್ಟು ಸಾಲುಗಳಲ್ಲಿ ಭತ್ತದ ಸಸಿಯನ್ನು ನೆಡುತ್ತಾ ಹೋಗುತ್ತದೆ ಎನ್ನುವುದರ ಆಧಾರದಲ್ಲಿಯೂ ವಿಂಗಡಿಸಬಹುದು. ಎರಡು ಸಾಲು, ನಾಲ್ಕು ಸಾಲುಗಳಲ್ಲಿ ಸಸಿ ನೆಡುವ ಯಂತ್ರಗಳನ್ನು ಸಾಮಾನ್ಯವಾಗಿ ನೋಡಬಹುದಾಗಿದೆ. ಸಹಜವಾಗಿ ಹೆಚ್ಚಿನ ಗುಣಿಗಳಲ್ಲಿ ಸಸಿ ನೆಡುವ ವ್ಯವಸ್ಥೆಯಿರುವ ರೈಸ್‌ ಟ್ರಾನ್ಸ್‌ಪ್ಲಾಂಟರ್‌ಗಳಿಗೆ ಬೆಲೆ ಹೆಚ್ಚಿರುತ್ತದೆ. ಈ ಯಂತ್ರಗಳಲ್ಲಿ ಸಸಿಗಳ ಟ್ರೇಗಳನ್ನು ಇಡಲೆಂದು ಪ್ರತ್ಯೇಕ ಜಾಗವಿರುತ್ತದೆ. ಒಂದೊಂದು ಟ್ರೇನಲ್ಲೂ ಸಸಿಗಳ ದಂಡೇ ಇರುತ್ತದೆ. ಈ ಟ್ರೇಗಳಿಂದ ಯಂತ್ರದ ಕೈಗಳು ಸಸಿಗಳನ್ನು ಕಿತ್ತು ಕಿತ್ತು ನೆಡುತ್ತಾ ಹೋಗುತ್ತವೆ. ಟ್ರೇಯಲ್ಲಿ ಸಸಿಗಳು ಖಾಲಿಯಾಗುತ್ತಿದ್ದಂತೆ ಟ್ರೇಗಳನ್ನು ತುಂಬುತ್ತಾ ಇರಬೇಕು.

ವಿಡಿಯೋ ಲಿಂಕ್‌- bit.ly/31Icp10

Advertisement

Udayavani is now on Telegram. Click here to join our channel and stay updated with the latest news.

Next