Advertisement

ರೈಸ್ ಪುಲ್ಲಿಂಗ್ ವಂಚನೆ ಪ್ರಕರಣ: 6 ಮಂದಿ ಬಂಧನ

08:47 PM Sep 20, 2019 | Sriram |

ಚಿಕ್ಕಬಳ್ಳಾಪುರ: ಜಿಲ್ಲೆಯ ಚಿಂತಾಮಣಿ ತಾಲೂಕಿನಲ್ಲಿ ರೈಸ್ ಪುಲ್ಲಿಂಗ್ (ಹಣ ದ್ವಿಗುಣಗೊಳಿಸುವ ವಂಚನೆ) ದಂಧೆ ನಡೆಸಲು ತೆರಳಿದ್ದ ತಮಿಳುನಾಡು, ಬೆಂಗಳೂರು, ಕೋಲಾರ, ತುಮಕೂರು ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಸೇರಿದ ಆರು ಮಂದಿ ಆರೋಪಿಗಳನ್ನು ಜಿಲ್ಲೆಯ ಕೆಂಚಾರ್ಲಹಳ್ಳಿ ಗ್ರಾಮಾಂತರ ಠಾಣೆ ಪೊಲೀಸರು ಶುಕ್ರವಾರ ಸಂಜೆ ಬಂಧಿಸಿದ್ದಾರೆ.

Advertisement

ಬಂಧಿತರ ಪ್ರಮುಖ ಆರೋಪಿಯನ್ನು ತಮಿಳುನಾಡಿನ ಕೊಯಮತ್ತೂರು ಮೂಲದ ಇಂಜನಿಯರ್ ಆನಂದ ನಾಯ್ಡು ಹಾಗೂ ಬೆಂಗಳೂರಿನ ನೆಲಮಂಗಲ ಮೂಲದ ನರಸಿಂಹಮೂರ್ತಿ, ತುಮಕೂರು ಮೂಲದ ಗುಬ್ಬಿಯ ರಮೇಶ್, ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ನಾಗೇಂದ್ರ, ಚಿಂತಾಮಣಿ ತಾಲೂಕಿ ಮರವಪಲ್ಲಿ ನಿವಾಸಿ ರಾಮಪ್ಪ ಹಾಗೂ ಬೆಂಗಳೂರು ಉತ್ತರ ಜಿಲ್ಲೆಯ ನಿವಾಸಿ ಪುಟ್ಟಸ್ಚಾಮಿ ಎಂಬುವರನ್ನು ಪೊಲೀಸರು ಬಂಧಿಸಿ ವಿಚಾರಣೆಯನ್ನು ನಡೆಸುತ್ತಿದ್ದಾರೆ.

ಬಂಧಿತರಿಂದ 33೦3೦ ರೂಗಳನ್ನು ವಶಪಡಿಸಿಕೊಂಡಿದ್ದು, 10 ಮೊಬೈಲ್‌ ಗಳನ್ನು ವಶಪಡಿಸಿಕೊಂಡಿದ್ದಾರೆ.

ಹಣ ದ್ವಿಗುಣ ಗೊಳಿಸಲು ರೈಸ್ ಪುಲ್ಲಿಂಗ್ (ಚೆಂಬು)ಗೆ ಸಾಕಷ್ಟು ಶಕ್ತಿ ಇದೆಯೆಂದು ನಂಬಿಸಿ ಸಾರ್ವಜನಿಕರಿಂದ ಹಣ ದೋಚಲು ಬಂದಿದ್ದ ವೇಳೆ ಕೆಂಚಾರ್ಲಹಳ್ಳಿ ಠಾಣೆ ಪೊಲೀಸರು ಖಚಿತ ಮಾಹಿತಿ ಆದಾರಿಸಿ ದಾಳಿ ಮಾಡಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ ಎರಡು ರೈಸ್ ಪುಲ್ಲಿಂಗ್ ಚೆಂಬುಗಳನ್ನು ಸಹ ವಶಪಡಿಸಿಕೊಳ್ಳಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next