Advertisement
ಅಕ್ಕಿ ಮಿಲ್, ಹಿಟ್ಟಿನ ಗಿರಣಿ ಅಥವಾ ಬೇರೆ ಯಾವುದೇ ಕಾರ್ಖಾನೆಯಿರಬಹುದು, ಅಲ್ಲಿ ಮಹಿಳೆಯರು ಕೆಲಸ ಮಾಡುತ್ತಿರಬಹುದು. ಆದರೆ, ಮಾಲೀಕರು ಮಾತ್ರ ಗಂಡಸರೇ. ಯಾಕಂದ್ರೆ, “ಹೆಂಗಸೊಬ್ಬಳು ಕಾರ್ಖಾನೆ ನಡೆಸೋದು ಸುಲಭದ ಮಾತಲ್ಲ’ ಎಂಬ ಅಭಿಪ್ರಾಯವಿದೆ. “ಸುಲಭವಲ್ಲ, ಹಾಗಂತ ಕಷ್ಟವೂ ಅಲ್ಲ’ ಅನ್ನುತ್ತಿದ್ದಾರೆ ಸುಬ್ಬಲಕ್ಷ್ಮಿ. ಇವರು,
ಸುಬ್ಬಲಕ್ಷ್ಮಿ ಅವರು ಓದಿದ್ದು 10ನೇ ತರಗತಿ ಮಾತ್ರ. ಗಂಡನ ಮನೆಯಲ್ಲಿ ಆರ್ಥಿಕ ಪರಿಸ್ಥಿತಿ ಅಸ್ಥಿರವಾದಾಗ, ಅವರ ಜೀವನಕ್ಕೆ ದಾರಿ ತೋರಿಸಿದ್ದು ಅವಲಕ್ಕಿ ತಯಾರಿಕೆ. ಹತ್ತು ಸಾವಿರ ರೂ. ಬಂಡವಾಳ ಹಾಕಿ, ಅಗತ್ಯ ಸಾಮಗ್ರಿಗಳನ್ನು ಖರೀದಿಸಿ, ಚಿಕ್ಕ ಪ್ರಮಾಣದಲ್ಲಿ ಉತ್ಪಾದನೆ ಶುರುಮಾಡಿದರು. ಚಿಕ್ಕ ಚಿಕ್ಕ ಕಡಾಯಿಗಳಲ್ಲಿ ಮರಳಿನೊಂದಿಗೆ ಭತ್ತವನ್ನು ಹುರಿದು ಅವಲಕ್ಕಿ ತಯಾರಿಸತೊಡಗಿದರು. ನಂತರ, ಸ್ವತಃ ಮಾರುಕಟ್ಟೆಗೆ ತೆರಳಿ ಅವಲಕ್ಕಿ ಮಾರಾಟಕ್ಕೂ ಮುಂದಾದರು.
Related Articles
ಉತ್ಪಾದನೆ, ಮಾರಾಟ; ಎರಡರಲ್ಲೂ ಸುಬ್ಬಲಕ್ಷ್ಮಿ ಅವರು ಪರಿಶ್ರಮಪಟ್ಟರು. ಪ್ರತಿಫಲವಾಗಿ, ಅವರ ವ್ಯಾಪಾರ ದಿನದಿನಕ್ಕೂ ಹೆಚ್ಚತೊಡಗಿತು. ಪ್ರಾರಂಭದಲ್ಲಿ 10 ಚೀಲದಷ್ಟು ಅವಲಕ್ಕಿ ತಯಾರಿಸುತ್ತಿದ್ದ ಸುಬ್ಬಲಕ್ಷ್ಮಿ, ನಂತರ ಇಬ್ಬರು ಮಹಿಳೆಯರನ್ನು ಕೆಲಸಕ್ಕೆ ತೆಗೆದುಕೊಂಡು ಹೆಚ್ಚಿನ ಪ್ರಮಾಣದಲ್ಲಿ ಅವಲಕ್ಕಿ ತಯಾರಿಸತೊಡಗಿದರು. 2001ರಲ್ಲಿ ಚಿಕ್ಕ ಬಂಡವಾಳದಲ್ಲಿ ಕಾರ್ಖಾನೆ ಪ್ರಾರಂಭವಾಯಿತು. ಈಗ ಸಹಕಾರಿ ಸಂಘಗಳಿಂದ 50 ಲಕ್ಷ ರೂ. ಬಂಡವಾಳದ ನೆರವಿನಿಂದ ರೋಸ್ಟರ್, ರೋಲರ್, ಗ್ರೈಂಡಿಂಗ್ ಉಪಕರಣಗಳು ಮತ್ತು ಇಂಡಸ್ಟ್ರಿಯಲ್ ಎರಿಯಾದಲ್ಲಿ ಒಂದು ಎಕರೆ ಭೂಮಿ ಖರೀದಿಸಿ ದೊಡ್ಡ ಮಟ್ಟ ತಲುಪಿದೆ. ಈಗ ದಿನಕ್ಕೆ 150 ಚೀಲಗಳಷ್ಟು ಅವಲಕ್ಕಿ ತಯಾರಿಸುತ್ತಿದ್ದಾರೆ.
Advertisement
ಅವಲಕ್ಕಿ ಮಾಡುವ ವಿಧಾನಕೆಂಬಾವಿ, ಗಂಗಾವತಿ, ಬೆಳಗಾವಿ ಸುತ್ತಲಿನ ಊರುಗಳಿಂದ “”64-ಭತ್ತ” ಎಂಬ ದಪ್ಪ ಕಾಳಿನ ಭತ್ತ ಖರೀದಿಸುತ್ತಾರೆ. ನಂತರ, ನಿಗದಿತ ಉಷ್ಣಾಂಶದಲ್ಲಿ ಭತ್ತವನ್ನು ರಾತ್ರಿ ಇಡೀ ನೆನೆ ಹಾಕಿ, (ಕನಿಷ್ಠ 8 ಗಂಟೆ ಕಾಲ ಭತ್ತ ನೆನೆಯಬೇಕು) ಆಮೇಲೆ ಅದನ್ನು ರೋಸ್ಟರ್‌ನಲ್ಲಿ ಹುರಿದು ಮಾರಾಟ ಮಾಡುತ್ತಿದ್ದಾರೆ. ಇಲ್ಲಿಯವರೆಗೂ ಭತ್ತ ಮತ್ತು ರಾಗಿಯ ಅವಲಕ್ಕಿ (ಫ್ಲೇಕ್ಸ್) ತಯಾರಿಸುತ್ತಿದ್ದರು. ಈಗ ಜೋಳದ ಅವಲಕ್ಕಿ ತಯಾರಿಕೆಗೂ ಕೈ ಹಾಕಿದ್ದಾರೆ. ಈಗಾಗಲೇ, ಬೆಂಗಳೂರು ಮತ್ತು ತಂಜಾವೂರಿಗೆ ಜೋಳದ ಅವಲಕ್ಕಿಯ ಸ್ಯಾಂಪಲ್ ಅನ್ನೂ ಕಳಿಸಿದ್ದಾರೆ. ಒಂದು ಟನ್ ಅವಲಕ್ಕಿಯಿಂದ 15 ಸಾವಿರ ರೂ. ಲಾಭ ಪಡೆಯುವ ಸುಬ್ಬಲಕ್ಷ್ಮಿ, ಕಾರ್ಖಾನೆಯಲ್ಲಿ ಅನೇಕ ಮಹಿಳೆಯರಿಗೆ ಕೆಲಸ ಕೊಟ್ಟು ಮಾದರಿ ಉದ್ಯಮಿಯಾಗಿದ್ದಾರೆ. -ವಿದ್ಯಾಶ್ರೀ ಗಾಣಿಗೇರ