Advertisement

ಚರ್ಮದ ಆರೋಗ್ಯಕ್ಕೆ ಅಕ್ಕಿ ಹುಡಿ

10:23 PM Jul 29, 2019 | mahesh |

ಎಲ್ಲಒಂದಲ್ಲ ಒಂದು ಬಾರಿ ಕೆಲವೊಂದು ಚರ್ಮದ ಸಮಸ್ಯೆಯನ್ನು ಅನುಭವಿಸಿರುತ್ತೀರಿ. ಆರೋಗ್ಯಕರ ಚರ್ಮವನ್ನು ನಿರ್ವಹಿಸುವುದು ಸುಲಭದ ಕೆಲಸವಲ್ಲ. ಚರ್ಮದ ಕಾಳಜಿ ಅತೀ ಮುಖ್ಯ. ಇದಕ್ಕಾಗಿ ನೈಸರ್ಗಿಕ ವಸ್ತುಗಳನ್ನು ಬಳಸುವುದು ಹೆಚ್ಚು ಸೂಕ್ತ. ಚರ್ಮದ ಆರೋಗ್ಯಕ್ಕೆ ಮನೆಯ ಅಡುಗೆ ಮನೆಯಲ್ಲಿ ಲಭ್ಯವಿರುವ ಅಕ್ಕಿ ಹುಡಿ ಪರಿಣಾಮಕಾರಿಯಾಗಿದೆ.

Advertisement

ಬಳಕೆ ಹೇಗೆ?
·  ಮೊಡವೆಗೆ ಒಂದು ಸ್ಪೂನ್‌ ಅಕ್ಕಿ ಹುಡಿ, ಒಂದು ಸ್ಪೂನ್‌ ಅಲೋವೆರಾ ಜೆಲ್‌ ಹಾಗೂ ಒಂದು ಸ್ಪೂನ್‌ ಜೇನುತುಪ್ಪದ ಮಿಶ್ರಣವನ್ನು ಮುಖಕ್ಕೆ ಹಂಚಿ 20 ನಿಮಿಷಗಳ ಕಾಲ ಹಾಗೆ ಬಿಟ್ಟು ಅನಂತರ ತೊಳೆಯಿರಿ
·  ಕಪ್ಪುವರ್ತುಲಕ್ಕೆ ಒಂದು ಸ್ಪೂನ್‌ಅಕ್ಕಿ ಹುಡಿ, ಒಂದು ಸ್ಪೂನ್‌ ಹಿಚುಕಿದ ಬಾಳೆಹಣ್ಣು, ಹರಳೆಣ್ಣೆ ಮಿಕ್ಸ್‌ ಮಾಡಿ ಕಣ್ಣಿನ ಕೆಳಗಿನ ಭಾಗಕ್ಕೆ ಹಚ್ಚಿ. ಅದನ್ನು 30 ನಿಮಿಷ ಹಾಗೇ ಬಿಟ್ಟು ಬಳಿಕ ನೀರಿನಿಂದ ಮುಖ ತೊಳೆಯಿರಿ.
·  ಸನ್‌ಟ್ಯಾನ್‌ ಗೆ 2 ಸ್ಪೂನ್‌ ಅಕ್ಕಿ ಹುಡಿ, ಹಸಿ ಹಾಲನ್ನು ಹಾಕಿ ಪೇಸ್ಟ್‌ ತಯಾರಿಸಿಕೊಂಡ ಟ್ಯಾನ್‌ ಆದ ಜಾಗಗಳಿಗೆ ಹಾಕಿ 30 ನಿಮಿಷ ಬಿಟ್ಟುಬಿಡಿ.

ಅಕ್ಕಿ ಹುಡಿಯ ಪ್ರಯೋಜನಗಳು
·  ಮೊಡವೆಗಳ ವಿರುದ್ಧ ಹೋರಾಡುತ್ತದೆ.
·  ಚರ್ಮವನ್ನು ಮೃದುವಾಗಿಸುತ್ತದೆ.
·  ಮುಖಕ್ಕೆ ನೈಸರ್ಗಿಕ ಕಾಂತಿ ನೀಡುತ್ತದೆ
·  ಚರ್ಮದ ಟೋನ್‌ ಅನ್ನು ಕಡಿಮೆಗೊಳಿಸುತ್ತದೆ
·  ಕಪ್ಪು ವರ್ತುಲಗಳನ್ನು ಕಾಣದಂತೆ ಮಾಡುತ್ತದೆ.
·  ಸೂರ್ಯಕಿರಣಗಳಿಂದ ಉಂಟಾದ ಸನ್‌ಟಾನ್‌ ಅನ್ನು ಕಡಿಮೆಗೊಳಿಸುತ್ತದೆ.

ಅಕ್ಕಿ ಹುಡಿ ಚರ್ಮವನ್ನು ಮೃದುವಾಗಿಸುತ್ತದೆ. ಚರ್ಮದ ಜಲಸಂಚಯವನ್ನು ಸುಧಾರಿಸುತ್ತದೆ. ಸೂರ್ಯ ಹಾನಿಕಾರಕ ಕಿರಣಗಳಿಂದ ಚರ್ಮ ವನ್ನು ರಕ್ಷಿಸುವ ಫೆರುಲಿಕ್‌ ಆಮ್ಲವನ್ನು ಅಕ್ಕಿ ಹುಡಿ ಹೊಂದಿದೆ.

-  ಆರ್‌.ಕೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next