Advertisement

ಇಂಡೋನೇಷ್ಯಾದಲ್ಲಿ ಎಟಿಎಂನಲ್ಲಿ ಸಿಗುತ್ತದೆ ಅಕ್ಕಿ

06:04 PM May 14, 2020 | sudhir |

ಮಣಿಪಾಲ : ಕೆಲವು ಬಡ ರಾಷ್ಟ್ರಗಳ ಮೇಲೆ ಕೋವಿಡ್ ಬೀರಿದ ಪರಿಣಾಮ ಅಪಾರ. ಇಲ್ಲಿ ಚಿಕಿತ್ಸೆಗಿಂತಲೂ ಜನರಿಗೆ ಹೊಟ್ಟೆ ತುಂಬ ಊಟ ಸಿಗದಿರುವುದೇ ದೊಡ್ಡ ಸಮಸ್ಯೆ. ಇಂಥ ದೇಶಗಳ ಪೈಕಿ ಇಂಡೋನೇಷ್ಯಾವೂ ಇದೆ. ಹಾಗೆಂದು ಕೈಕಟ್ಟಿ ಕುಳಿತುಕೊಳ್ಳದ ಅಧಿಕಾರಿಗಳು ಹಸಿವಿನಿಂದ ಬಳಲುತ್ತಿರುವ ಕುಟುಂಬಗಳಿಗೆ ಆಹಾರ ಹಂಚಲು ವಿಭಿನ್ನ ಮಾರ್ಗವನ್ನು ಕಂಡುಕೊಂಡಿದ್ದಾರೆ.

Advertisement

ಹೌದು 14,000ಕ್ಕೂ ಹೆಚ್ಚು ಸೋಂಕಿತ ಇರುವ ಇಂಡೋನೇಷ್ಯಾದಲ್ಲಿ ಈಗಾಗಲೇ ಸುಮಾರು 1,000 ಮಂದಿ ಬಲಿಯಾಗಿದ್ದಾರೆ. ಚೀನದ ಪೂರ್ವ ಏಷ್ಯಾ ಭಾಗದಲೇ ಅತಿ ಹೆಚ್ಚಿನ ಸಾವಿನ ಪ್ರಮಾಣವನ್ನು ಹೊಂದಿರುವ ಈ ರಾಷ್ಟ್ರ ಸೋಂಕು ನಿಯಂತ್ರಣಕ್ಕಾಗಿ ವ್ಯಾಪಾರ ವಹಿವಾಟನ್ನು ಬಂದ್‌ ಮಾಡಿದ ಕಾರಣ ಅನೇಕ ಮಂದಿ ನಿರುದ್ಯೋಗಿಗಳಾಗಿದ್ದಾರೆ.ಅವರ ಕುಟುಂಬಗಳು ಹಸಿವಿನಿಂದ ಕಂಗೆಟ್ಟಿವೆ.

ಅಕ್ಕಿ ವಿತರಣೆಗೆ ಎಟಿಎಂ
ಆದಾಯವಿಲ್ಲದ ಜನರಿಗೆ ಅಧಿಕಾರಿಗಳು ಸಹಾಯ ಹಸ್ತ ಚಾಚಿದ್ದು, ಇಂಡೋನೇಷ್ಯಾದ ಹಲವಾರು ನಗರಗಳಲ್ಲಿ ಉಚಿತ ಅಕ್ಕಿಯನ್ನು ವಿತರಿಸುವ ಎಟಿಎಂ ಯಂತ್ರಗಳನ್ನು ಸ್ಥಾಪಿಸಿದ್ದಾರೆ.

ಸ್ವಯಂ ಚಾಲಿತ ಯಂತ್ರ
ವಿಶೇಷವೆಂದರೆ ಈ ಯಂತ್ರ ಸ್ವಯಂ ಚಾಲಿತವಾಗಿದ್ದು, ಮ್ಯಾಗ್ನೆಟಿಕ್‌ ಕಾರ್ಡ್‌ ಸಹಾಯದಿಂದ ಕಾರ್ಯ ನಿರ್ವಹಿಸುತ್ತದೆ.ಹಣ ಕೊಡುವ ಎಟಿಎಂ ಯಂತ್ರದಂತೆ ಇದನ್ನು ರೂಪಿಸಲಾಗಿದೆ. ಹಣದ ಬದಲು ಅಕ್ಕಿ ಹೊರ ಬರುವ ತಂತ್ರಗಾರಿಕೆಯನ್ನು ಅಳವಡಿಸಲಾಗಿದೆ.

ಈ ವ್ಯವಸ್ಥೆಯ ಕುರಿತು ಅಲ್ಲಿನ ಸ್ಥಳೀಯ ನಿವಾಸಿ ಲಿಂಡಾ ಸಯಾಫ್ರಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದು, ಲಾಕ್‌ಡೌನ್‌ನಿಂದಾಗಿ ಕಳೆದ ವಾರ ನನ್ನನ್ನು ಮತ್ತು ನನ್ನ ಪತಿಯನ್ನು ಕಂಪೆನಿ ಸಂಬಳ ನೀಡದೆ ನೌಕರಿಯಿಂದ ವಜಾಗೊಳಿಸಿದೆ. ಇದರಿಂದಾಗಿ ಹಣಕಾಸಿನ ತೊಂದರೆ ಎದುರಾಗಿದ್ದು, ಆಹಾರ ಸಾಮಾಗ್ರಿಗಳಿಗೆ ಪರದಾಡುವ ಪರಿಸ್ಥಿತಿಯಿದೆ. ಅಕ್ಕಿ ಎಟಿಎಂನಿಂದ ತುಂಬಾ ಸಹಾಯವಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next