Advertisement
ಒಂದು ಕೊಲೆಯ ತನಿಖೆ ಸುತ್ತ ನಡೆಯುವ ಕಥೆ ಇದು. ಇಲ್ಲಿ ಸಾಂಗ್ಸ್ ಇಲ್ಲ, ಫೈಟ್ಸ್ ಕೂಡ ಇಲ್ಲ. ಹಾಗಂತ, ಕಲಾತ್ಮಕ ಸಿನಿಮಾ ಅಲ್ಲ, ನೋಡುಗರಿಗೆ ಕುತೂಹಲ ಕೆರಳಿಸುವ ಅಂಶಗಳು ಇಲ್ಲಿವೆ. “ರೈಮ್ಸ್’ ಶೀರ್ಷಿಕೆ ಯಾಕೆ ಎಂಬುದಕ್ಕೆ ಸಿನಿಮಾ ನೋಡಿದಾಗ ಗೊತ್ತಾಗುತ್ತೆ ಎನ್ನುವುದು ನಿರ್ದೇಶಕರ ಮಾತು. ಇನ್ನು, ನಾಯಕ ಅಜಿತ್ ಜಯರಾಜ್ ಅವರಿಗೆ ಈ ಪಾತ್ರ ತುಂಬಾ ಹೊಸದಾಗಿದೆಯಂತೆ. ಈ ಸಿನಿಮಾ ಮೂಲಕ ಪ್ರೇಕ್ಷಕರಿಗೆ ಮತ್ತಷ್ಟು ಇಷ್ಟವಾಗುವ ವಿಶ್ವಾಸ ಅವರಿಗಿದೆ. “ರೈಮ್ಸ್ ಕಥೆಯಲ್ಲಿ ಸಾಕಷ್ಟು ವಿಶೇಷತೆ ಇತ್ತು. ಹಾಗಾಗಿ ಒಪ್ಪಿಕೊಂಡೆ. ಪಾತ್ರ ವಿಭಿನ್ನವಾಗಿದೆ. ಕಥೆ ಕೂಡ ಹೊಸತನದಿಂದ ಕೂಡಿದೆ. ನವೆಂಬರ್‌ನಿಂದ ಶುರುವಾಗಲಿದೆ. ಮೊದಲ ಸಲ ಬ್ರೈನ್‌ಗೆàಮ್ ಕುರಿತಾದ ಪಾತ್ರ ಮಾಡುತ್ತಿದ್ದೇನೆ. ಈ ಪಾತ್ರಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡಿದ್ದೆ’ ಎಂದು ಚಿತ್ರದ ಬಗ್ಗೆ ಹೇಳಿದರು ಅಜಿತ್. ಇನ್ನು ಅಜಿತ್ ಜಯರಾಜ್ ಚಿತ್ರರಂಗಕ್ಕೆ ಬಂದು ಐದು ವರ್ಷವಾಗಿದ್ದು, ಈ ಐದು ವರ್ಷಗಳಲ್ಲಿ ನಟಿಸಿದ ಸಿನಿಮಾಗಳಿಗಿಂತ “ರೈಮ್ಸ್’ ಹೊಸ ಬಗೆಯ ಸಿನಿಮಾವಂತೆ.
Related Articles
Advertisement