Advertisement
ಸಂಧಿವಾತದ ಲಕ್ಷಣವಿರುವ ಹಲವಾರು (ನೂರೈವತ್ತಕ್ಕಿಂತಲೂ ಹೆಚ್ಚು) ಕಾಯಿಲೆಗಳಲ್ಲಿ ರೊಮಟೋçಡ್ ಆಥೆùìಟಿಸ್ (ಆರ್.ಎ. ಎಂದು ಸಂಕ್ಷಿಪ್ತವಾಗಿ ಬರೆಯುತ್ತೇವೆ) ಪ್ರಮುಖ ಹಾಗೂ ಅತೀ ಹೆಚ್ಚು ಸಂಖ್ಯೆಯಲ್ಲಿ ನೋಡಲು ಸಿಗುವಂತಹ ಕಾಯಿಲೆ. ಆರ್.ಎ. ಮಹಿಳೆಯರಲ್ಲಿ ಹೆಚ್ಚಾಗಿ ಕಾಣಿಸುತ್ತದೆ. ಆದರೆ ಗಂಡಸರಲ್ಲಿಯೂ ಕೂಡ ಇದು ಕಾಣಬಹುದು. ಮತ್ತು ಯಾವುದೇ ವಯಸ್ಸಿನಲ್ಲಿ ಹಾಗೂ ಋತುವಿನಲ್ಲಿ ಶುರುವಾಗಬಹುದು.
Related Articles
Advertisement
ಆದ್ದರಿಂದ ನಾವು ತಿಳಿಯಬೇಕಾದ ಮುಖ್ಯವಾದ ಅಂಶ ಏನೆಂದರೆ: ರೋಗದ ಶೀಘ್ರ ಗುರುತಿಸುವಿಕೆ ಹಾಗೂ ಚಿಕಿತ್ಸೆಯಿಂದ ಆರ್.ಎ.ಯನ್ನು ಸೋಲಿಸಬಹುದು ಹಾಗೂ ರೋಗಿಯ ಮುಖದ ಮೇಲೆ ಮಾಸಿದ ನಗುವನ್ನು ಹಿಂದಿರುಗಿಸಬಹುದು. ಇದೇ ಪ್ರತಿಯೊಬ್ಬ ರುಮಟೋಲೊಜಿ ತಜ್ಞರ ಮುಖ್ಯ ಗುರಿ.
ಈ ಕಾಯಿಲೆಯ ಮುಖ್ಯ ಲಕ್ಷಣಗಳುಗಂಟು ನೋವು ಹಾಗೂ ಊತ ಇದು ಒಂದು ಅಥವಾ ಅನೇಕ ಗಂಟುಗಳಲ್ಲಿ ಇರಬಹುದು. ಇದು ಬೆರಳು, ಕೈ, ಮಣಿಕಟ್ಟು ಮೊಣಕೈ, ಭುಜ, ಕತ್ತು, ಸೊಂಟ, ಮೊಣಕಾಲು, ಕಾಲಿನ ಗಂಟುಗಳಲ್ಲಿ ತನ್ನ ಪರಿಣಾಮವನ್ನು ಬೀರುತ್ತದೆ. ಬೆಳಗ್ಗಿನ ಜಾವದಲ್ಲಿ ಗಂಟುಗಳಲ್ಲಿ ಗಡಸುತನ ಇದರಿಂದಾಗಿ ಗಂಟುಗಳನ್ನು ಮಡಚುವುದರಲ್ಲಿ ಹಾಗೂ ತೆರೆಯುವುದರಲ್ಲಿ ನೋವು ಹಾಗೂ “”ಟೈಟ್” ಆಗಿ ಬಿಗಿ ಹಿಡಿದುಕೊಂಡ ಹಾಗೆ ಅನಿಸುವುದು (ಉದಾ: ಮುಷ್ಟಿ ಮಾಡಲು ಕಷ್ಟ ಸಾಧ್ಯ, ಮೊಣಕಾಲು ಮಡಚಿ ಶೌಚಾಲಯದ ಉಪಯೋಗ ಮಾಡಲಸಾಧ್ಯ ಇತ್ಯಾದಿ). ಈ ಸ್ಥಿತಿಯಲ್ಲಿ ಆರ್.ಎ.ಯ ಚಿಕಿತ್ಸೆ ಸರಿಯಾದ ರೀತಿಯಲ್ಲಿ ನಡೆಯದಿದ್ದಲ್ಲಿ, ಗಂಟು ನೋವು ಹಾಗೂ ಊತವೂ ಹೆಚ್ಚಾಗಿ ರೋಗಿಗಳು (ಎಷ್ಟೇ ಸಣ್ಣ ವಯಸ್ಸಿನವರಾದರೂ) ಹಾಸಿಗೆ ಹಿಡಿಯುವ ಪರಿಸ್ಥಿತಿಗೆ ಬಂದು ತಮ್ಮ ಸಾಮಾಜಿಕ ಜೀವನ ಹಾಗೂ ಸ್ವಾತಂತ್ರ್ಯವನ್ನು ಕಳೆದುಕೊಳ್ಳಬಹುದು. ಇದರಿಂದಾಗುವ ಮಾನಸಿಕ ಪರಿಣಾಮವು ಸಾವಿಗಿಂತಲೂ ದುಸ್ತರ ಎಂದು ಹಲವಾರು ರೋಗಿಗಳು ಹೇಳಿದ್ದುಂಟು! ಕೆಲವು ತಿಂಗಳು/ವರ್ಷಗಳಲ್ಲಿ ಆರ್.ಎ. ಮುಂದುವರಿದು, ಗಂಟುಗಳಲ್ಲಿನ ಎಲುಬುಗಳು ಸವೆದು, ಗಂಟುಗಳು ತಮ್ಮ ಆಕಾರವನ್ನು ಕಳೆದುಕೊಳ್ಳುವವು. ಇದರಿಂದಾಗಿ ಕೈ ಹಾಗೂ ಕಾಲುಗಳು ಆಕಾಶಗೆಟ್ಟು ವಕ್ರವಾಗುವವು. ಇಂತಹ ಕೈಗಳು ನೋಡಲು ಅಸಹ್ಯ ಮಾತ್ರವಲ್ಲದೆ, ರೋಗಿಯು ತನ್ನ ಕೈಯಿಂದ ಯಾವುದೇ ಕಾರ್ಯಕಲಾಪವನ್ನು ಮಾಡಲು ಅಸಮರ್ಥರಾಗಬಹುದು. ಉದಾ: ಹಲ್ಲುಜ್ಜುವುದು, ಸ್ನಾನ ಮಾಡುವುದು, ಬಟ್ಟೆ ಉಡುವುದು, ತಿನ್ನುವುದು – ಇಂತಹ ದೈನಂದಿನ ಚಟುವಟಿಕೆಗಳು ಕೂಡ ಅಸಾಧ್ಯವಾಗಬಹುದು. ಈ ಮೊದಲೇ ತಿಳಿಸಿದಂತೆ, ಸಂಧಿವಾತ ಇರುವ ಕಾಯಿಲೆಗಳು ಶರೀರದ ಅನ್ಯ ಅಂಗಾಂಗಗಳ ಮೇಲೆ ಕೂಡ ಪರಿಣಾಮ ಬೀರುತ್ತವೆ. ಈ ಮಟ್ಟಿನಲ್ಲಿ ಆರ್.ಎ. ಕೂಡ ಇದೇ ರೀತಿಯಲ್ಲಿ ಶರೀರದ ಈ ಕೆಳಗಿನ ಅಂಗಾಂಗಗಳ ಮೇಲೆ ಪರಿಣಾಮ ಬೀರಬಹುದು. ಕಣ್ಣು (ಕೆಂಪಗಾಗುವುದು, ಕಣ್ಣು ನೋವು, ದೃಷ್ಟಿ ಕಡಿಮೆಯಾಗುವುದು – ಸ್ಕಿರೈಟಿಸ್, ಎಪಿಸ್ಲಿರೈಟಿಸ್ ; ಕಣ್ಣು ಒಣಗುವುದು – ಜೋಗ್ರೆನ್ ಸಿಂಡ್ರೋಮ್) ಚರ್ಮ (ಚರ್ಮದಲ್ಲಿ ಊತಗಳು – ರುಮಟೋçಡ್ ನೊಡ್ಯುಲ್, ಚರ್ಮದಲ್ಲಿ ರಕ್ತಸ್ರಾವದಂತಹ ಬಿಂದುಗಳು – ಪರ್‌ಪುರಾ) ಎಲುಬು (ಎಲುಬುಗಳು ದುರ್ಬಲವಾಗಿ ಫ್ರಾಕ್ಚರ್ ಆಗುವುದು -ಓಸ್ಟಿಯೋಪೊರೋಸಿಸ್) ರೋಗ ಪ್ರತಿರೋಧಕ ಶಕ್ತಿ ಕಡಿಮೆಯಾಗಿ ಪದೇ ಪದೇ ಸೋಂಕು ರೋಗಗಳಾಗುವುದು. ಮಾಂಸಖಂಡಗಳು (ನಿತ್ರಾಣ, ಮಾಂಸಖಂಡಗಳ ನಿಶ್ಯಕ್ತಿ -ಮಯೋಪಥಿ) ಶ್ವಾಸಕೋಶಗಳು (ಉಸಿರುಗಟ್ಟುವುದು, ಒಣ ಕೆಮ್ಮು -ಐ.ಎಲ್.ಡಿ.) ಹೃದಯ (ಹೃದಯಘಾತದ ಸಾಧ್ಯತೆ ಹೆಚ್ಚಾಗುವುದು) ರಕ್ತನಾಳಗಳು ಹಾಗೂ ನರಗಳು (ನಿತ್ರಾಣ, ಗ್ಯಾಂಗ್ರೀನ್-ವ್ಯಾಸ್ಕಾಲೈಟಿಸ್) ಗಂಟು ನೋವಿನ ರೋಗಿಗಳು ಶೀಘ್ರವಾಗಿ ಇಮ್ಯುನೋಲೊಜಿ ಮತ್ತು ರುಮಟೋಲೊಜಿ ತಜ್ಞರನ್ನು ಕಂಡು ಆರ್.ಎ.ಯನ್ನು ಗುರುತಿಸಿ, ಅದರ ಚಿಕಿತ್ಸೆ ಮಾಡಿದ್ದಲ್ಲಿ ಈ ಎಲ್ಲಾ ತೊಂದರೆಗಳನ್ನು ತಡೆಯಬಹುದು. – ಡಾ| ಸಜ್ಜನ್ ಶೆಣೈ ಎನ್.,
ವಿಶೇಷಜ್ಞರು – ಇಮ್ಯುನೋಲೊಜಿ ಮತ್ತು ರುಮಟೋಲೊಜಿ
ಕ್ಲಿನಿಕಲ್ ಇಮ್ಯುನೋಲೊಜಿ ಮತ್ತು ರುಮಟೋಲೊಜಿ ವಿಭಾಗ,
ಕೆಎಂಸಿ ಆಸ್ಪತ್ರೆ, ಮಂಗಳೂರು.