Advertisement

ವಾಕ್ಚಾತುರ್ಯ , ಹವ್ಯಾಸಕ್ಕಲ್ಲ; ವೃತ್ತಿಗೂ ಪೂರಕ 

04:05 PM Jun 20, 2018 | Team Udayavani |

ಬದುಕಿನಲ್ಲಿ ಉದ್ಯೋಗ, ಹಣ ಸಂಪಾದನೆಯೊಂದೇ ಮುಖ್ಯವಲ್ಲ. ಮಾನಸಿಕ ನೆಮ್ಮದಿ, ಸಂತೋಷ, ಆರೋಗ್ಯಯುತವಾದ ಜೀವನವೂ ಅಷ್ಟೇ ಅಗತ್ಯ. ಹಣ ಸಂಪಾದನೆಯೊಂದೇ ನಮ್ಮ ಗುರಿಯಾದರೆ ಬದುಕಿನ ಖುಷಿಯ ಕ್ಷಣಗಳ ಜತೆಗೆ ಮಾನಸಿಕ ನೆಮ್ಮದಿಯನ್ನು ಕಳೆದುಕೊಳ್ಳಬೇಕಾಗುತ್ತದೆ.

Advertisement

ಜೀವನವನ್ನು ರೂಪಿಸಿಕೊಳ್ಳಲು ಹಲವು ಕ್ಷೇತ್ರಗಳಿರಬಹುದು. ಮೊದಲಿಗೆ ನಾವು ಹುಡುಕಬೇಕಿರುವುದು ನಮಗೆ ಖುಷಿ ಕೊಡುವ ಕ್ಷೇತ್ರ ಯಾವುದು ಎಂದು. ನನ್ನಲ್ಲಿ ಯಾವುದೇ ಪದವಿ ಇಲ್ಲ. ಬರವಣಿಗೆಯ ಕಲೆ ಗೊತ್ತಿಲ್ಲ. ಆದರೆ ಬಹುತೇಕ ಎಲ್ಲ ಭಾಷೆಯಲ್ಲಿ ನಿರ್ಗಳವಾಗಿ ಮಾತನಾಡುವ ,ಎಲ್ಲರನ್ನೂ ಮನರಂಜಿಸುವ ಕಲೆ ಗೊತ್ತಿದ್ದರೆ ಸಾಕು ರೇಡಿಯೋ ಜಾಕಿಯಾಗಬಹುದು. 

ಬೆಳಗ್ಗಿನಿಂದ ರಾತ್ರಿಯವರೆಗೆ ಹೆಡ್‌ಫೋನ್‌ ಸಿಕ್ಕಿಸಿಕೊಂಡು ಸದಾ ಖುಷಿಖುಷಿಯಲ್ಲಿ ಮಾತನಾಡುವ ರೇಡಿಯೋ ಜಾಕಿಗಳು ಹೆಚ್ಚಿನ ಕೇಳುಗರ ಮೆಚ್ಚುಗೆಗೆ ಪಾತ್ರರಾಗುತ್ತಾರೆ. ಇತರರ ನೋವುಗಳಿಗೆ ಸ್ಪಂದಿಸಿ, ಮನ ಬಿಚ್ಚಿ ಮಾತನಾಡುವ ಕಲೆಯನ್ನೂ ಅರಿತಿರುತ್ತಾರೆ. ಫ‌ುಲ್‌ ಟೈಮ್‌ ಅಲ್ಲದೇ ಇದ್ದರೂ ಪಾರ್ಟ್‌ ಟೈಂ ಆಗಿ ರೇಡಿಯೋ ಜಾಕಿ ಆಗಬಯಸುವವರಿಗೆ ಸಾಕಷ್ಟು ಅವಕಾಶಗಳು ಇವೆ.

ವಾಕ್‌ ಚಾತುರ್ಯವೇ ಇಲ್ಲಿ ಬಂಡವಾಳ. ಯಾವುದೇ ಕಠಿನ ಸವಾಲುಗಳಿಲ್ಲ. ಎಲ್ಲರ ಮನಗೆಲ್ಲುವುದಷ್ಟೇ ರೇಡಿಯೋ ಜಾಕಿಗಳ ಮುಖ್ಯ ಉದ್ದೇಶ. ಹೀಗಾಗಿ ವಿದ್ಯಾರ್ಥಿ, ಉದ್ಯೋಗಿಗಳು, ನಿವೃತ್ತರು ಯಾರೇ ಆಗಿರಬಹುದು ಆಸಕ್ತಿ ಇದ್ದರೆ ರೇಡಿಯೋ ಜಾಕಿ ಆಗಬಹುದು. ರೇಡಿಯೋ ಜಾಕಿ ಕೆಲಸದಲ್ಲಿ ಹಿಡಿತ ಸಾಧಿಸಿದರೆ ಟೆಲಿವಿಷನ್‌ ಕ್ಷೇತ್ರಕ್ಕೂ ಕಾಲಿರಿಸಬಹುದು. ಸಿನೆಮಾ, ಧಾರಾವಾಹಿಗಳಿಗೆ ಹಿನ್ನೆಲೆ ಧ್ವನಿ ನೀಡಬಹುದು.

ಟ್ರೈನಿಂಗ್‌ ಕೋರ್ಸ್‌ಗಳು
ಹಲವು ಸಂಸ್ಥೆಗಳು ರೇಡಿಯೋ ಜಾಕಿ ಕೋರ್ಸ್‌ಗಳನ್ನು ನೀಡುತ್ತವೆ. ಮೂರರಿಂದ ಆರು ತಿಂಗಳವರೆಗಿನ ಕೋರ್ಸ್‌ಗಳು ಲಭ್ಯವಿವೆ. ಇಲ್ಲಿ ಫ‌ುಲ್‌ ಟೈಂ ಅಥವಾ ಪಾರ್ಟ್‌ ಟೈಮ್‌ ಆಗಿಯೂ ತರಬೇತಿ ಪಡೆಯಬಹುದು. ಸಿಲೆಬಸ್‌ ಪ್ರಕಾರ ಪ್ರತ್ಯೇಕವಾದ ಮೌಖಿಕ ಮತ್ತು ಫೋನ್‌ ಮೂಲಕ ಮಾತನಾಡುವ ಶೈಲಿಗಳನ್ನು ಅಧ್ಯಯನ ಮಾಡಲಾಗುತ್ತದೆ.

Advertisement

ಸ್ಕ್ರಿಪ್ಟ್ ರೈಟಿಂಗ್‌, ಪಬ್ಲಿಕ್‌ ಸ್ಪೀಕಿಂಗ್‌, ರೇಡಿಯೋ ಪ್ರಸೆಂಟೇಶನ್‌, ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿದ ಕಾರ್ಯಾಗಾರಗಳನ್ನು ನಡೆಸಲಾಗುತ್ತದೆ. ಸೆರ್ಟಿಫಿಕೇಟ್‌ಗಳನ್ನು ನೀಡಲಾಗುತ್ತದೆ. ಕೆಲವು ಕಾಲೇಜುಗಳಲ್ಲಿ ರೇಡಿಯೋ ಸ್ಟೇಶನ್ಸ್‌ಗಳು ಇವೆ. ಇಲ್ಲಿಯೂ ತರಬೇತಿ ಪಡೆಯಲು ಅವಕಾಶವಿರುತ್ತದೆ. 

ಶ್ರುತಿ ನೀರಾಯ

Advertisement

Udayavani is now on Telegram. Click here to join our channel and stay updated with the latest news.

Next