Advertisement

150 mg ವೀರ್ಯ ಪತ್ತೆಯಾಗಿದೆ, ಇದು ಒಬ್ಬನ ಕೃತ್ಯವೇ?: ಸ್ಮೃತಿ ಇರಾನಿ ಪ್ರಶ್ನೆ

07:16 PM Aug 16, 2024 | Team Udayavani |

ಕೋಲ್ಕತಾ: ಆರ್ ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವೈದ್ಯಯ ಮೇಲೆ ಅಮಾನುಷ ಕೃತ್ಯ ನಡೆಯುವ ವೇಳೆ ಆಕೆಯ ಕಿರುಚಾಟ ಯಾರಿಗೂ ಕೇಳಿಸಲಿಲ್ಲವೇ ? ಆಕೆಯ ದೇಹದಲ್ಲಿ 150 ಮಿಗ್ರಾಂ ವೀರ್ಯ ಪತ್ತೆಯಾಗಿದೆ ಎಂದು ಮಾಧ್ಯಮ ವರದಿಗಳಿಂದ ತಿಳಿದುಬಂದಿದೆ. ಇದು ಒಬ್ಬ ಅತ್ಯಾಚಾರಿಯ ಕೆಲಸವೇ? ಎಂದು ಬಿಜೆಪಿ ನಾಯಕಿ ಸ್ಮೃತಿ ಇರಾನಿ ಶುಕ್ರವಾರ (ಆ16) ಪ್ರಶ್ನಿಸಿದ್ದಾರೆ.

Advertisement

ಕೋಲ್ಕತಾಗೆ ಭೇಟಿ ನೀಡಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ’ ಒಬ್ಬ ವ್ಯಕ್ತಿ ಅತ್ಯಾಚಾರ ಮಾಡಿ ಆಕೆಯ ಕಾಲುಗಳನ್ನು, ಕೈಗಳನ್ನು ಮುರಿಯಲು,ಕಣ್ಣುಗಳನ್ನುಕೀಳಲು, ಎದೆಗೆ ಹೊಟ್ಟೆಗೆ ಹೊಡೆಯಲು ಸಾಧ್ಯವೇ? ಆಕೆ ಕಿರುಚುತ್ತಿದ್ದರೂ ಯಾರೂ ಕೇಳಲಿಲ್ಲವೇ?’ ಎಂದು ಪ್ರಶ್ನಿಸಿದ್ದಾರೆ.

‘ಅತ್ಯಾಚಾರಿಯು ಕೃತ್ಯ ಎಸಗಿದ ನಂತರ ಮನೆಗೆ ಮರಳಲು ಆಸ್ಪತ್ರೆಯಲ್ಲಿ ಭರವಸೆ ನೀಡಿದ್ದು ಯಾರು? ಇಷ್ಟು ಘೋರ ಅಪರಾಧದ ನಂತರವೂ ಆಸ್ಪತ್ರೆಯ ಅದೇ ಮಹಡಿಯಲ್ಲಿ ಕೆಲಸ ಮುಂದುವರಿಸಿದವರು ಯಾರು?’ ಎಂದು ಸರಣಿ ಪ್ರಶ್ನೆಗಳನ್ನು ಕೇಳಿದ್ದಾರೆ.

ಇದನ್ನೂ ಓದಿ:Kolkata ಆಸ್ಪತ್ರೆ ಪುಡಿಗೈದಿದ್ದು ಬಿಜೆಪಿ, ಸಿಪಿಎಂ ಎಂದ ಮಮತಾ; 25 ಮಂದಿ ಬಂಧನ

‘ವೈದ್ಯೆಯ ಪೋಷಕರಿಗೆ ಕರೆ ಮಾಡಿ ಆತ್ಮಹ*ತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಿದ ಪೊಲೀಸ್ ಅಧಿಕಾರಿಯ ವಿರುದ್ಧ ಇದುವರೆಗೆ ಏನು ಕ್ರಮ ಕೈಗೊಂಡಿದ್ದೀರಿ? ಇದು ಆತ್ಮಹ*ತ್ಯೆ ಎಂದು ಪೋಷಕರಿಗೆ ಹೇಳಲು ಆ ಅಧಿಕಾರಿಗೆ ಸೂಚಿಸಿದವರು ಯಾರು? ಆ ಅಧಿಕಾರಿ ಅವರ ಮೇಲಧಿಕಾರಿಯಾಗಿದ್ದರೆ, ಅವರು ಈ ತೀರ್ಮಾನಕ್ಕೆ ಹೇಗೆ ಬಂದರು?’ ಎಂದು ಪ್ರಶ್ನಿಸಿದ್ದಾರೆ.

Advertisement

‘ಅತ್ಯಾಚಾರಿಗಳು ನಿರಾತಂಕವಾಗಿದ್ದರೂ ಪ್ರತಿಭಟನಾಕಾರರ ಮೇಲೆ ಗುಂಪೊಂದು ದಾಳಿ ನಡೆಸುತ್ತಿದೆ. ರಾಜ್ಯದಲ್ಲಿ ಪುಂಡ ಪೋಕರಿಗಳ ಗುಂಪು ಇದ್ದುದು ಪೊಲೀಸರಿಗೆ ತಿಳಿಯದಿರುವುದು ಹೇಗೆ? ಅವರು ಆಸ್ಪತ್ರೆಗೆ ಪ್ರವೇಶಿಸಿ ಧ್ವಂಸಗೊಳಿಸುವುದು ಹೇಗೆ ಸಾಧ್ಯ ಮತ್ತು ಮಾಧ್ಯಮ ವರದಿಗಳು ಸಾಕ್ಷ್ಯದ ಭಾಗವಾಗಬಹುದಾದಂತಹವುಗಳನ್ನು ಧ್ವಂಸಗೊಳಿಸುತ್ತವೆ ಎಂದು ಹೇಳಿವೆ?. ಸಂತ್ರಸ್ತೆಗೆ ನ್ಯಾಯ ಸಿಗುತ್ತದೆಯೋ ಇಲ್ಲವೇ ಎಂಬುದು ಪ್ರಶ್ನೆ’ ಎಂದು ರಾಜ್ಯ ಸರಕಾರದ ವಿರುದ್ಧ ಮಾಜಿ ಕೇಂದ್ರ ಸಚಿವೆ ಕಿಡಿ ಕಾರಿದ್ದಾರೆ.

“ತನಿಖೆಗಳು ಒಟ್ಟಾರೆಯಾಗಿ ಪೂರ್ಣಗೊಳ್ಳದಂತೆ ನೋಡಿಕೊಳ್ಳಲು ಬಂಗಾಳದ ಸಿಎಂ ಬಯಸುತ್ತಾರೆಯೇ? ಈ ಪ್ರಶ್ನೆಗಳಿಗೆ ಇನ್ನೂ ಉತ್ತರವಿಲ್ಲ ಎಂದು ತಿಳಿದು ಅವರು ಏಕೆ ಆತುರಪಡುತ್ತಿದ್ದಾರೆ?” ಎಂದು ಸ್ಮೃತಿ ಕಿಡಿ ಕಾರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.