Advertisement

ತೇಜ್‌ ಮೊಗದಲ್ಲಿ ರಿವೈಂಡ್‌ ನಗು

10:36 AM Jul 16, 2021 | Team Udayavani |

ನಟ ತೇಜ್‌ ಅಭಿನಯದ “ರಿವೈಂಡ್‌’ ಚಿತ್ರ ಬಿಡುಗಡೆಯಾಗಿ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿರುವಾಗಲೇ, ಥಿಯೇಟರ್‌, ಮಲ್ಟಿಪ್ಲೆಕ್ಸ್‌ ಮುಚ್ಚುವ ನಿರ್ಧಾರ ಮಾಡಿತು. ಚಿತ್ರ ಥಿಯೇಟರ್‌ಗಳಲ್ಲಿ ನಿಧಾನವಾಗಿ ಮುನ್ನಡೆಯುತ್ತಿರುವಾಗಲೇ, ಎದುರಾದ ಲಾಕ್‌ಡೌನ್‌ ಸಹಜವಾಗಿಯೇ ಚಿತ್ರತಂಡದ ನೋವಿಗೆ ಕಾರಣವಾಗಿತ್ತು. ಒಂದೊಳ್ಳೆ ಚಿತ್ರವನ್ನು ಸರಿಯಾಗಿ ಪ್ರೇಕ್ಷಕರಿಗೆ ತಲುಪಿಸಲು ಸಾಧ್ಯವಾಗಲಿಲ್ಲ ಎಂಬ ಬೇಸರದ ನಡುವೆಯೇ, ಇದೀಗ ಚಿತ್ರತಂಡ “ರಿವೈಂಡ್‌’ ಚಿತ್ರವನ್ನು ಮತ್ತೂಮ್ಮೆ ಪ್ರೇಕ್ಷಕರ ಮುಂದೆ ತಂದಿದ್ದಾರೆ.

Advertisement

ಐಎಂಡಿಬಿಯಲ್ಲಿ 9.5 ರೇಟಿಂಗ್‌ ಪಡೆದುಕೊಂಡಿರುವ “ರಿವೈಂಡ್‌ ಶೀಘ್ರದಲ್ಲಿಯೇ ಬುಕ್‌ ಮೈ ಶೋ ಫ್ಲಾಟ್‌ಫಾರ್ಮ್ನಲ್ಲಿ ಸ್ಟ್ರೀಮಿಂಗ್‌ ಆಗಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಅಂದಹಾಗೆ, ಕನ್ನಡದಲ್ಲಿ ಇದೇ ಮೊದಲ ಬಾರಿಗೆ “ಬುಕ್‌ ಮೈ ಶೋ’ನಲ್ಲಿ ಸ್ಟ್ರೀಮಿಂಗ್‌ ಆಗಿರುವ ಚಿತ್ರ ಎಂಬ ಹೆಗ್ಗಳಿಗೆ “ರಿವೈಂಡ್‌’ ಚಿತ್ರಕ್ಕಿದೆ.

ಈ ಬಗ್ಗೆ ಮಾತನಾಡುವ “ರಿವೈಂಡ್‌’ ಚಿತ್ರದ ನಟ ಕಂ ನಿರ್ದೇಶಕ ತೇಜ್‌, “ಥಿಯೇಟರ್‌ನಲ್ಲಿ ಒಂದೊಳ್ಳೆ ಸಿನಿಮಾವನ್ನು ಸರಿಯಾಗಿ ಆಡಿಯನ್ಸ್‌ಗೆ ತಲುಪಿಸಲಾಗಲಿಲ್ಲ ಎಂಬ ಬೇಸರವಿತ್ತು. ಸದ್ಯದ ಮಟ್ಟಿಗೆ ಮತ್ತೆ ಥಿಯೇಟರ್‌ಗಳು ಯಾವಾಗ ತೆರೆಯುತ್ತವೆ ಎಂಬ ಸ್ಪಷ್ಟತೆಯಿಲ್ಲ. ಹೀಗಾಗಿ ಪರ್ಯಾಯ ಮಾರ್ಗದ ಮೂಲಕ ನಮ್ಮ ಸಿನಿಮಾವನ್ನು ಪ್ರೇಕ್ಷಕರ ಮುಂದೆ ತಂದಿದ್ದೇವೆ. ಮುಂದಿನ ದಿನಗಳಲ್ಲಿ ಚಿತ್ರವನ್ನು ಸೌದಿ ಹಾಗೂ ಅರಬ್‌ ರಾಷ್ಟ್ರಗಳಲ್ಲಿ ಬಿಡುಗಡೆ ಮಾಡಲಿದ್ದೇವೆ’ ಎಂದರು

Advertisement

Udayavani is now on Telegram. Click here to join our channel and stay updated with the latest news.

Next