ಹಳೆ ವರ್ಷದಲ್ಲಾದ ಅನುಭವಗಳನ್ನು ಪಾಠಗಳೆಂದು ಭಾವಿಸಿಕೊಂಡು, ಹೊಸ ವರ್ಷವನ್ನು ನಾವೆಲ್ಲರೂ ಹೊಸ ಭರವಸೆಯೊಂದಿಗೆ ಇದಿರುಗೊಳ್ಳೋಣ…
Advertisement
1. ಅಯೋಧ್ಯೆ ರಾಮ ಮಂದಿರ ಕನಸು ಸಾಕಾರಭಾರತೀಯರ ಶತಮಾನದ ಕನಸು 2024ರಲ್ಲಿ ಸಾಕಾರಗೊಂಡಿತು. ಅಯೋಧ್ಯೆಯಲ್ಲಿ ರಾಮ ಮಂದಿರ ಲೋಕಾರ್ಪಣೆ. ಪ್ರಧಾನಿ ಮೋದಿ ಗಣ್ಯರ ಸಮ್ಮು ಖದಲ್ಲಿ ಮಂದಿರದಲ್ಲಿ ಬಾಲ ರಾಮನ ವಿಗ್ರಹ ಪ್ರತಿಷ್ಠಾಪಿಸಲಾಯಿತು. ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತಿದ್ದ ವಿಗ್ರಹ ಮಂದಿರದಲ್ಲಿ ರಾರಾಜಿಸಿತು.
ಬಿಜೆಪಿ ಹಿರಿಯ ನಾಯಕ ಎಲ್.ಕೆ.ಆಡ್ವಾಣಿ (ಫೆ.3)ಸೇರಿ ಈ ವರ್ಷ 5 ಮಹನೀಯರಿಗೆ ಭಾರತ ರತ್ನ. ಮರಣೋತ್ತರವಾಗಿ ಕರ್ಪೂರಿ ಠಾಕೂರ್, ಮಾಜಿ ಪ್ರಧಾನಿಗಳಾದ ಚೌಧರಿ ಚರಣ್ ಸಿಂಗ್, ಪಿ.ವಿ.ನರಸಿಂಹ ರಾವ್, ಹಸುರು ಕ್ರಾಂತಿಯ ಹರಿಕಾರ ಎಂ.ಎಸ್.ಸ್ವಾಮಿನಾಥನ್ಗೆ ಪ್ರಶಸ್ತಿ ಘೋಷಿಸಲಾಯಿತು. 3.ಕೇಂದ್ರ ವಿರುದ್ಧ ರಾಜ್ಯ ಸರಕಾರದ “ಕರ ಸಮರ’
ಅನುದಾನ ಹಂಚಿಕೆ ತಾರತಮ್ಯ ಖಂಡಿಸಿ ರಾಜ್ಯ ಸರಕಾರವು ಕೇಂದ್ರದ ವಿರುದ್ಧ “ಕರ ಸಮರ’ ನಡೆಸಿತು. ಫೆ. 7ರಂದು ದಿಲ್ಲಿಯ ಜಂತರ್ಮಂತರ್ನಲ್ಲಿ ಸಿಎಂ ಮತ್ತು ಡಿಸಿಎಂ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಕರ್ನಾಟಕದಂತೆ ದಿಲ್ಲಿಯಲ್ಲಿ ಕೇರಳ, ತಮಿಳುನಾಡು ರಾಜ್ಯ ಸರಕಾರಗಳೂ ಪ್ರತಿಭಟನೆ ನಡೆಸಿದವು.
Related Articles
ಮಾ.1ರಂದು ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ. ಹೊಟೇಲ್ ಸಿಬಂದಿ ಸೇರಿ 8 ಮಂದಿಗೆ ಗಾಯ. ಪ್ರಕರಣವನ್ನು ಎನ್ಐಎಗೆ ಹಸ್ತಾಂತರ. ಎ.12ರಂದು ಕೋಲ್ಕತ್ತಾದಲ್ಲಿ ಸ್ಫೋಟ ಸಂಚುಕೋರ ಮುಜಾಮಿಲ್ ಷರೀಫ್ ಶಜಿಬ್, ಅಬ್ದುಲ್ ಮತೀನ್ ತಾಹಾ ಸೆರೆ. ಸೆ. 9ಕ್ಕೆ ಎನ್ಐಎ ಕೋರ್ಟ್ಗೆ ಚಾರ್ಜ್ಶೀಟ್ ಸಲ್ಲಿಕೆ.
Advertisement
5.ಪ್ರಜ್ವಲ್ ರೇವಣ್ಣ ಸೆಕ್ಸ್ ಪೆನ್ಡ್ರೈವ್ ಕೇಸ್ಲೋಕಸಭೆ ಚುನಾವಣೆ ಹೊತ್ತಲ್ಲಿ ಪ್ರಜ್ವಲ್ ರೇವಣ್ಣ ಸೆಕ್ಸ್ ಪೆನ್ ಡ್ರೈವ್ ಸದ್ದು. ಎ.23ರ ರಾತ್ರಿ ದೇಶ ದಿಂದ ಕಾಲ್ಕಿತ್ತ ಪ್ರಜ್ವಲ್. ಮೇ 30ರಂದು ವಾಪಸ್. ಪೊಲೀಸರಿಂದ ಬಂಧನ. ಸಂತ್ರಸ್ತೆಯ ಕಿಡ್ನಾಪ್ ಕೇಸಲ್ಲಿ ಪ್ರಜ್ವಲ್ ತಂದೆ ರೇವಣ್ಣ ಮೇ 4ಕ್ಕೆ ಬಂಧನ. ಲೈಂಗಿಕ ದೌರ್ಜನ್ಯ ಸಂಬಂಧ ಜೂ.23ಕ್ಕೆ ಪ್ರಜ್ವಲ್ ಸಹೋದರ ಸೂರಜ್ ಸಹ ಸೆರೆ. 6. ಕೇಂದ್ರದಲ್ಲಿ 3ನೇ ಬಾರಿಗೆ ಎನ್ಡಿಎಗೆ ಅಧಿಕಾರ
ಎ.19ರಿಂದ ಜೂನ್1ರ ವರೆಗೆ 7 ಹಂತದಲ್ಲಿ ಲೋಕಸಭೆ ಚುನಾವಣೆ. ಜೂ.4ಕ್ಕೆ ಫಲಿತಾಂಶ. 3ನೇ ಬಾರಿಗೆ ಕೇಂದ್ರದಲ್ಲಿ ಎನ್ಡಿಎಗೆ ಅಧಿಕಾರ. ಬಿಜೆಪಿಗೆ 292 ಸೀಟು ಗೆಲುವು. ಇಂಡಿಯಾ ಕೂಟ ಗೆಲ್ಲುವ ನಿರೀಕ್ಷೆ ಹುಸಿ. ಕಾಂಗ್ರೆಸ್ ಪಕ್ಷಕ್ಕೆ 99 ಸೀಟು. ಮೋದಿ ಪ್ರಧಾನಿ ಯಾದರೆ, ವಿಪಕ್ಷನಾಯಕರಾಗಿ ರಾಹುಲ್ ಗಾಂಧಿ ಆಯ್ಕೆ.
ತನ್ನ ಗೆಳತಿಗೆ ಅಶ್ಲೀಲ ಸಂದೇಶ ಕಳುಹಿಸಿದ್ದ ಎಂಬ ಕಾರಣಕ್ಕೆ ಚಿತ್ರದುರ್ಗದ ರೇಣುಕಸ್ವಾಮಿಯನ್ನು ಕೊಲೆ ಮಾಡಿದ ಆರೋಪದಲ್ಲಿ ನಟ ದರ್ಶನ್ ಆ್ಯಂಡ್ ಗ್ಯಾಂಗ್ ಬಂಧನ. ಬೆನ್ನು ನೋವಿನ ಹಿನ್ನೆಲೆ ಅಕ್ಟೋಬರ್ 30ಕ್ಕೆ ದರ್ಶನ್ಗೆ ಮಧ್ಯಾಂತರ ಬೇಲ್. ಡಿ.13ಕ್ಕೆ ದರ್ಶನ್ ಹಾಗೂ ಗೆಳತಿ ಪವಿತ್ರಾಗೌಡ ಸೇರಿ ಇತರರಿಗೆ ಜಾಮೀನು. 8.ಭಾರತಕ್ಕೆ 2ನೇ ಬಾರಿಗೆ ಟಿ20 ವಿಶ್ವಕಪ್ ಕಿರೀಟ
2011ರ ಅನಂತರ 2024ರಲ್ಲಿ 2ನೇ ಬಾರಿಗೆ ಟಿ20 ವಿಶ್ವ ಕಪ್ ಗೆದ್ದ ಭಾರತ. ವೆಸ್ಟ್ ಇಂಡೀಸ್ನ ಬ್ರಿಜ್ಟೌನ್ನಲ್ಲಿ ಫೈನಲ್ ಪಂದ್ಯ. ದ.ಆಫ್ರಿಕಾ ವಿರುದ್ಧ ಭಾರತ 7 ವಿಕೆಟ್ಗೆ 176 ರನ್. ದಕ್ಷಿಣ ಆಫ್ರಿಕಾ 8 ವಿಕೆಟ್ಗೆ 169 ರನ್ ಮಾಡಿ, ಸೋಲು. ರೋಹಿತ್ ಶರ್ಮಾ ನೇತೃ ತ್ವದ ಭಾರತ 7 ರನ್ಗಳಿಂದ ಫೈನಲ್ ಗೆದ್ದು ಇತಿಹಾಸ ನಿರ್ಮಾಣ. 9. 3 ಹೊಸ ಕ್ರಿಮಿನಲ್ ಕಾನೂನುಗಳು ಜಾರಿ
ಭಾರತದ ನ್ಯಾಯ ಕಲ್ಪನೆಯಡಿ ರೂಪಿಸಲಾದ ಹೊಸ 3 ಅಪರಾಧ ಕಾನೂನು ಜು.1ರಿಂದ ಜಾರಿ. ಭಾರತೀಯ ದಂಡ ಸಂಹಿತೆ ಬದಲಿಗೆ ಭಾರತೀಯ ನ್ಯಾಯ ಸಂಹಿತೆ – 2023, ಭಾರ ತೀಯ ನಾಗರಿಕ ಸುರûಾ ಸಂಹಿತೆ -2023 ಹಾಗೂ ಭಾರತೀಯ ಸಾಕ್ಷÂ ಅಧಿನಿಯಮ- 2023 ಕಾನೂನುಗಳು ಜಾರಿಯಾದವು. 10.ವಾಲ್ಮೀಕಿ ಹಗರಣ: ಬಿ.ನಾಗೇಂದ್ರ ಬಂಧನ
ಕರ್ನಾಟಕ ವಾಲ್ಮೀಕಿ ಅಭಿವೃದ್ಧಿ ನಿಗಮದ 187 ಕೋಟಿ ರೂ. ಹಗರಣ ಬಯಲು. ಜು.12ಕ್ಕೆ ಇ.ಡಿ.ಯಿಂದ ಮಾಜಿ ಸಚಿವ ಬಿ.ನಾಗೇಂದ್ರ ಬಂಧನ. 6 ತಿಂಗಳ ಬಳಿಕ ನಾಗೇಂದ್ರ ಅವರಿಗೆ ಜಾಮೀನು. ಸೆ.10ರಂದು ಇ.ಡಿ.ಯಿಂದ ಚಾರ್ಜ್ಶೀಟ್ ಸಲ್ಲಿಕೆ. ನಾಗೇಂದ್ರ ಪ್ರಕರಣದ ಕಿಂಗ್ಪಿನ್ ಎಂದು ಆರೋಪ. 11. ಪ್ಯಾರಿಸ್ ಒಲಿಂಪಿಕ್ಸ್: ಭಾರತಕ್ಕೆ 1 ಬೆಳ್ಳಿ, 5 ಕಂಚು
ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಭಾರತದ್ದು ನಿರೀಕ್ಷೆಗಿಂತ ಕಡಿಮೆ ಸಾಧನೆ. ಭಾರತಕ್ಕೆ 1 ಬೆಳ್ಳಿ, 5 ಕಂಚು ಸೇರಿ 6 ಪದಕ. ನೀರಜ್ ಚೋಪ್ರಾ ಜಾವೆಲಿನ್ ಬೆಳ್ಳಿ, ಮನು ಭಾಕರ್ ಶೂಟಿಂಗ್ನಲ್ಲಿ 2 ಕಂಚು, ಸರಬೊjàತ್, ಸ್ವಪ್ನಿಲ್ ಶೂಟಿಂಗ್ನಲ್ಲಿ ತಲಾ ಒಂದೊಂದು ಕಂಚು. ಹಾಕಿಗೆ ಕಂಚಿನ ಪದಕ. ಅಮನ್ ಸೆಹ್ರಾವತ್ಗೂ ಕುಸ್ತಿಯಲ್ಲಿ ಕಂಚು. 12. ವಯನಾಡ್ ಭೂಕುಸಿತ: 200 ಮಂದಿ ಸಾವು
ಮಳೆಗಾಲ ಆರಂಭವಾಗುತ್ತಿದ್ದಂತೆಯೇ ಕೇರಳದ ವಯನಾಡ್ನಲ್ಲಿ ಭಾರೀ ಪ್ರಮಾಣದಲ್ಲಿ ಭೂಕುಸಿತ.ಜುಲೈ 30ರಂದು ಸುರಿದ ಮಳೆಗೆ ಕೇರಳದ ಮೇಪ್ಪಾಡಿ, ಮುಂಡಕ್ಕೆ„ ಪಟ್ಟಣ, ಚೂರಲ್ವುಲ ಸಂಪೂರ್ಣ ನೆಲಸಮ. ಈ ಭೂಕುಸಿತದಲ್ಲಿ
ಕರ್ನಾಟಕದ 4 ಜನರು ಸೇರಿ 200ಕ್ಕೂ ಅಧಿಕ ಮಂದಿ ಸಾವು.
ಆ.3, 4ರಂದು ಬಾಂಗ್ಲಾದೇಶದಲ್ಲಿ ನಡೆದ ವಿದ್ಯಾರ್ಥಿ ಪ್ರತಿಭಟನೆಯಲ್ಲಿ ಒಂದೇ ದಿನ 90 ಮಂದಿ ಬಲಿ. ಆ.5ಕ್ಕೆ ಶೇಖ್ ಹಸೀನಾ ಸರಕಾರ ಪತನ. ಹಸೀನಾ ಭಾರತಕ್ಕೆ ಪಲಾಯನ. ಮೊಹಮ್ಮದ್ ಯೂನುಸ್ ನೇತೃತ್ವದಲ್ಲಿ ಮಧ್ಯಾಂತರ ಸರಕಾರ. ಈ ಮಧ್ಯೆ ನಿರಂತರ ದೇಗುಲಗಳು, ಹಿಂದೂಗಳ ಮೇಲೆ ದಾಳಿ. 14. ಮುಡಾ ಕೇಸ್: ಸಿಎಂ ವಿರುದ್ಧ ವಿಚಾರಣೆ
ಮುಡಾ ನಿವೇಶನ ಹಂಚಿಕೆ ಪ್ರಕಣದಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಪತ್ನಿ ಹೆಸರು. ಸಿಎಂ ವಿರುದ್ಧ ವಿರುದ್ಧ ಪ್ರಾಸಿಕ್ಯೂಷನ್ಗೆ ಆ.17ಕ್ಕೆ ರಾಜ್ಯಪಾಲ ಅನುಮತಿ. ಸೆ.27ರಂದು ಸಿದ್ದರಾಮಯ್ಯ, ಪತ್ನಿ ವಿರುದ್ಧ ಎಫ್ಐಆರ್. ಸೆ.30ರಂದು ಇ.ಡಿ.ಯಿಂದಲೂ ಕೇಸ್. ಬೆನ್ನಲ್ಲೇ ಮುಡಾ ಸೈಟ್ ವಾಪಸ್.
ಗುತ್ತಿಗೆದಾರರಿಗೆ ಜಾತಿನಿಂದನೆ ಪ್ರಕರಣದಲ್ಲಿ ಬೆಂಗಳೂರಿನ ಬಿಜೆಪಿ ಶಾಸಕ ಮುನಿರತ್ನ ಸೆ.13 ರಂದು ಬಂಧನ. ಈ ನಡುವೆ ಮಹಿಳೆ ಯೊಬ್ಬ ಳಿಂದ ಶಾಸಕ ಮುನಿರತ್ನ ವಿರುದ್ಧ ಹನಿಟ್ರ್ಯಾಪ್ ಹಾಗೂ ಅತ್ಯಾಚಾರ ದೂರು. ಈ ಪ್ರಕರಣದಲ್ಲಿ ಮತ್ತೆ ಮುನಿರತ್ನ ಸೆರೆ. ಅ.15ಕ್ಕೆ ಬೇಲ್. ಡಿ.25ರಂದು ಮುನಿರತ್ನಗೆ ಮೊಟ್ಟೆ ಎಸೆತ. 16. ಮಧ್ಯಪ್ರಾಚ್ಯ ಸಂಘರ್ಷ: ಹಮಾಸ್ ನಾಯಕ ಫಿನಿಶ್
2023ರ ಇಸ್ರೇಲ್ ಮೇಲಿನ ದಾಳಿ ಸಂಚುಕೋರ ಹಮಾಸ್ ನಾಯಕ ಯಹ್ಯಾ ಸಿನ್ವರ್ ಆ.17 ರಂದು ಹತ್ಯೆ. ಇಸ್ರೇಲ್ ಮೇಲೆ ಇರಾನ್ 300 ಕ್ಷಿಪಣಿ ದಾಳಿ. ಲೆಬನಾನ್ನಲ್ಲಿ ಪೇಜರ್ ಸ್ಫೋಟ. ಸಿರಿಯಾ ಸರ್ವಾಧಿಕಾರಿ ಸರಕಾರದ ಪತನ. ಈ ವರ್ಷ ಪೂರ್ತಿ ಇಡೀ ಮಧ್ಯ ಪ್ರಾಚ್ಯ ಸಂಘರ್ಷ ಹಾಗೂ ಯುದ್ಧದ ಪರಿಸ್ಥಿತಿ ನಿರ್ಮಾಣ. 17. ಪ್ಯಾರಾಲಿಂಪಿಕ್ಸ್ : ಭಾರತ 29 ಪದಕ ಸಾಧನೆ
ಪ್ಯಾರಾಲಿಂಪಿಕ್ಸ್ನಲ್ಲಿ ಭಾರತದ್ದು ಐತಿಹಾಸಿಕ ಸಾಧನೆ. 29 ಪದಕ ಗೆಲುವು. ಒಟ್ಟು 7 ಚಿನ್ನ, 9 ಬೆಳ್ಳಿ, 13 ಕಂಚು. ಅವನಿ (ಶೂಟಿಂಗ್), ಕುಮಾರ್ ನಿಲೇಶ್ (ಬ್ಯಾಡ್ಮಿಂಟನ್), ಸುಮಿತ್ (ಆ್ಯತ್ಲೆಟಿಕ್ಸ್), ಹರ್ವಿಂದರ್ ಸಿಂಗ್ (ಬಿಲ್ಗಾರಿಕೆ), ಧರ್ಮಬೀರ್ ನೈನ್, ಪ್ರವೀಣ್ ಕುಮಾರ್, ನವದೀಪ್ (ಆ್ಯತ್ಲೆಟಿಕ್ಸ್)ಗೆ ಚಿನ್ನದ ಪದಕ. 18. ಒಂದು ದೇಶ ಒಂದು ಚುನಾವಣೆಗೆ ಮುನ್ನುಡಿ
ಲೋಕಸಭೆ, ವಿಧಾನಸಭೆ, ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಏಕಕಾಲಕ್ಕೆ ನಡೆಸುವ ಒಂದು ದೇಶ-ಒಂದು ಚುನಾವಣೆ ವರದಿಗೆ ಸೆ.18ಕ್ಕೆ ಕೇಂದ್ರ ಸಂಪುಟ ಒಪ್ಪಿಗೆ. ಡಿ.17ರಂದು ಇದಕ್ಕೆ ಸಂಬಂಧಿಸಿದ 2 ವಿಧೇಯಕ ಲೋಕಸಭೆಯಲ್ಲಿ ಮಂಡನೆ. ವಿಪಕ್ಷ ಗಳಿಂದ ವಿರೋಧ. ಕೊನೆಗೆ ಮಸೂ ದೆ ಜೆಪಿಸಿ ಪರಿಶೀಲನೆಗೆ ಒಪ್ಪಿಗೆ. 19. ತಿರುಮಲ ತಿರುಪತಿ ಲಡ್ಡು ಪ್ರಸಾದ ವಿವಾದ
ತಿರುಮಲ ತಿರುಪತಿ ದೇವಾಲಯದ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ವಿವಾದ. ಸೆ.2ಕ್ಕೆ ಚಂದ್ರಬಾಬು ನಾಯ್ಡು ಸರಕಾರ ಮಾಹಿತಿ. ಹಿಂದಿನ ಜಗನ್ ರೆಡ್ಡಿ ಸರಕಾರದ ವೇಳೆಯಲ್ಲಿ ಈ ಅಪಚಾರ ಆರೋಪ. ಬಳಿಕ ಪ್ರಯೋಗಾಲಯದಲ್ಲಿ ಪರೀಕ್ಷೆಗಳನ್ನು ನಡೆಸಿ, ಪ್ರಕರಣ ಸುಪ್ರೀಂ ಕೋರ್ಟ್ಗೆ ಹೋಗಿ ಪ್ರಕರಣ ಇತ್ಯರ್ಥ. 20. ಡೊನಾಲ್ಡ್ ಟ್ರಂಪ್ ಮತ್ತೆ ಅಮೆರಿಕ ಅಧ್ಯಕ್ಷ
ನ.5ಕ್ಕೆ ಅಮೆರಿಕ ಅಧ್ಯಕ್ಷ ಚುನಾವಣೆ. ಪ್ರಚಾರದ ವೇಳೆ ಕೊಲೆ ಯತ್ನ, ವಿವಿಧ ಆರೋಪಗಳ ನಡುವೆ ಯೂ ಡೊನಾಲ್ಡ… ಟ್ರಂಪ್ ಅಮೆರಿಕದ 47ನೇ ಅಧ್ಯಕ್ಷರಾಗಿ ಮತ್ತೂಮ್ಮೆ ಆಯ್ಕೆ. ಚುನಾವಣೆ ನಡೆದ 11 ವಾರ ಬಳಿಕ ವಷ್ಟೇ ಅಧ್ಯಕ್ಷರ ಅಧಿಕೃತ ಘೋಷಣೆ. ಜನವರಿಯಲ್ಲಿ ಅಧ್ಯಕ್ಷರಾಗಿ ಟ್ರಂಪ್ ಅಧಿಕಾರ ಸ್ವೀಕಾರ ಸಾಧ್ಯತೆ.
ನ.18ರ ರಾತ್ರಿ ಕರ್ನಾಟಕದ ಉಡುಪಿ ಜಿಲ್ಲೆಯ ಹೆಬ್ರಿಯಲ್ಲಿ 3 ರಾಜ್ಯಗಳ ಮೋಸ್ಟ್ ವಾಂಟೆಡ್ ನಕ್ಸಲ್ ನಾಯಕ ವಿಕ್ರಮ್ ಗೌಡ ಹತ್ಯೆ. ಇನ್ನು ದೇಶದಲ್ಲೂ ಒಟ್ಟು 255 ನಕ್ಸಲರ ಹತ್ಯೆ. 2026ರ ಒಳಗೆ ಸಂಪೂರ್ಣ ನಕ್ಸಲ್ ನಿರ್ಮೂಲನೆ ಕೇಂದ್ರ ಶಪಥ.
ಛತ್ತೀಸ್ಗಢ, ಝಾರ್ಖಂಡ್ನಲ್ಲಿ ಅತಿ ಹೆಚ್ಚು ಕಾರ್ಯಾಚರಣೆ. 22. ಡಿ.ಗುಕೇಶ್ ವಿಶ್ವ ಚೆಸ್ ಚಾಂಪಿಯನ್
ಈ ಬಾರಿ ಸಿಂಗಾಪುರದಲ್ಲಿ ನಡೆದ 14 ಪಂದ್ಯಗಳ ಚೆಸ್ ವಿಶ್ವ ಚಾಂಪಿಯನ್ಶಿಪ್ನಲ್ಲಿ 3 ಪಂದ್ಯ ಗೆದ್ದ ದೊಮ್ಮರಾಜು ಗುಕೇಶ್ 7.5-6.5 ಅಂಕಗಳಿಂದ ಚೀನದ ಡಿಂಗ್ ಲಿರೆನ್ರನ್ನು ಸೋಲಿಸಿದರು. ಅಲ್ಲಿಗೆ ವಿಶ್ವನಾಥ್ ಆನಂದ್ ಅನಂತರ ಈ ಕಪ್ ಗೆದ್ದು ಇಡೀ ದೇಶವನ್ನು ಆನಂದದಲ್ಲಿ ಮುಳುಗಿಸಿದರು. 23. ಸಿ.ಟಿ.ರವಿ-ಲಕ್ಷ್ಮೀ ಹೆಬ್ಟಾಳ್ಕರ್ ಜಟಾಪಟಿ
ಬೆಳಗಾವಿ ಅಧಿವೇಶನದ ಕೊನೆ ದಿನ ಡಿ.19 ರಂದು ಸಿ.ಟಿ.ರವಿ, ಪರಿಷತ್ನಲ್ಲಿ ತಮಗೆ ಕೀಳು ಪದ ಬಳಸಿದ್ದಾರೆಂದು ಸಚಿವೆ ಲಕ್ಷಿ$¾à ಹೆಬ್ಟಾ ಳ್ಕರ್ ಆರೋಪ. ಪರಸ್ಪರ ದೂರು. ಬೆಳಗಾವಿ ಪೊಲೀ ಸರಿಂದ ರವಿ ಬಂಧನ. ರಾತ್ರಿಯೆಲ್ಲ ಸುತ್ತಾಡಿಸಿದ ಪೊಲೀಸರು. ಮಾರನೇ ಬೆಂಗಳೂರು ಕೋರ್ಟ್ನಿಂದ ಸಿ.ಟಿ.ರವಿಗೆ ಜಾಮೀನು. 24. ದಕ್ಷಿಣ ಕೊರಿಯಾ ವಿಮಾನ ದುರಂತ: 179 ಸಾವು
ಡಿ.29ರಂದು, ರವಿವಾರ ಬೆಳಗ್ಗೆ ದಕ್ಷಿಣ ಕೊರಿಯಾದ ಮುವಾನ್ ಏರ್ಪೋರ್ಟ್ ರನ್ವೇನಲ್ಲಿ ಲ್ಯಾಂಡಿಂಗ್ ಮಾಡುವಾಗ ಅವಘಡ. ತಡೆ ಗೋಡೆಗೆ ಡಿಕ್ಕಿ ಹೊಡೆದು, ಹೊತ್ತಿ ಉರಿದ ವಿಮಾನ. 181 ಪ್ರಯಾಣಿಕರ ಪೈಕಿ ಇಬ್ಬರು ವಿಮಾನ ಸಿಬಂದಿ ಪ್ರಾಣಾಪಾಯದಿಂದ ಪಾರು. ಉಳಿದವರು ಸಜೀವ ದಹನ.