ಮಹಾನಗರ: ಪದೇ ಪದೇ ಸಂಚಾರ ನಿಯಮ ಉಲ್ಲಂಘನೆ ಮಾಡುವವರ ಚಾಲನಾ ಪರವಾನಿಗೆ ರದ್ದುಪಡಿಸಲು ಆರ್‌ಟಿಒಗೆ ಶಿಫಾರಸು ಮಾಡುವ ಪ್ರಕ್ರಿಯೆಯನ್ನು ಶೀಘ್ರದಲ್ಲೇ ಆರಂಭಿಸಲಾಗುವುದು ಎಂದು ಮಂಗಳೂರು ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಆರ್. ಜೈನ್ ತಿಳಿಸಿದ್ದಾರೆ.
ರವಿವಾರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಜರಗಿದ ಪರಿಶಿಷ್ಟ ಜಾತಿ, ಪಂಗಡದವರ ಅಹವಾಲು ಸ್ವೀಕಾರ ಸಭೆಯಲ್ಲಿ ಅವರು ಮಾತನಾಡಿದರು. ಕೆಲವರು ಪದೇ ಪದೇ ಸಂಚಾರ ನಿಯಮ ಉಲ್ಲಂ ಸಿ ದಂಡ ಪಾವತಿಸುತ್ತಾರೆ. ದಿನದಲ್ಲಿ ಒಮ್ಮೆ ದಂಡ ಪಾವತಿಸಿದರೆ ಅನಂತರ ನಿಶ್ಚಿಂತೆಯಿಂದ ಸಂಚಾರ ನಿಯಮ ಉಲ್ಲಂಘಿಸಬಹುದು ಎಂಬ ಮನೋಭಾವ ಇನ್ನು ಕೆಲವರಲ್ಲಿದೆ. ಅಂಥವರ ವಿರುದ್ಧ ಕಠಿನ ಕ್ರಮದ ಅಗತ್ಯವಿದೆ. ಹಾಗಾಗಿ ಹೆಲ್ಮೆಟ್ ರಹಿತ ಬೈಕ್ ಸವಾರಿ, ಟ್ರಿಪಲ್ ರೈಡ್ ಸಹಿತ ಸಂಚಾರ ನಿಯಮಗಳ ಉಲ್ಲಂಘನೆ ಪುನರಾವರ್ತನೆ ಮಾಡುವವರ ಡ್ರೈವಿಂಗ್ ಲೈಸನ್ಸ್ ರದ್ದುಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಆಯುಕ್ತರು ತಿಳಿಸಿದರು.
ಚಾಲಕರ ವಿರುದ್ಧ ದೂರಿಗೆ ವಾಟ್‌ಆ್ಯಪ್ ಸಂಖ್ಯೆ ಕೆಲವು ಖಾಸಗಿ ಬಸ್‌ಗಳ ಚಾಲಕರು ಇಯರ್‌ಫೋನ್ ಹಾಕಿಕೊಂಡೇ ಬಸ್ ಚಲಾಯಿಸುತ್ತಿರುವುದು ಸಹಿತ ಸಂಚಾರ ನಿಯಮ ಉಲ್ಲಂ ಸುತ್ತಿದ್ದಾರೆ. ಅದನ್ನು ಕೂಡಲೇ ಪೊಲೀಸರಿಗೆ ತಿಳಿಸಲು ಬಸ್‌ಗಳಲ್ಲಿ ವಾಟ್‌ಆ್ಯಪ್ ನಂಬರ್ ಪ್ರದರ್ಶಿಸಬೇಕು ಎಂದು ಸದಾಶಿವ ಉರ್ವಸ್ಟೋರ್ ಮನವಿ ಮಾಡಿದರು. ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. ಇದೇ ರೀತಿ ಬೇರೆ ವಾಹನಗಳ ಚಾಲಕರು, ಸವಾರರು ವಾಹನ ಸಂಚಾರ ನಿಯಮ ಉಲ್ಲಂಘಿಸಿದರೆ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ಪೊಲೀಸ್ ಆಯುಕ್ತರು ತಿಳಿಸಿದರು.
ಗಾಂಜಾ ಹಾವಳಿ
ಚೆಂಬುಗುಡ್ಡೆ ಪರಿಸರದಲ್ಲಿ ಗಾಂಜಾ ಹಾವಳಿ ಹೆಚ್ಚಾಗಿದ್ದು, ಸಣ್ಣ ವಯಸ್ಸಿನ ಹುಡುಗರು ಕೂಡ ಗಾಂಜಾ ಸೇವನೆ, ಮಾರಾಟದಲ್ಲಿ ತೊಡಗಿಕೊಂಡಿರುವುದು ಕಂಡುಬಂದಿದೆ. ಪೊಲೀಸರು ಬೀಟ್ ಕರ್ತವ್ಯವನ್ನು ಸರಿಯಾಗಿ ಮಾಡಿ ಭಯ ಹುಟ್ಟಿಸುವ ಅಗತ್ಯವಿದೆ ಎಂದು ದಲಿತ ಮುಂದಾಳು ಓರ್ವರು ಹೇಳಿದಾಗ, ಇಂತಹ ಸೂಕ್ಷ್ಮ ವಿಚಾರಗಳನ್ನು ಪೊಲೀಸರಿಗೆ ತಿಳಿಸಲು ಸಭೆಗಳಿಗಾಗಿ ಕಾಯಬೇಕಿಲ್ಲ. ನೇರವಾಗಿ ಫೋನ್‌ನಲ್ಲಿಯೇ ಮಾಹಿತಿ ನೀಡಬಹುದು. ಕೂಡಲೇ ಕ್ರಮ ಕೈಗೊಳ್ಳಲಾಗುವುದು ಎಂದು ಆಯುಕ್ತರು ಪ್ರತಿಕ್ರಿಯಿಸಿದರು.
Related Articles
ಶಾಲಾ ಮೈದಾನದಲ್ಲೇ ಪಾರ್ಕಿಂಗ್ ಮಾಡಿಸಿ
ಬೆಂದೂರ್‌ವೆಲ್‌ನಲ್ಲಿ ಪ್ರತಿದಿನ ಟ್ರಾಫಿಕ್ ಜಾಮ್ ಆಗುತ್ತಿದೆ. ಇಲ್ಲಿರುವ ಎರಡು ಶಾಲೆಗಳ ವಿದ್ಯಾರ್ಥಿಗಳನ್ನು ಕರೆದೊಯ್ಯಲು ಬರುವ ಅವರ ವಾಹನಗಳನ್ನು ರಸ್ತೆ ಪಕ್ಕದಲ್ಲಿ ನಿಲ್ಲಿಸುತ್ತಿರುವುದು ಇದಕ್ಕೆ ಮುಖ್ಯ ಕಾರಣ. ಹಾಗಾಗಿ ಅಂತಹ ವಾಹನಗಳನ್ನು ಶಾಲೆಗಳ ಮೈದಾನ ದಲ್ಲಿಯೇ ನಿಲ್ಲಿಸಲು ಸೂಚನೆ ನೀಡಬೇಕು ಎಂದು ಅನಿಲ್ ಕಂಕನಾಡಿ ಆಗ್ರಹಿಸಿದರು. ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಅಂಶು ಕುಮಾರ್ ಉಪಸ್ಥಿತರಿದ್ದರು. ದಲಿತ ಮುಂದಾಳುಗಳಾದ ಎಸ್‌ಪಿ ಆನಂದ, ವಿಶ್ವನಾಥ ಚೆಂಡ್ತಿಮಾರು, ಅಮಲ ಜ್ಯೋತಿ, ಸುನಿಲ್, ಜಗದೀಶ್ ಪಾಂಡೇಶ್ವರ ಮೊದಲಾದವರು ವಿವಿಧ ವಿಷಯಗಳನ್ನು ಪ್ರಸ್ತಾವಿಸಿದರು.
ದೂರು ನೀಡಿ ವಾಪಸಾಗುವಾಗ ಬೆದರಿಕೆ!
ಮಟ್ಕಾ ದಂಧೆಯ ಬಗ್ಗೆ ಇತ್ತೀಚೆಗೆ ಪೊಲೀಸ್ ಅಧಿಕಾರಿಯೋರ್ವರಿಗೆ ಮಾಹಿತಿ ನೀಡಲಾಗಿತ್ತು. ಆದರೆ ದೂರುದಾರರು ಮನೆ ತಲುಪುವಾಗ ಅವರಿಗೆ ಮಟ್ಕಾ
ದಂಧೆಯವರಿಂದ ಬೆದರಿಕೆ ಕರೆ ಬಂದಿತ್ತು. ದೂರಿನ ವಿಷಯ ಸೋರಿಕೆಯಾಗಿದ್ದು ಹೇಗೆ ಎಂದು ಓರ್ವರು ಪ್ರಶ್ನಿಸಿದರು. ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ದಿನೇಶ್ ಕುಮಾರ್ ಹೇಳಿದರು.
ಪ್ರಸ್ತಾವಗೊಂಡ ಇತರ ಪ್ರಮುಖ ವಿಷಯಗಳು zಉಳ್ಳಾಲದಲ್ಲಿ ದ್ವಿಚಕ್ರ ವಾಹನದಲ್ಲಿ ಹೆಲ್ಮೆಟ್ ರಹಿತ ಸಂಚಾರ, ಟ್ರಿಪಲ್ ರೈಡ್ ಸಾಮಾನ್ಯವಾಗಿದೆ. ಪೊಲೀಸರು ಕೇಸು ಹಾಕಲು ಹೆದರುತ್ತಿದ್ದಾರೆ. zತಡರಾತ್ರಿವರೆಗೂ ಡಿಜೆ ಹಾಕುವುದನ್ನು ತಡೆಯಬೇಕು. ಡಿಜೆ ಆಪರೇಟರ್‌ಗಳ ಮಾಹಿತಿಯನ್ನು ಪೊಲೀಸರು ಸಂಗ್ರಹಿಸಿಟ್ಟುಕೊಳ್ಳಬೇಕು.