Advertisement

ವಿದೇಶಿ ಪ್ರವಾಸ ಕಥನ 3: ಅಬುಧಾಬಿಯಲ್ಲಿ ಟ್ರಾಫಿಕ್‌ ಪೊಲೀಸರೇ ಇಲ್ಲ, ಗುಣಮಟ್ಟದ ಹೆದ್ದಾರಿ..

01:13 PM Jul 10, 2024 | Team Udayavani |

ಅಬುಧಾಬಿಗೆ ಬಂದ ಮೊದಲ ದಿನವೇ ಗಮನ ಸೆಳೆಯುವುದು ಇಲ್ಲಿನ ಸಾರಿಗೆ ಸೌಕರ್ಯ ಮತ್ತು ವಾಹನ ಚಾಲಕರು ಗಮನ ಹರಿಸುತ್ತಿರುವ ರಸ್ತೆ ಸುರಕ್ಷತಾ ಕ್ರಮ. ಇಲ್ಲಿನ ಹೆದ್ದಾರಿಗಳು ಅತ್ಯಂತ ವಿಸ್ತಾರವಾಗಿದ್ದು ಅತ್ಯಂತ ವೇಗವಾಗಿ ಚಲಿಸುವ ಅವಕಾಶವಿದೆ ಆದರೆ ಪ್ರತಿಯೊಂದು ವಾಹನಗಳಿಗೂ ವೇಗದ ಮಿತಿ ಇದೆ.

Advertisement

ಸಣ್ಣಪುಟ್ಟ ವಾಹನಗಳ ಸಂಚಾರಕ್ಕೆ ಪ್ರತ್ಯೇಕವಾದ ದಾರಿಯನ್ನು ಮಾಡಿಕೊಡಲಾಗಿದೆ. ಘನ ವಾಹನಗಳ ಸಂಚಾರಕ್ಕೆ ಹಗಲು ಹೊತ್ತಿನಲ್ಲಿ ಸಂಚಾರಕ್ಕೆ ನಿಬ೯ಂಧವೂ ಇದೆ. ಪ್ರತಿಯೆಾಬ್ಬ ವಾಹನ ಚಾಲಕನು ಕಣ್ಣಿನಲ್ಲಿ ಕಣ್ಣಿಟ್ಥು ಅತ್ಯಂತ ಜಾಗೃತಿಯಿಂದ ವಾಹನ ಚಲಾಯಿಸುವುದನ್ನು ಕಾಣ ಬಹುದು. ಅದಕ್ಕೆ ಇಲ್ಲಿನ ಚಾಲಕರು ನೀಡುವ ಕಾರಣವೆಂದರೆ ವಾಹನ ಸಂಚಾರ ನಿಯಮ ಒಂದು ಸ್ವಲ್ಪ ತಪ್ಪಿ ನಡೆದರೂ ಸರಿ ಸುಮಾರು ಎಂಭತ್ತು ಸಾವಿರದಷ್ಟು(ಭಾರತದ ರೂಪಾಯಿ ದರದಲ್ಲಿ) ದಂಡ ಬೀಳ ಬಹುದು.

ಡ್ರೈವಿಂಗ್ ಲೈಸೆನ್ಸ್ ಪಡೆಯುವುದು ತುಂಬಾ ಕಷ್ಟ. ಹತ್ತು ಹಲವು ಪರೀಕ್ಷೆಗಳಲ್ಲಿ ಕಡ್ಡಾಯವಾಗಿ ಪಾಸಾಗಲೇಬೇಕು.ಯಾವುದೇ ವಸೂಲಿ ಮಧ್ಯ ವರ್ತಿಗಳ ಕೆಲಸ ಇಲ್ಲಿ ನಡೆಯುವುದೇ ಇಲ್ಲ. ಟ್ರಾಫಿಕ್ ನಲ್ಲಿ ಎಲ್ಲೂ ಕೂಡಾ ಪೊಲೀಸ್ ನಿಂತಿರುವುದು ಕಾಣುವುದಿಲ್ಲ ಹಾಗಂತ ಪ್ರತಿಯೊಂದು ವಾಹನದ ಚಲನ ವಲನ ಎಲ್ಲವೂ ಸಿ.ಸಿ.ಕ್ಯಾಮರಾದಲ್ಲಿ ಸೆರೆ ಹಿಡಿದು ತಕ್ಷಣವೇ ಕಾರ್ಯ ಚರಣೆ ಮಾಡುವ ವ್ಯವಸ್ಥೆ ಅಲ್ಲಿದೆ.

ಇನ್ನೂ ಪ್ರಮುಖವಾಗಿ ನಾನು ಗಮನಿಸಿದ್ದು ಸರ್ವಿಸ್ ರಸ್ತೆಯಲ್ಲಿ ಹಾಕಿರುವ ಜೀಬ್ರಾ ಕ್ರಾಸಿನಲ್ಲಿ ಯಾವುದೇ ಮಗು ಕೂಡಾ ನಡೆದು ಬಂದರು ವಾಹನ ಚಾಲಕರು ಅವರಿಗೆ ಮೊದಲ ಆದ್ಯತೆ ಕೊಟ್ಟು ಅವರು ಧಾಟಿದ ಮೇಲೆ ಮತ್ತೆ ಚಲಿಸ ಬೇಕು. ಹಾಗಾಗಿ ಇಲ್ಲಿ ರಸ್ತೆ ದಾಟುವ ಪಾದಚಾರಿಗಳ ಜೀವಕ್ಕೆ ತುಂಬಾ ಬೆಲೆ ಇದೆ ಗೌರವವೂ ಇದೆ. ಯಾವುದೆ ಒಂದು ವಾಹನಕೂಡ ಒಂದು ನಿಮಿಷ ಕೂಡಾ ರಸ್ತೆಯ ನಿಯಮ ಉಲಂಘಿಸಿ ವಾಹನ ಚಾಲನೆ ಮಾಡಿದನ್ನು ನಾನು ನೇೂಡಿಲ್ಲ.

Advertisement

ಇಲ್ಲಿ ಹೆಚ್ಚಿನ ಜನರು ಸ್ವಂತ ನಾಲ್ಕು ಚಕ್ರದ ವಾಹನಗಳನ್ನೆ ಬಳಸುತ್ತಾರೆ. ಅಂದರೆ ಇಲ್ಲಿನ ಟ್ಯಾಕ್ಸಿಗಳು ತುಂಬಾ ಚೆನ್ನಾಗಿದೆ ಆದರೆ ತೀರ ದುಬಾರಿ. ರಿಕ್ಷಾಗಳು ಇಲ್ಲವೇ ಇಲ್ಲ. ಬಸ್ಸುಗಳು ತಿರುಗಾಡುವುದು ತೀರ ವಿರಳ. ಇಲ್ಲಿನ ಬಸ್ಸುಗಳಲ್ಲಿ ಕಂಡಕ್ಟರ್ ಇರುವುದಿಲ್ಲ ಬದಲಾಗಿ ಕಾರ್ಡ್ ಗಳನ್ನು ಸ್ವೇಪ್ ಮಾಡುವುದರ ಮೂಲಕ ಪಯಾಣ ಮಾಡ ಬೇಕು.‌ ಬಸ್ಸಿನ ಪಯಾಣ ದರ ತುಂಬಾ ಕಡಿಮೆ ಎಂದೇ ಹೇಳಬಹುದು. ದ್ವಿ ಚಕ್ರ ವಾಹನಗಳ ಸಂಖ್ಯೆಯು ಕೂಡಾ ತೀರ ಕಡಿಮೆ ಎಂದೇ ಹೇಳ ಬಹುದು.ರಸ್ತೆಯ ಗುಣಮಟ್ಟ ತುಂಬಾ ಚೆನ್ನಾಗಿದೆ. ಸಿಗ್ನಲ್ ವ್ಯವಸ್ಥೆ ತುಂಬಾ ಚೆನ್ನಾಗಿ ಅಳವಡಿಸಿದ್ದಾರೆ.

ಅಂತೂ ಅಬುಧಾಬಿ ದುಬೈ ಮುಂತಾದ ಸ್ಥಳಗಳು ವಿದೇಶಿ ಪ್ರವಾಸಿಗರನ್ನು ವಿಶೇಷವಾಗಿ ಆಕರ್ಷಿ ಸಲೂ ಇಲ್ಲಿನ ಸಾರಿಗೆ ಸೌಕರ್ಯ ಮತ್ತು ರಸ್ತೆಯ ಸುರಕ್ಷತಾ ನಿಯಮಗಳು ಕೂಡಾ ಬಹುಮುಖ್ಯ ಕಾರಣವೆಂದೇ ಹೇಳ ಬಹುದು.ಹಾಗಾಗಿ ಸಾರಿಗೆ ಮತ್ತು ರಸ್ತೆ ನಿಮಾ೯ಣದ ಗುಣಮಟ್ಟ ಹಾಗೂ ರಸ್ತೆಯ ಬದಿಯಲ್ಲಿ ಸಾಲು ಸಾಲಾಗಿ ಕಾಣುವ ಹಸಿರು ಗಿಡಗಳ ಜೊತೆ ನೀಲಿ ನೀಲಿಯಾಗಿ ಕಂಗೊಳಿಸುವ ಸಮುದ್ರದ ತೀರಗಳು ಪ್ರವಾಸಿಗರನ್ನು ಆಕಷಿ೯ಸಲು ಸಫಲವಾಗಿದೆ ಎಂದೇ ಹೇಳ ಬಹುದು. ಇದು ಒಂದು ದೇಶದ ಪ್ರವಾಸೋದ್ಯಮ ಬೆಳೆಸಲು ತೊಡ ಬೇಕಾದ ದಿಟ್ಟ ಹೆಜ್ಜೆ.

ಪ್ರೊ.ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ.(ಅಬುದಾಭಿಯಿಂದ)

Advertisement

Udayavani is now on Telegram. Click here to join our channel and stay updated with the latest news.

Next