ಮಂಗಳೂರು: ದಕ್ಷಿಣದಿಂದ ಆಗಮಿಸಿ ಕೊಂಕಣ ರೈಲ್ವೇ ಮಾರ್ಗದಲ್ಲಿ ಸಂಚರಿಸುವ ಎಲ್ಲ ರೈಲುಗಳಿಗೆ ಜೂನ್ 10ರಿಂದ ಅಕ್ಟೋಬರ್ 31ರ ವರೆಗೆ ಮುಂಗಾರು ವೇಳಾಪಟ್ಟಿ ಅನ್ವಯವಾಗಲಿದೆ. ಈ ವೇಳೆ ರೈಲುಗಳ ಆಗಮನ ನಿರ್ಗಮನದಲ್ಲಿ ಪರಿಷ್ಕರಣೆಯಾಗಲಿದೆ.
ಕೊಂಕಣ ಮೂಲಕ ಸಂಚರಿಸುವ ಕೆಲವು ಪ್ರಮುಖ ರೈಲುಗಳ ವೇಳಾಪಟ್ಟಿ ಇಲ್ಲಿ ಕೊಡಲಾಗಿದೆ.
ನಂ. 12620 ಮಂಗಳೂರು ಸೆಂಟ್ರಲ್ ಮುಂಬಯಿ ಲೋಕಮಾನ್ಯ ತಿಲಕ್ ಮತ್ಸ ಗಂಧ ಎಕ್ಸ್ಪ್ರೆಸ್ ಮಂಗಳೂರು ಸೆಂಟ್ರಲ್ನಿಂದ ಮಧ್ಯಾಹ್ನ 12.45 (ಪ್ರಸ್ತುತ 2.20)ಕ್ಕೆ 1.35 ಗಂಟೆ ಮೊದಲು ಹೊರಡಲಿದೆ. ನಂ. 12619 ಲೋಕಮಾನ್ಯ ತಿಲಕ್ ಟರ್ಮಿನಸ್-ಮಂಗಳೂರು ಸೆಂಟ್ರಲ್ ಮತ್ಸ ಗಂಧ ಮಂಗಳೂರು ಸೆಂಟ್ರಲ್ಗೆ 2.30 ಗಂಟೆ ತಡವಾಗಿ ಬೆಳಗ್ಗೆ 10.10ಕ್ಕೆ (7.40) ಬರಲಿದೆ.
ನಂ. 12133 ಮುಂಬಯಿ ಸಿಎಸ್ಎಂಟಿ-ಮಂಗಳೂರು ಜಂಕ್ಷನ್ ಎಕ್ಸ್ಪ್ರೆಸ್ ಮಂಗಳೂರು ಜಂಕ್ಷನ್ಗೆ 2.35 ನಿಮಿಷ ತಡವಾಗಿ ಸಂಜೆ 3.40ಕ್ಕೆ (1.05) ಆಗಮಿಸಲಿದೆ. ನಂ. 12134 ಮಂಗಳೂರು ಜಂಕ್ಷನ್-ಮುಂಬಯಿ ಸಿಎಸ್ಎಂಟಿ ಮಂಗಳೂರು ಜಂಕ್ಷನ್ನಿಂದ ಸಂಜೆ 4.35ಕ್ಕೆ (2.00) 2.35 ಗಂಟೆ ತಡವಾಗಿ ಹೊರಡಲಿದೆ.
Related Articles
ನಂ. 06601 ಮಡ ಗಾಂವ್-ಮಂಗಳೂರು ಸೆಂಟ್ರಲ್ ಡೈಲಿ ಎಕ್ಸ್ಪ್ರೆಸ್ ವಿಶೇಷ ರೈಲು ಮಡಗಾಂವ್ನಿಂದ ಮಧ್ಯಾಹ್ನ 1.50ಕ್ಕೆ ಹೊರಡಲಿದೆ. ಮಂಗಳೂರು ಜಂಕ್ಷನ್ನಲ್ಲಿ ಇದರ ಆಗಮನ ನಿರ್ಗಮನ ಸಮಯ ರಾತ್ರಿ 9.08/9.10(8.33/8.35). ಮಂಗಳೂರು ಸೆಂಟ್ರಲ್ನಲ್ಲಿ ಆಗಮನ 9.40(9.05). ಒಟ್ಟು 35 ನಿಮಿಷ ತಡವಾಗಲಿದೆ.
ನಂ. 06602 ಮಂಗಳೂರು ಸೆಂಟ್ರಲ್ ಮಡಗಾಂವ್ ಜಂಕ್ಷನ್ ಡೈಲಿ ಎಕ್ಸ್ಪ್ರೆಸ್ ವಿಶೇಷ ರೈಲು ಮಡಗಾಂವ್ಗೆ ಮಧ್ಯಾಹ್ನ 1.15ಕ್ಕೆ (1.10) ಆಗಮಿಸಲಿದೆ. ಮಂಗಳೂರು ಸೆಂಟ್ರಲ್ನಲ್ಲಿ ಬದಲಾವಣೆಯಿಲ್ಲ. ಮಂಗಳೂರು ಜಂಕ್ಷನ್ನಲ್ಲಿ ಸಮಯ 5.43/5.45.
ನಂ.12617 ಎರ್ನಾಕುಳಂ ಜಂಕ್ಷನ್ ಹಜ್ರತ್ ನಿಜಾಮುದ್ದಿನ್ ಮಂಗಳಾ ಲಕ್ಷದ್ವೀಪ್ ಎಕ್ಸ್ ಪ್ರಸ್ ರೈಲು ಎರ್ನಾಕುಳಂ ಜಂಕ್ಷನ್ನಿಂದ ಬೆಳಗ್ಗೆ 10.10 (1.25)ಕ್ಕೆ 3.15 ಗಂಟೆ ಮುಂಚಿತವಾಗಿ ಹೊರಡಲಿದ್ದು, ನಿಜಾಮು ದ್ದಿನ್ಗೆ ಮಧ್ಯಾಹ್ನ 1.20ಕ್ಕೆ (1.35) ತಲುಪಲಿದೆ.
ನಂ. 12618 ಹ.ನಿಜಾಮುದ್ದಿನ್ ಎರ್ನಾಕುಳಂ ಜಂಕ್ಷನ್ ರೈಲು ಎರ್ನಾಕುಳಂಗೆ 10.25ಕ್ಕೆ (7.30) ತಲಪಲಿದ್ದು 2.55 ಗಂಟೆ ತಡವಾಗಲಿದೆ. ಮಂಗಳೂರು ಜಂಕ್ಷನ್ ಆಗಮನ/ನಿರ್ಗಮನ ಸಮಯ 11.25/11.40(10.30/10.40).
ನಂ. 12431 ತಿರುವನಂತಪುರಂ ಸೆಂಟ್ರಲ್-ಹಜ್ರತ್ ನಿಜಾಮುದ್ದಿನ್ ರಾಜಧಾನಿ ಎಕ್ಸ್ಪ್ರೆಸ್(ಟ್ರೈವೀಕ್ಲಿ) ಮಂಗಳವಾರ, ಗುರು, ಶುಕ್ರವಾರ ಗಳಂದು ತಿರುವನಂತಪುರ ಸೆಂಟ್ರಲ್ನಿಂದ ಮಧ್ಯಾಹ್ನ 2.40 (ಈಗಿನ ಸಮಯ ರಾತ್ರಿ 7.15)ಕ್ಕೆ 4.35 ಗಂಟೆ ಮುಂಚಿತವಾಗಿ ಹೊರಡಲಿದೆ. 12432 ಹ.ನಿಜಾಮುದ್ದಿನ್ ತಿರುವನಂತಪುರಂ ಸೆಂಟ್ರಲ್ ಟ್ರೈವೀಕ್ಲಿ ರಾಜಧಾನಿ ರವಿ, ಮಂಗಳ, ಬುಧವಾರಗಳಂದು ತಿರುವನಂತಪುರಂ ಸೆಂಟ್ರಲ್ಗೆ 2.15 ಗಂಟೆ ತಡವಾಗಿ ಮಧ್ಯರಾತ್ರಿ 1.50ಕ್ಕೆ (11.35) ಬರಲಿದೆ.
ನಂ. 16346 ತಿರುವನಂತ ಪುರ-ಮುಂಬಯಿ ಲೋಕಮಾನ್ಯ ತಿಲಕ್ ನೇತ್ರಾವತಿ ಎಕ್ಸ್ಪ್ರೆಸ್ ಸಮಯ ಬದಲಾಗದೆ 9.15ಕ್ಕೆ ಹೊರಡಲಿದೆ. ಕಾಸರಗೋಡು ಆಗಮನ/ನಿರ್ಗಮನ ರಾತ್ರಿ 8.03/8.05, ಮಂಗಳೂರು ಜಂಕ್ಷನ್ 8.30/8.35, ಮುಂಬಯಿ ಎಲ್ಟಿಟಿ ಆಗಮನ ಸಂಜೆ 5.05.
ನಂ. 16345 ಮುಂಬಯಿ ಎಲ್ಟಿಟಿ ತಿರುವನಂತಪುರ ನೇತ್ರಾವತಿ ಮುಂಬಯಿಯಿಂದ 11.40ಕ್ಕೆ ಹೊರಡಲಿದೆ. ತಿರುವನಂತಪುರಕ್ಕೆ ರಾತ್ರಿ 7.35(6.08)ಕ್ಕೆ ತಲುಪಲಿದೆ. ಮಂಗಳೂರು ಜಂಕ್ಷನ್ 05.45/05.50, ಕಾಸರಗೋಡು 06.34/06.35.
ನಂ. 22653 ತಿರುವನಂತಪುರ ಹ.ನಿಜಾಮುದ್ದಿನ್ ಸಾಪ್ತಾಹಿಕ ರೈಲು ಶುಕ್ರವಾರ ರಾತ್ರಿ 10(ಪ್ರಸ್ತುತ ಶನಿವಾರ 00.50)ಕ್ಕೆ ಹೊರಡಲಿದೆ. ನಂ. 22654 ಹ.ನಿಜಾಮುದ್ದಿನ್ ತಿರುವನಂತಪುರ ಸೆಂಟ್ರಲ್ ನಿಜಾಮುದ್ದಿನ್ನಿಂದ ಸೋಮವಾರ ಬೆಳಗ್ಗೆ 5ಕ್ಕೆ ಹೊರಟು ತಿರುವನಂತಪುರಕ್ಕೆ 06.50ಕ್ಕೆ (4.45) ತಲುಪಲಿದೆ.
ಹೆಚ್ಚಿನ ಮಾಹಿತಿಗೆ https://enquiry.indianrail.gov.in/mntes/ ಭೇಟಿ ಮಾಡಬಹುದು.