Advertisement
ಅಂತರ ಜಿಲ್ಲೆ ಸಂಪರ್ಕಿಸುವ ಪ್ರಮುಖ ಚೆಕ್‌ಪೋಸ್ಟ್‌ಗಳಿಗೆ ಯಾವ ಸುಳಿವೂ ನೀಡದೇ ಅನಿರೀಕ್ಷಿತವಾಗಿ ಮಧ್ಯರಾತ್ರಿ ಭೇಟಿ ನೀಡಿದ ವೇಳೆ ಚೆಕ್ ಪೋಸ್ಟ್‌ಗೆ ನಿಯೋಜಿತರಾಗಿದ್ದ ರಾತ್ರಿ ಪಾಳಿಯ ಎಲ್ಲಾ ಅಧಿಕಾರಿ, ಸಿಬ್ಬಂದಿ ಶ್ರದ್ಧೆಯಿಂದ ಕರ್ತವ್ಯ ನಿರ್ವಹಿಸುತ್ತಿದ್ದನ್ನು ಪ್ರಶಂಸಿಸಿದರು. ರಾಮನಗರ, ಕನಕಪುರ ಇತರೆ ಪ್ರಮುಖ ಪಟ್ಟಣಗಳಿಂದ ವಿಶೇಷವಾಗಿ ಸತ್ತೇಗಾಲ ಚೆಕ್‌ಪೋಸ್ಟ್ ಮೂಲಕ ರೇಷ್ಮೆಗೂಡಿನ ವಹಿವಾಟಿಗೆ ಸಂಬಂಧಿಸಿದ ಉತ್ಪನ್ನಗಳ ವಾಹನಗಳು ಹಾದು ಹೋಗುವುದರಿಂದ ವಾಹನಗಳ ತಪಾಸಣೆ, ಸ್ಯಾನಿಟೈಸೇಷನ್ ಕೆಲಸ ಹೇಗೆ ನಿರ್ವಹಿಸಲಾಗುತ್ತಿದೆ ಎಂಬ ಬಗ್ಗೆ ಪರಿಶೀಲಿಸಿದರು. ವೈದ್ಯಕೀಯ ಕಾರಣಗಳಿಗಾಗಿ ಅನುಮತಿ ಪಡೆದಿರುವ ವಾಹನಗಳಿಗೆ ಮಾತ್ರ ಸಂಚಾರಕ್ಕೆ ಅವಕಾಶ ನೀಡಬೇಕು. ಅಗತ್ಯ ವಸ್ತುಗಳ ಸಾಗಣೆ ವಾಹನಗಳನ್ನು ಪರಿಶೀಲಿಸಿ ಅನುಮತಿಸಬೇಕು ಎಂದು ಡೀಸಿ ರವಿ ಸೂಚಿಸಿದರು. ಚೆಕ್ ಪೋಸ್ಟ್‌ಗಳಲ್ಲಿ ನಿಮಗೆ ಊಟ, ಉಪಾಹಾರ, ಕುಡಿಯುವ ನೀರು ಸೌಲಭ್ಯ ಇದೆಯೇ? ಎಂಬ ಬಗ್ಗೆಯೂ ತಿಳಿದುಕೊಂಡರು. Advertisement
ಮಧ್ಯರಾತ್ರಿ ಚೆಕ್‌ಪೋಸ್ಟ್‌ಗಳ ಪರಿಶೀಲನೆ
04:17 PM Apr 19, 2020 | Suhan S |
Advertisement
Udayavani is now on Telegram. Click here to join our channel and stay updated with the latest news.