ಕನ್ನಡದ ಬಹುನಿರೀಕ್ಷಿತ ಪೈಲ್ವಾನ್ ಚಿತ್ರ ಇಂದು ತೆರೆಗಪ್ಪಳಿಸಿದೆ. ಕಿಚ್ಚ ಸುದೀಪ್, ಬಾಲಿವುಡ್ ನಟ ಸುನೀಲ್ ಶೆಟ್ಟಿ ನಟನೆಯ ಈ ಚಿತ್ರದ ಮೇಲೆ ಕನ್ನಡಿಗರು ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದರು. ಜನರ ನಿರೀಕ್ಷೆಗೆ ತಕ್ಕ ಹಾಗೆ ಮೂಡಿ ಬಂದಿರುವ ಪೈಲ್ವಾನ್ ಮೊದಲ ದಿನ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಪಂಚ ಭಾಷೆಗಳಲ್ಲಿ ತೆರೆಕಂಡಿರುವ ಪೈಲ್ವಾನ್ ಚಿತ್ರದ ಬಗ್ಗೆ ಕಿರು ವಿಮರ್ಶೆ ಇಲ್ಲಿದೆ ಓದಿ.
ಕುಸ್ತಿ ಮತ್ತು ಬಾಕ್ಸಿಂಗ್ ಕಥಾವಸ್ತುವನ್ನು ಇಟ್ಟುಕೊಂಡು ನಿರ್ದೇಶಕ ಕೃಷ್ಣ ಈ ಚಿತ್ರ ಮಾಡಿದ್ದಾರೆ. ಒಬ್ಬ ಕುಸ್ತಿ ಪಟುವನ್ನು ಬಾಕ್ಸಿಂಗ್ ಚಾಂಪಿಯನ್ ಮಾಡುವ ಕನಸು ಕಾಣುವ ಗುರು ( ಸುನೀಲ್ ಶೆಟ್ಟಿ) ಆ ಪ್ರಯತ್ನದಲ್ಲಿ ಎದುರಿಸುವ ಕಷ್ಟ, ಸಂಘರ್ಷಗಳನ್ನು ಭಾವಾನಾತ್ಮಕವಾಗಿ ಹೇಳುವ ಪ್ರಯತ್ನದಲ್ಲಿ ನಿರ್ದೇಶಕ ಕೃಷ್ಣ ಯಶಸ್ವಿಯಾಗಿದ್ದಾರೆ ಅಂತ ಹೇಳಬಹುದು.
ಹೆಬ್ಬುಲಿ ಚಿತ್ರದ ನಂತರ ಮತ್ತೆ ಸುದೀಪ್ ಜೊತೆಯಾದ ಕೃಷ್ಣ, ಪ್ಯಾನ್ ಇಂಡಿಯಾ ಬಿಡುಗಡೆಗೆ ಬೇಕಾದ ಎಲ್ಲಾ ಅಂಶಗಳನ್ನು ಮನಸ್ಸಲ್ಲಿ ಇಟ್ಟುಕೊಂಡೆ ಚಿತ್ರ ಮಾಡಿದ್ದಾರೆ. ಒಟ್ಟಾರೆ ಕಿಚ್ಚ ತನ್ನ ಅಭಿಮಾನಿಗಳಿಗೆ ಪೈಲ್ವಾನ್ ಮೂಲಕ ಹಬ್ಬದೂಟವನ್ನೇ ನೀಡಿದ್ದಾರೆ ಎನ್ನಬಹುದು.
ಕುಸ್ತಿ ಪಟುವಾಗಿ ಕಿಚ್ಚ ಸುದೀಪ್ ಮತ್ತೊಮ್ಮೆ ಸ್ಯಾಂಡಲ್ ವುಡ್ ನಲ್ಲಿ ಗೆದ್ದಿದ್ದಾರೆ. ಮೊದಲ ಬಾರಿಗೆ ಕನ್ನಡ ಚಿತ್ರದಲ್ಲಿ ನಟಿಸಿರುವ ಸುನೀಲ್ ಶೆಟ್ಟಿಯವರು ತಮ್ಮ ಪಾತ್ರದ ಘನತೆ ಹೆಚ್ಚುವಂತೆ ನಟಿಸಿದ್ದಾರೆ. ನಾಯಕ ನಟಿ ಆಕಾಂಕ್ಷ ಸಿಂಗ್ ತಮ್ಮ ಪಾತ್ರವನ್ನು ಚೆನ್ನಾಗಿ ನಿಭಾಯಿಸಿದ್ದಾರೆ. ಉಳಿದಂತೆ ಅರ್ಜುನ್ ಜನ್ಯ ಸಂಗೀತ ಮುದ ಕೊಡುತ್ತದೆ.
ಕಲಾವಿದರು: ಕಿಚ್ಚ ಸುದೀಪ್, ಸುನೀಲ್ ಶೆಟ್ಟಿ, ಆಕಾಂಕ್ಷ ಸಿಂಗ್, ಕಬೀರ್ ದುಹಾನ್ ಸಿಂಗ್, ಶರತ್ ಲೋಹಿತಾಶ್ವ.
ನಿರ್ದೇಶನ: ಕೃಷ್ಣ
ಸಂಗೀತ: ಅರ್ಜುನ್ ಜನ್ಯ
ನಿರ್ಮಾಣ: ಸ್ವಪ್ನ ಕೃಷ್ಣ.