Advertisement

Reverse car learning: 300 ಅಡಿ ಆಳಕ್ಕೆ ಬಿದ್ದು ಯುವತಿಯ ದುರ್ಮರಣ

10:12 PM Jun 18, 2024 | Team Udayavani |

ಮುಂಬೈ: ಕಾರು ಚಲಾಯಿಸಲು ಕಲಿಯುತ್ತಿದ್ದ ಯುವತಿಯೊಬ್ಬಳು ಕಾರನ್ನು ರಿವರ್ಸ್‌ ಮಾಡುವ ವೇಳೆ 300 ಅಡಿ ಆಳದ ಕಮರಿಗೆ ಬಿದ್ದ ಘಟನೆ ಮಹಾರಾಷ್ಟ್ರದ ಔರಂಗಾಬಾದ್‌ನ ಸುಲಿಭಂಜನ್‌ ಬೆಟ್ಟದಲ್ಲಿ ನಡೆದಿದೆ.

Advertisement

ಶ್ವೇತಾ ದೀಪಕ್‌ ಸುರ್ವಾಸೆ (23) ಎಂಬ ಯುವತಿ ಕಾರು ಕಲಿಯುತ್ತಿದ್ದಾಗ ರಿವರ್ಸ್‌ ಆಗಿ ಕಾರು ಚಲಾಯಿಸುತ್ತಿದ್ದಳು. ಆಕೆಯ ಸ್ನೇಹಿತ ಸೂರಜ್‌ ಮುಲೆ (25) ವಿಡಿಯೋ ಮಾಡುತ್ತಿದ್ದ.

ಬೆಟ್ಟದ ತುದಿಗೆ 50 ಮೀಟರ್‌ ಇರುವಂತೆ ಸ್ನೇಹಿತ ಯುವತಿಗೆ ಎಚ್ಚರಿಕೆ ಕೊಡುತ್ತಿರುವಂತೆಯೇ ಕಾರು ಆಳದ ಕಮರಿಗೆ ಉರುಳಿದೆ. ಗಡಿಬಿಡಿಯಲ್ಲಿ ಸೂರಜ್‌ ಬೊಬ್ಬೆ ಹಾಕುತ್ತಾ ಓಡುವುದು ಅದರಲ್ಲಿ ದಾಖಲಾಗಿದೆ. ಪೊಲೀಸರು ಮತ್ತು ಇತರರು ಕಮರಿಗೆ ಭೇಟಿ ನೀಡಿದಾಗ ಕಾರು ನಜ್ಜುಗುಜ್ಜಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next