Advertisement

ಆದಾಯ ಮೂಲ ಘೋಷಣೆ ಕಡ್ಡಾಯ

06:05 AM Feb 17, 2018 | Team Udayavani |

ನವದೆಹಲಿ:ಇನ್ನು ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ತಮ್ಮ ಆಸ್ತಿ ವಿವರ ಘೋಷಣೆ ವೇಳೆ ಆದಾಯದ ಮೂಲವನ್ನೂ ಬಹಿರಂಗಪಡಿಸುವುದು ಕಡ್ಡಾಯ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

Advertisement

ಅಷ್ಟೇ ಅಲ್ಲ, ಅಭ್ಯರ್ಥಿಯ ಪತ್ನಿ ಹಾಗೂ ಅವಲಂಬಿತರ ಆದಾಯದ ಮೂಲಗಳನ್ನು ಕೂಡ ಬಹಿರಂಗಪಡಿಸಬೇಕು ಎಂದಿದೆ.

ಈ ಕುರಿತು ಲಕ್ನೋ ಮೂಲದ ಎನ್‌ಜಿಒ ಲೋಕ ಪ್ರಹರಿ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿರುವ ಸುಪ್ರೀಂ ಕೋರ್ಟ್‌ ಶುಕ್ರವಾರ ಈ ಆದೇಶ ನೀಡಿದೆ.

ಇಲ್ಲಿಯವರೆಗೆ ಅಭ್ಯರ್ಥಿಗಳು ಕೇವಲ ತಮ್ಮ ಆಸ್ತಿಯನ್ನು ಘೋಷಿಸುತ್ತಿದ್ದರೇ ವಿನಾ ಆಸ್ತಿಯ ಮೂಲದ ಬಗ್ಗೆ ಮಾಹಿತಿ
ನೀಡುತ್ತಿರಲಿಲ್ಲ. ಇನ್ನು ಮುಂದೆ ಮೂಲವನ್ನೂ ಬಹಿರಂಗಪಡಿಸ ಬೇಕಾಗುತ್ತದೆ. ಶಾಸಕರು ಹಾಗೂ ಸಂಸದರ ಆಸ್ತಿ, ಆದಾಯದಲ್ಲಿ ಭಾರೀ ಪ್ರಮಾಣದ ಏರಿಕೆ ಆಗಿರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿರುವುದಾಗಿ ಆದಾಯ ತೆರಿಗೆ ಇಲಾಖೆ ಮಾಹಿತಿ ನೀಡಿದ ಬೆನ್ನಲ್ಲೇ ಈ ಬೆಳವಣಿಗೆ ಆಗಿದೆ. ಲೋಕಸಭೆಯ 26 ಸಂಸದರು, ರಾಜ್ಯಸಭೆಯ 11 ಸದಸ್ಯರು ಮತ್ತು 257 ಶಾಸಕರ ಆಸ್ತಿಯಲ್ಲಿ ಭಾರೀ ಹೆಚ್ಚಳವಾಗಿದೆ ಎಂದು ಲೋಕ ಪ್ರಹರಿ ಆರೋಪಿಸಿತ್ತು. ತದನಂತರ ತೆರಿಗೆ ಇಲಾಖೆ ಈ ಕುರಿತು ತನಿಖೆ ಆರಂಭಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next