ಶಿಡ್ಲಘಟ್ಟ : ಸರ್ಕಾರಿ ಜಮೀನು ಮಂಜೂರು ಮಾಡಲು ಮಾಜಿ ಸೈನಿಕರೊಬ್ಬರಿಂದ 1 ಲಕ್ಷ ರೂಗಳ ಲಂಚ ಸ್ವೀಕರಿಸಿದ ಕಂದಾಯ ನಿರೀಕ್ಷಕ ಭ್ರಷ್ಟಚಾರ ನಿಗ್ರಹದಳದ ಅಧಿಕಾರಿಗಳ ಬಲೆಗೆ ಸಿಕ್ಕಿಬಿದ್ದಿದ್ದಾರೆ.
ಶಿಡ್ಲಘಟ್ಟ ತಾಲೂಕಿನ ಬಶೆಟ್ಟಹಳ್ಳಿ ಕಂದಾಯ ನಿರೀಕ್ಷಕ ವೇಣುಗೋಪಾಲ್ ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದಿದ್ದಾರೆ ಮಾಜಿ ಸೈನಿಕ ದಿವಾಕರ್ ನೀಡಿದ ದೂರಿನ ಹಿನ್ನೆಲೆಯಲ್ಲಿ ಭ್ರಷ್ಟಚಾರ ನಿಗ್ರಹದಳದ ಡಿವೈಎಸ್ಪಿ ಮಂಜುನಾಥ್ ಅವರ ನೇತೃತ್ವದಲ್ಲಿ ಎಸಿಬಿ ಇನ್ಸ್‍ಪೆಕ್ಟರ್ ರವಿಕುಮಾರ್ ಮತ್ತು ಲಕ್ಷ್ಮೀದೇವಿ ಮತ್ತು ಸಿಬ್ಬಂದಿ ದಾಳಿ ನಡೆಸಿ ಶಿಡ್ಲಘಟ್ಟ ನಗರದ ಪ್ರವಾಸಿ ಮಂದಿರದಲ್ಲಿ ಮಾಜಿ ಸೈನಿಕರಿಂದ ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದಿದ್ದಾರೆ.
ಮಾಜಿ ಸೈನಿಕ ದಿವಾಕರ್ ಅವರಿಗೆ ಸರ್ಕಾರಿ ಜಮೀನು ಮಂಜೂರು ಮಾಡಲು ಬಶೆಟ್ಟಿಹಳ್ಳಿ ಕಂದಾಯ ನಿರೀಕ್ಷಕ ವೇಣುಗೋಪಾಲ್ ಅವರು 3 ಲಕ್ಷ ರೂಗಳು ಬೇಡಿಕೆ ಇಟ್ಟಿದ್ದು 2 ಲಕ್ಷಕ್ಕೆ ಒಪ್ಪಿಗೆ ನೀಡಿ ಅದರಲ್ಲಿ ಮುಂಗಡವಾಗಿ ಒಂದು ಲಕ್ಷ ನೀಡುವುದಾಗಿ ತಿಳಿಸಿದ್ದಾರೆ ಶಿಡ್ಲಘಟ್ಟದ ಕಂದಾಯ ಭವನದಲ್ಲಿ ಲಂಚದ ಮೊತ್ತ ಪಾವತಿಸಲು ಮಾಜಿ ಸೈನಿಕ ತೆರಳಿದಾಗ ಅಲ್ಲಿ ಲಂಚವನ್ನು ಸ್ವೀಕರಿಸದೆ ಪ್ರವಾಸಿಮಂದಿರದಲ್ಲಿ ಲಂಚದ ಹಣ ಸ್ವೀಕರಿಸುವಾಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ರೆಡ್‍ಹ್ಯಾಂಡ್ ಆಗಿ ಹಿಡಿದು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ :ಡೀಮ್ಡ್ ಫಾರೆಸ್ಟ್; ಸ್ಥಳ ಪರಿಶೀಲಿಸಿ ವರದಿ ನೀಡಲು ಸಚಿವ ಲಿಂಬಾವಳಿ ಸೂಚನೆ
ಪ್ರಕರಣಕ್ಕೆ ಸಂಬಂಧಿಸಿದಂತೆ ತಾಲೂಕು ಕಚೇರಿಯಲ್ಲಿ ಕೇಸ್ ವರ್ಕರ್‍ನನ್ನು ಸಹ ವಶಕ್ಕೆ ಪಡೆದುಕೊಂಡಿರುವ ಎಸಿಬಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ ಈ ಸಂಬಂಧ ದೂರು ದಾಖಲಿಸಿಕೊಂಡಿರುವ ಎಸಿಬಿ ಅಧಿಕಾರಿಗಳು ಮುಂದಿನ ಕ್ರಮ ಕೈಗೊಂಡಿದ್ದಾರೆ.