Advertisement

15341 ಕೋಟಿ ಬಳಕೆಯಾಗದ ಹಣ, ಆಡಳಿತಾತ್ಮಕ ವೈಫ‌ಲ್ಯ

10:55 PM Feb 21, 2023 | Team Udayavani |

ಬೆಂಗಳೂರು: ರಾಜ್ಯ ಸರಕಾರದ ವಿವಿಧ ಇಲಾಖೆಗಳಿಗೆ ಬಿಡುಗಡೆಯಾದ ಅನುದಾನದ ಪೈಕಿ ಸುಮಾರು 15341.75 ಕೋಟಿ ರೂ. ನಷ್ಟು ಹಣವನ್ನು ಯಾವ ಉದ್ದೇಶಕ್ಕೆ ನೀಡಲಾಗಿತ್ತೋ ಅದಕ್ಕೆ ಬಳಕೆ ಮಾಡದೇ ಇರುವ ಗಂಭೀರ ಆಡಳಿತಾತ್ಮಕ ವೈಫ‌ಲ್ಯವನ್ನು ಸಾರ್ವಜನಿಕ ಲೆಕ್ಕಪತ್ರ ಸಮಿತಿ ಗಮನಿಸಿದ್ದು, ಈ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಲಾಗಿದೆ.

Advertisement

ಅದೇ ರೀತಿ ಕೇಂದ್ರ ಸರಕಾರದಿಂದ ಸಕಾಲದಲ್ಲಿ ಜಿಎಸ್‌ಟಿ ಪರಿಹಾರ ಸಿಗದೇ ಇರುವುದಕ್ಕೆ ರಾಜ್ಯ ಸರಕಾರದ ಪ್ರಾಮಾಣಿಕ ಪ್ರಯತ್ನದ ಕೊರತೆಯೇ ಕಾರಣ ಎಂದು ವರದಿಯಲ್ಲಿ ಬೇಸರ ವ್ಯಕ್ತಪಡಿಸಲಾಗಿದೆ.

ಹಣಕಾಸು ಇಲಾಖೆಗೆ ಸಂಬಂಧಿಸಿದ ಸಿಎಜಿ ವರದಿ ಆಧಾರದ ಮೇಲೆ ಸಮಿತಿಯು ಸಲ್ಲಿಸಿರುವ ಶಿಫಾರಸುಗಳ ವರದಿಯನ್ನು ಮಂಗಳವಾರ ವಿಧಾನಸಭೆಯಲ್ಲಿ ಮಂಡಿಸಲಾಗಿದೆ. ಈ ವರದಿಯಲ್ಲಿ ಸುಮಾರು 15341.75 ಕೋಟಿ ರೂ.ನಷ್ಟು ಹಣವನ್ನು ಬಳಕೆ ಮಾಡುವುದಕ್ಕೆ ಇದ್ದ ಅವಕಾಶ ಕೈ ಚೆಲ್ಲಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಲಾಗಿದೆ.

ಇಷ್ಟೊಂದು ದೊಡ್ಡ ಮೊತ್ತದ ಆಯವ್ಯಯದ ಹಣವನ್ನು ಬಳಕೆ ಮಾಡದೇ ಇರುವುದು ಆಯಾ ಇಲಾಖೆಯ ಮುಖ್ಯಸ್ಥರ ವೈಫ‌ಲ್ಯ ಎಂದು ಸಮಿತಿ ತೀರ್ಮಾನಿಸಿದೆ. ಜತೆಗೆ ಭಾರೀ ಪ್ರಮಾಣದ ಆಯವ್ಯಯ ಅವಕಾಶವನ್ನು ಬಳಸದಿದ್ದರೂ ಆರ್ಥಿಕ ವರ್ಷದ ಅಂತ್ಯದ ನಂತರವೂ ಅಂದಾಜಿಸಿಲ್ಲ. ಇದು ಇಲಾಖೆಗಳ ನಿರ್ಲಕ್ಷ್ಯ ಧೋರಣೆಯನ್ನು ಪ್ರತಿಬಿಂಬಿಸುತ್ತದೆ ಎಂದು ಸಮಿತಿ ಅಭಿಪ್ರಾಯಪಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next