Advertisement

ರೇವಪ್ಪಯ್ಯಾ ಜಾತ್ರೋತ್ಸವ-ಅಗ್ನಿ ಪೂಜೆ

11:16 AM Dec 15, 2021 | Team Udayavani |

ಭಾಲ್ಕಿ: ನಾವದಗಿ ಗ್ರಾಮದ ಸದ್ಗುರು ಶ್ರೀ ರೇವಪ್ಪಯ್ಯಾ ಮಹಾಶಿವಶರಣರ ಜಾತ್ರಾ ಮಹೋತ್ಸವ ನಿಮಿತ್ತ ಮಂಗಳವಾರ ನಸುಕಿನ ಜಾವದಲ್ಲಿ ಅಗ್ನಿಪೂಜೆ ನೆರವೇರಿತು.

Advertisement

ಪ್ರಾರಂಭದಲ್ಲಿ ಗ್ರಾಮದ ಸದ್ಗುರು ರೇವಪ್ಪಯ್ನಾ ಮಹಾಶಿವಶರಣರ ದೇವಸ್ಥಾನದಿಂದ, ರೇವಪ್ಪಯ್ನಾ ಮುತ್ಯಾರವರ ಪಲ್ಲಕ್ಕಿ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ಸುಮಂಗಲೆಯರು ಕುಂಭ-ಕಳಸ ಹೊತ್ತು ಭಕ್ತಿ ಮೆರೆದರು.

ನಂತರ ಥೇರ ಮೈದಾನಕ್ಕೆ ಆಗಮಿಸಿದ ಮೆರವಣಿಗೆ ಅಗ್ನಿ ಕುಂಡ, ಅಗ್ನಿ ಹೊತ್ತಿಸುವುದರೊಂದಿಗೆ ಸದ್ಗುರು ರೇವಪ್ಪಯ್ಯಾ ಮಹಾರಾಜಕಿ ಜೈ.. ಜಯಘೋಷದೊಂದಿಗೆ ಅಗ್ನಿ ಪೂಜೆಗೆ ಚಾಲನೆ ನೀಡಲಾಯಿತು.

ಇದಕ್ಕೂ ಮುನ್ನ ನಡೆದ ಧರ್ಮ ಸಭೆಯಲ್ಲಿ ತೆಲಂಗಾಣದ ಜಹಿರಾಬಾದ ತಾಲೂಕಿನ ಮಲ್ಲಯ್ಯನಗಿರಿಯ ಡಾ| ಬಸವಲಿಂಗ ಅವಧೂತರಿಂದ ಪ್ರವಚನ ಕಾರ್ಯಕ್ರಮ ನಡೆಯಿತು. ಎರಡು ವರ್ಷದಿಂದ ಕೊರೊನಾ ಹಿನ್ನೆಲೆಯಲ್ಲಿ ಸದ್ಗುರು ರೇವಪ್ಪಯ್ಯಾ ಸ್ವಾಮಿಗಳ ಜಾತ್ರೋತ್ಸವ ಸರಳವಾಗಿ ಆಚರಿಸಲಾಗಿತ್ತು. ಪ್ರಸ್ತುತ ರಾಜ್ಯದ ಸುತ್ತಮುತ್ತಲಿನ ಗ್ರಾಮಗಳ ಭಕ್ತರೊಂದಿಗೆ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶಗಳಿಂದ ಆಗಮಿಸಿದ ಸಾವಿರಾರು ಭಕ್ತರು, ಭಕ್ತಿ-ಭಾವದಿಂದ ಅಗ್ನಿ ಪೂಜೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next