Advertisement

ಚಾಮುಂಡೇಶ್ವರಿ ಕ್ಷೇತ್ರಕ್ಕೆಸಿದ್ದರಾಮಯ್ಯ ವಾಪಸ್‌

03:45 AM May 21, 2017 | |

ಬೆಂಗಳೂರು/ಮೈಸೂರು: ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧೆ ಮಾಡುವುದಾಗಿ ತಿಳಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ವರುಣಾ ಕ್ಷೇತ್ರಕ್ಕೆ ಪುತ್ರ ಡಾ.ಯತೀಂದ್ರ ನಿಲ್ಲಿಸಬೇಕೋ ಬೇಡವೋ ಮುಂದೆ ತೀರ್ಮಾನ ಕೈಗೊಳ್ಳಲಾಗುವುದು. ಎರಡೂ ಕ್ಷೇತ್ರಗಳಲ್ಲೂ ತಾವೇ ನಿಲ್ಲಲೂಬಹುದು ಎಂದು ಹೇಳುವ ಮೂಲಕ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದ್ದಾರೆ.

Advertisement

2013ರಲ್ಲಿ ಇದೇ ನನ್ನ ಕೊನೇ ಚುನಾವಣೆ ಎಂದು ಹೇಳಿದ್ದ ಸಿದ್ದರಾಮಯ್ಯ ಆ ನಂತರ  ಈ ಬಾರಿಯೂ ಸ್ಪರ್ಧೆ ಮಾಡ್ತೇನೆ ಎಂದು ಹೇಳಿ ಸ್ಪರ್ಧೆ ಖಚಿತಪಡಿಸಿದ್ದರು. ಇದೀಗ ವರುಣಾ ಬಿಟ್ಟು ಚಾಮುಂಡೇಶ್ವರಿ ಕ್ಷೇತ್ರಕ್ಕೆ ಶಿಫ್ಟ್ ಆಗುವುದನ್ನೂ ಖುದ್ದು ಒಪ್ಪಿಕೊಂಡಿದ್ದಾರೆ.

ಸಿದ್ದರಾಮಯ್ಯ ಕ್ಷೇತ್ರ ಬದಲಿಸುತ್ತಾರೆ ಎಂಬ ಮಾತು ಇತ್ತಾದರೂ ಯಾವ ಕ್ಷೇತ್ರ ಎಂಬ ಪ್ರಶ್ನೆಗೆ ಚಾಮುಂಡೇಶ್ವರಿ ಎಂಬ ಉತ್ತರ ದೊರೆತಿದೆ. ಆದರೆ, ವರುಣಾಗೆ ಪುತ್ರ ಡಾ.ಯತೀಂದ್ರ ಅವರನ್ನು ನಿಲ್ಲಿಸುತ್ತಾರಾ ಅಥವಾ ಎರಡೂ ಕ್ಷೇತ್ರಗಳಲ್ಲಿ ಸಿದ್ದರಾಮಯ್ಯ ಅವರೇ ಸ್ಪರ್ಧೆ ಮಾಡ್ತಾರಾ ಎಂಬುದು ಕಾದು ನೋಡಬೇಕಿದೆ.

ಏಕೆಂದರೆ, ಮೈಸೂರಿನ ಸರ್ಕಾರಿ ಅತಿಥಿ ಗೃಹದಲ್ಲಿ ಶನಿವಾರ ಜನಸಂಪರ್ಕ ಸಭೆ ನಡೆಸಿದ ಸಿದ್ದರಾಮಯ್ಯ ಅವರು,ಚಾಮುಂಡೇಶ್ವರಿ ಕ್ಷೇತ್ರದಿಂದ ಆಗಮಿಸಿದ್ದ ಸಾರ್ವಜನಿಕರು ಕುಂದುಕೊರತೆ ಹೇಳುವಾಗ “ಆಯ್ತು ಮುಂದಿನ ಚುನಾವಣೆಗೆ ನಾನೇ ಬರ್ತೇನೆ, ಏನೇನು ಸಮಸ್ಯೆ ಇದೆ ಸರಿ ಮಾಡಿಕೊಡ್ತೇನೆ ನಡೀರಿ’ ಎಂದು ಹೇಳಿದ್ದಾರೆ.

ನಂತರ ಸಂಜೆ ಕಾರ್ಯಕ್ರಮ ಮುಗಿಸಿ ಹೊರಡುವಾಗ ಮಾಧ್ಯಮದವರು ಕೇಳಿದ ಪ್ರಶ್ನೆಗೆ,ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಾನು ನಿಲೆ¤àನೆ ಎಂದು ನೇರವಾಗಿಯೇ ಹೇಳಿದರು. ವರುಣಾ ಕ್ಷೇತ್ರಕ್ಕೆ ನಿಮ್ಮ ಪುತ್ರನನ್ನು ಕಣಕ್ಕಳಿಸುವಿರಾ ಎಂದು ಮರು ಪ್ರಶ್ನೆ ಕೇಳಿದಾಗ, ಅಲ್ಲಿ ಯಾರನ್ನು ನಿಲ್ಲಿಸಬೇಕು ಎಂಬುದು ತೀರ್ಮಾನ ಆಗಿಲ್ಲ. ಅಲ್ಲೂ ನಾನೇ ನಿಲ್ಲಬೇಕು ಎಂದು ಹೇಳುತ್ತಿದ್ದಾರೆ. ಎರಡೂ ಕಡೆ ನಾನೇ ನಿಲ್ಲಲೂ ಬಹುದು ಎಂದು ಹೇಳಿ ನಿರ್ಗಮಿಸಿದರು.

Advertisement

ಆದರೆ, ವರುಣಾ ಕ್ಷೇತ್ರದಲ್ಲಿ  ಈಗಾಗಲೇ ಸಿದ್ದರಾಮಯ್ಯ ಪುತ್ರ ಡಾ.ಯತೀಂದ್ರ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಜತೆಗೆ ಅವರು ಅಧಿಕೃತವಾಗಿ ಸರ್ಕಾರಿ ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ಅನುಕೂಲವಾಗುವಂತೆ ಅವರಿಗೆ ಸಂವಿಧಾನಿಕ ಹುದ್ದೆ ಕೊಟ್ಟು ಸಭೆ ನಡೆಸಲು ಅಧಿಕಾರ ನೀಡಲಾಗಿದೆ. ಹೀಗಾಗಿ, ವರುಣಾ ಕ್ಷೇತ್ರಕ್ಕೆ ಯತೀಂದ್ರ ಅವರೇ ಅಭ್ಯರ್ಥಿ. ಆದರೆ, ಹೈಕಮಾಂಡ್‌ ಒಪ್ಪಿಗೆ ನಂತರ ಅಧಿಕೃತವಾಗಿ ಪ್ರಕಟಿಸಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಚಾಮುಂಡೇಶ್ವರಿ ಯಾಕೆ?
ಕ್ಷೇತ್ರ ಪುನರ್‌ವಿಂಗಡಣೆಗೂ ಮುಂಚೆ ಚಾಮುಂಡೇಶ್ವರಿ ಕ್ಷೇತ್ರವೇ ಸಿದ್ದರಾಮಯ್ಯ ಅವರ ಕರ್ಮಭೂಮಿಯಾಗಿತ್ತು. ಕ್ಷೇತ್ರ ಪುನರ್‌ವಿಂಗಡಣೆ ನಂತರ ಅವರು ಪ್ರತಿನಿಧಿಸುತ್ತಿದ್ದ ಕ್ಷೇತ್ರ ಚಾಮುಂಡೇಶ್ವರಿ ಹಾಗೂ ವರುಣಾ ಎಂದು ಎರಡು ಕ್ಷೇತ್ರಗಳಾಗಿ ವಿಂಗಡಣೆಯಾಯಿತು. 2008 ರಲ್ಲಿ ಸಿದ್ದರಾಮಯ್ಯ ಅವರು ವರುಣಾ ಕ್ಷೇತ್ರ ಆಯ್ಕೆ ಮಾಡಿಕೊಂಡರು. ತಮ್ಮ ಆಪ್ತ ಸತ್ಯನಾರಾಯಣ ಅವರನ್ನು ಚಾಮುಂಡೇಶ್ವರಿ ಕ್ಷೇತ್ರದಿಂದ ಕಣಕ್ಕಿಳಿಸಿ ಗೆಲ್ಲಿಸಿದ್ದರು. ಆದರೆ, 2013 ರಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಸತ್ಯನಾರಾಯಣ ಸೋಲು ಅನುಭವಿಸಿ ಜೆಡಿಎಸ್‌ನ ಜಿ.ಟಿ.ದೇವೇಗೌಡ ಗೆಲುವು ಸಾಧಿಸಿದ್ದರು. ತಮ್ಮ ಕೈ ತಪ್ಪಿದ ಕ್ಷೇತ್ರವನ್ನು ಮತ್ತೆ ಹಿಡಿತಕ್ಕೆ ತೆಗೆದುಕೊಳ್ಳಲು ಇದೀಗ ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿಯತ್ತ ದೃಷ್ಟಿ ಹಾಯಿಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಗದ್ಗದಿತರಾಗಿದ್ದರು
ಚಾಮುಂಡೇಶ್ವರಿ ಕ್ಷೇತ್ರ ಸಿದ್ದರಾಮಯ್ಯ ಅವರಿಗೆ ರಾಜಕೀಯವಾಗಿ ಪುನರ್‌ಜನ್ಮ ನೀಡಿದ ಕ್ಷೇತ್ರವೂ ಹೌದು. ಜೆಡಿಎಸ್‌ ತೊರೆದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಚಾಮುಂಡೇಶ್ವರಿ ಕ್ಷೇತ್ರದಿಂದ ಗೆಲುವು ಸಾಧಿಸಿದ್ದರು. ಆ ಗೆಲುವು ಅವರನ್ನು ಪ್ರತಿಪಕ್ಷ ನಾಯಕ, ಮುಖ್ಯಮಂತ್ರಿವರೆಗೂ ತಲುಪಿಸಿತ್ತು. ಹೀಗಾಗಿ, ಚಾಮುಂಡೇಶ್ವರಿ ಕ್ಷೇತ್ರದ ಬಗ್ಗೆ ಸಿದ್ದರಾಮಯ್ಯ ಅವರಿಗೆ ಪ್ರೀತಿ ಹೆಚ್ಚು. ವರುಣಾ ಕ್ಷೇತ್ರ ಆಯ್ಕೆ ಮಾಡಿಕೊಂಡ ನಂತರ ಚಾಮುಂಡೇಶ್ವರಿ ಕ್ಷೇತ್ರದ ಕಾರ್ಯಕರ್ತರ ಸಭೆಯಲ್ಲಿ ಸಿದ್ದರಾಮಯ್ಯ ಅವರು ಗದ್ಗದಿತರಾಗಿದ್ದರು.ಅನಿವಾರ್ಯ ಕಾರಣದಿಂದ ವರುಣಾದಿಂದ ಸ್ಪರ್ಧಿಸುತ್ತಿದ್ದೇನೆ. ಆದರೆ, ಚಾಮುಂಡೇಶ್ವರಿ ಕ್ಷೇತ್ರದ ಜನರ ಋಣ ನನ್ನ ಮೇಲಿದೆ ಎಂದು ಕಣ್ಣಲ್ಲಿ ನೀರು ತುಂಬಿಕೊಂಡಿದ್ದರು.

ಜನಸಂಪರ್ಕ ಸಭೆಯಲ್ಲಿ ಏನಾಯ್ತು
ಚಾಮುಂಡೇಶ್ವರಿ ಕ್ಷೇತ್ರ ವ್ಯಾಪ್ತಿಗೆ ಬರುವ ಇಲವಾಲ ಗ್ರಾಮದ ಕೆಲ ಮುಖಂಡರು ಮುಖ್ಯಮಂತ್ರಿಯವರಿಗೆ ಗ್ರಾಮದ ಸಮಸ್ಯೆಗಳನ್ನು ಮನವರಿಕೆ ಮಾಡಿಕೊಟ್ಟು, ನೀವಿದ್ದಾಗ ಇಷ್ಟೊಂದು ಸಮಸ್ಯೆಗಳಿರಲಿಲ್ಲ ಎಂದರು. ಆಗ  ಸಿದ್ದರಾಮಯ್ಯ ಅವರು,  ಮುಂದಿನ ಚುನಾವಣೆಗೆ ನಾನು ಚಾಮುಂಡೇಶ್ವರಿಗೇ ಬರೋದು. ಹೋಗಿ ಎಲ್ಲಾ ತಯಾರಾಗಿ. ನಾನೇ ಬರಿ¤àನಲ್ಲ ಹೋಗ್ರೋ ಎಲ್ಲಾ ಸರಿ ಮಾಡಿಕೊಡ್ತೇನೆ ಎಂದು ಅವರಿಗೆ ಭರವಸೆ ನೀಡಿದರು.

ಬಳಿಕ ಅಧಿಕಾರಿಗಳನ್ನು ಕರೆದು ಇಲವಾಲ ಹೋಬಳಿ ಕೇಂದ್ರವಾಗಿದ್ದು, ಅಲ್ಲಿ ಒಳಚರಂಡಿ ಕಾಮಗಾರಿಯನ್ನು ಗ್ರಾಮಪಂಚಾಯ್ತಿ ಮಾಡಬೇಕಾ? ಅಥವಾ ಕೆಯುಡಬ್ಲೂ$Âಎಸ್‌ಎಸ್‌ಬಿಯವರು ಮಾಡಬೇಕಾ? ಎಂಬುದನ್ನು ನೋಡಿ, ಸ್ಥಳ ಸಮೀಕ್ಷೆ ನಡೆಸಿ, ಅಂದಾಜುಪಟ್ಟಿ ತಯಾರಿಸುವಂತೆ ಸೂಚಿಸಿದರು. ನಂತರ ಸಂಜೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ, ಹೌದು, ನಾನು ಮುಂದೆ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ. ವರುಣಾದಲ್ಲಿ ಯಾರನ್ನು ನಿಲ್ಲಿಸಬೇಕು ಎಂಬುದು ತೀರ್ಮಾನವಾಗಿಲ್ಲ. ಅಲ್ಲೂ -ಇಲ್ಲೂ ನಾನೇ ನಿಲ್ಲಲೂಬಹುದು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next