Advertisement

ಎಎವೈ-ಬಿಪಿಎಲ್‌ ಕಾರ್ಡ್‌ ಹಿಂದಿರುಗಿಸಿ

12:50 PM Apr 02, 2021 | Team Udayavani |

ಚಿಕ್ಕಮಗಳೂರು: ಆರ್ಥಿಕವಾಗಿ ಉತ್ತಮಸ್ಥಿತಿಯಲ್ಲಿರುವವರು ಸುಳ್ಳು ಮಾಹಿತಿ ನೀಡಿಪಡೆದಿರುವ ಎಎವೈ ಹಾಗೂ ಬಿಪಿಎಲ್‌ಕಾರ್ಡ್‌ಗಳನ್ನು ಹಿಂದಿರುಗಿಸುವಂತೆಜಿಲ್ಲಾ ಧಿಕಾರಿ ಕೆ.ಎನ್‌. ರಮೇಶ್‌ಸೂಚಿಸಿದ್ದಾರೆ.ಎಎವೈ ಹಾಗೂ ಬಿಪಿಎಲ್‌ಪಡಿತರ ಕಾರ್ಡ್‌ಗಳನ್ನು ಕೆಲವುಸದೃಢ ಕುಟುಂಬಗಳು ಸುಳ್ಳುಮಾಹಿತಿ ನೀಡಿ ಪಡೆದುಕೊಂಡಿರುವುದನ್ನು ಸರ್ಕಾರ ಗಂಭೀರವಾಗಿಪರಿಗಣಿಸಿ ಸದೃಢ ಕುಟುಂಬಗಳ ಪಡಿತರರದ್ದುಪಡಿಸಲು ಆದೇಶಿಸಿದೆ.

Advertisement

ಸರ್ಕಾರದಿಂದ ಅನುದಾನಪಡೆಯುತ್ತಿರುವ ಸಂಸ್ಥೆಗಳು ಅಥವಾಸರ್ಕಾರಿ ಪ್ರಾಯೋಜಿತ ಸರ್ಕಾರಿ ಸ್ವಾಮ್ಯದಸಂಸ್ಥೆಗಳು, ನಿಗಮ, ಮಂಡಳಿಗಳು,ಸ್ವಾಯತ್ತ ಸಂಸ್ಥೆಗಳು ಇತ್ಯಾದಿಒಳಗೊಂಡಂತೆ ಆದಾಯ ತೆರಿಗೆ, ಸೇವಾತೆರಿಗೆ ಪಾವತಿಸುವ ಎಲ್ಲಾ ಕುಟುಂಬಗಳುಗ್ರಾಮೀಣ ಪ್ರದೇಶದಲ್ಲಿ ಮೂರು ಹೆಕ್ಟೇರ್‌ಒಣಭೂಮಿ ಅಥವಾ ತತ್ಸಮಾನ ನೀರಾವರಿಭೂಮಿ ಹೊಂದಿರುವ ಕುಟುಂಬಗಳುಅಥವಾ ಗ್ರಾಮೀಣ ಪ್ರದೇಶವನ್ನುಹೊರತು ಪಡಿಸಿ, ನಗರ ಪ್ರದೇಶಗಳಲ್ಲಿ ಒಂದು ಸಾವಿರ ಚದರ ಅಡಿಗಿಂತಲೂ ಹೆಚ್ಚಿನ ವಿಸ್ತೀರ್ಣದ ಪಕ್ಕಾ ಮನೆಯನ್ನುಸ್ವಂತವಾಗಿ ಹೊಂದಿರುವ ಕುಟುಂಬಗಳು,ಜೀವನೋಪಾಯಕ್ಕಾಗಿ ಸ್ವತಃಓಡಿಸುವ ಒಂದು ವಾಣಿಜ್ಯವಾಹನವನ್ನು ಅಂದರೆಟ್ರಾÂಕ್ಟರ್‌, ಮ್ಯಾಕ್ಸಿಕ್ಯಾಬ್‌, ಟ್ಯಾಕ್ಸಿಇತ್ಯಾದಿಗಳನ್ನು ಹೊಂದಿದಕುಟುಂಬವನ್ನು ಹೊರತುಪಡಿಸಿನಾಲ್ಕುಚಕ್ರದ ವಾಹನಗಳನ್ನು ಹೊಂದಿರುವಎಲ್ಲಾ ಕುಟುಂಬಗಳು ಹಾಗೂಕುಟುಂಬದ ವಾರ್ಷಿಕ ಆದಾಯವುರೂ.1.20 ಲಕ್ಷಗಳಿಗಿಂತಲೂ ಹೆಚ್ಚುಇರುವ ಕುಟುಂಬಗಳು ಕಾರ್ಡ್‌ಗಳನ್ನುಹಿಂದುರುಗಿಸಬೇಕು.

ಜಿಲ್ಲೆಯಲ್ಲಿ 2011 ಜನಗಣತಿಯಂತೆ2,76,085 ಕುಟುಂಬಗಳು ದಾಖಲಾಗಿದ್ದು,2021 ಮಾರ್ಚ್‌ ಮಾಹೆಯವರೆಗೆ 22,406ಅಂತ್ಯೋದಯ ಅನ್ನ ಯೋಜನೆ (ಎಎವೈ)ಮತ್ತು 2,45,730 ಆದ್ಯತಾ (ಬಿಪಿಎಲ್‌)ಸೇರಿ ಒಟ್ಟು 2,68,136 ಕುಟುಂಬಗಳಿಗೆಆದ್ಯತಾ (ಎಎವೈ+ಬಿಪಿಎಲ್‌) ಪಡಿತರಚೀಟಿ ನೀಡಲಾಗಿದೆ. ಜೊತೆಗೆ 55,372ಕುಟುಂಬಗಳಿಗೆ ಆದ್ಯತೇತರ (ಎಪಿಎಲ್‌)ಪಡಿತರ ಚೀಟಿ ನೀಡಲಾಗಿದೆ.ಈ ಹಿನ್ನೆಲೆಯಲ್ಲಿ ಆರ್ಥಿಕವಾಗಿಸದೃಢರಾದ ಮತ್ತು ಇತರೆ ಅನರ್ಹರುಹೊಂದಿರುವ ಅಂತ್ಯೋದಯ ಅನ್ನ(ಎಎವೈ) ಮತ್ತು ಆದ್ಯತಾ (ಬಿಪಿಎಲ್‌)ಪಡಿತರ ಚೀಟಿಗಳನ್ನು ಹಿಂದಿರುಗಿಸಲುಪದೇ ಪದೇ ಮನವಿ ಮಾಡಲಾಗಿದ್ದರೂಕೂಡ ಇದುವರೆಗೂ ಸಾಕಷ್ಟುಕುಟುಂಬಗಳು ಅನರ್ಹ ಪಡಿತರಚೀಟಿಗಳನ್ನು ಹಿಂದಿರುಗಿಸದಿರುವುದುಕಂಡು ಬಂದಿದೆ.ಸರ್ಕಾರ ನಿಗದಿಪಡಿಸಿರುವ ಮಾನದಂಡಗಳಿಗೆ ವಿರುದ್ಧವಾಗಿ ಆದ್ಯತಾ (ಬಿಪಿಎಲ್‌)ಪಡಿತರ ಚೀಟಿ ಹೊಂದಿರುವವರುತಕ್ಷಣವೇ ತಾಲೂಕಿನ ತಹಶೀಲ್ದಾರರಿಗೆಒಪ್ಪಿಸಿ ಆದ್ಯತೇತರ (ಎಪಿಎಲ್‌) ಪಡಿತರಚೀಟಿ ಪಡೆಯಲು ತಿಳಿಸಿದೆ. ತಪ್ಪಿದಲ್ಲಿಅಕ್ರಮ ಪಡಿತರ ಚೀಟಿ ಹೊಂದಿರುವವರವಿರುದ್ಧ ಕ್ರಮ ಜರುಗಿಸಲಾಗುವುದುಹಾಗೂ ಹಂಚಿಕೆ ಪಡೆದ ಆಹಾರಧಾನ್ಯಗಳ ಬಾಬ್ತು ಮುಕ್ತ ಮಾರುಕಟ್ಟೆದರದಂತೆ ದಂಡದ ರೂಪದಲ್ಲಿ ವಸೂಲುಮಾಡಲಾಗುವುದು ತಿಳಿಸಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next