Advertisement

Georgia: ಜಾರ್ಜಿಯದ ಪ್ರಾಂತ್ಯ ಹಿಂದಿರುಗಿಸಿ: ರಷ್ಯಾಗೆ ಆಗ್ರಹ

08:50 PM Aug 11, 2023 | Team Udayavani |

ವಾಷಿಂಗ್ಟನ್‌: ರಷ್ಯಾದ ಆಕ್ರಮಣಕಾರಿ ನೀತಿಯ ವಿರುದ್ಧ ಒಟ್ಟಾಗಿರುವ ಪಾಶ್ಚಿಮಾತ್ಯ ರಾಷ್ಟ್ರಗಳು ಇದೀಗ 15 ವರ್ಷದ ಹಿಂದೆ ಜಾರ್ಜಿಯಾದ ಮೇಲೆ ರಷ್ಯಾ ನಡೆಸಿದ್ದ ದಾಳಿ ವಿಚಾರವನ್ನು ವಿಶ್ವಸಂಸ್ಥೆ ಎದುರು ಎಳೆದುತಂದಿದ್ದು, ರಷ್ಯಾ ವಶಪಡಿಸಿಕೊಂಡಿರುವ ಜಾರ್ಜಿಯಾದ 2 ಪ್ರಾಂತ್ಯಗಳನ್ನೂ ಹಿಂದಿರುಗಿಸಬೇಕೆಂದು ಪಟ್ಟು ಹಿಡಿದಿವೆ.

Advertisement

2008ರಲ್ಲಿ ರಷ್ಯಾ ದಕ್ಷಿಣ ಒಸ್ಸೆಟಿಯಾ ಹಾಗೂ ಅಬ್ಖಾಜಿಯಾ ಎನ್ನುವ ಜಾರ್ಜಿಯ ದೇಶದ ಪ್ರಾಂತ್ಯಗಳ ಮೇಲೆ ದಾಳಿ ನಡೆಸಿ, ಅವುಗಳನ್ನು ವಶಪಡಿಸಿಕೊಂಡಿತ್ತು. ಆ ದಾಳಿಗೆ 15 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಈ ವಿಚಾರ ಪ್ರಸ್ತಾಪವಾಗಿದೆ. ಮಂಡಳಿಯ ಸದಸ್ಯರಾಷ್ಟ್ರಗಳ ಪೈಕಿ 6 ಪಾಶ್ಚಿಮಾತ್ಯ ರಾಷ್ಟ್ರಗಳಾದ ಅಮೆರಿಕ, ಬ್ರಿಟನ್‌, ಫ್ರಾನ್ಸ್‌, ಅಲ್ಬೇನಿಯ, ಜಪಾನ್‌ ಹಾಗೂ ಮಾಲ್ಟಾ ಸಾಮೂಹಿಕ ಹೇಳಿಕೆ ಬಿಡುಗಡೆಗೊಳಿಸಿವೆ.

ಅದರಲ್ಲಿ ನೆರೆರಾಷ್ಟ್ರಗಳ ಮೇಲೆ ರಷ್ಯಾದ ಆಕ್ರಮಣ ಹೆಚ್ಚಾಗಿದೆ. ಪ್ರತಿ ರಾಷ್ಟ್ರಕ್ಕೂ ತನ್ನದೇ ಆದ ಗೌರವ, ಸಾರ್ವಭೌಮತ್ವವಿದೆ. ರಷ್ಯಾ ಅದಕ್ಕೆ ಧಕ್ಕೆ ತರುತ್ತಿದೆ. ಈ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಕಾನೂನಿನ ಅನ್ವಯ ಜಾರ್ಜಿಯ ಸಮಸ್ಯೆ ಬಗೆಹರಿಸಿ 2 ಪ್ರಾಂತ್ಯಗಳನ್ನೂ ಹಿಂದಿರುಗಿಸಬೇಕು ಎಂದು ಆಗ್ರಹಿಸಿವೆ

 

Advertisement

Udayavani is now on Telegram. Click here to join our channel and stay updated with the latest news.

Next