Advertisement
ಸರಕಾರದ ಒಳಾಡಳಿತ ಇಲಾಖೆಯ ಪೊಲೀಸ್ ಸೇವೆಗಳ ವಿಭಾಗದ ಅಧೀನ ಕಾರ್ಯದರ್ಶಿ ಬಾಣದರಂಗಯ್ಯ ಎನ್.ಆರ್. ಅವರು ಜು.3ರಂದು ರಾಜ್ಯಪಾಲರ ಆದೇಶ ಅನುಸಾರ ಆದೇಶ ಹೊರಡಿಸಿದ್ದಾರೆ.
ಗಂಗೀರೆಡ್ಡಿ ಅವರು ಕರಾವಳಿ ಕಾವಲು ಪಡೆಯ (ಸಿ.ಎಸ್.ಪಿ.) ಇನ್‌ಸ್ಪೆಕ್ಟರ್ ಆಗಿ 11 ವರ್ಷಗಳ ಬಳಿಕ ಡಿವೈಎಸ್‌ಪಿ ಆಗಿ ಪದೋನ್ನತಿಯಾಗಿದ್ದರು. 2023ರಲ್ಲಿ ಎಸ್‌ಪಿ ಆಗಿದ್ದರು. ಅದಕ್ಕೂ ಮೊದಲು ಬೆಳ್ತಂಗಡಿಯಲ್ಲಿ ಅವರು ಇನ್‌ಸ್ಪೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದಾಗ ಆದಾಯ ಕ್ಕಿಂತ ಹೆಚ್ಚಿನ ಆಸ್ತಿ ಹೊಂದಿದ ಆರೋಪದ ಮೇಲೆ 2009ರಲ್ಲಿ ಲೋಕಾಯುಕ್ತ ಪೊಲೀಸರಿಂದ ದಾಳಿಗೆ ಒಳಗಾಗಿ ಮಂಗಳೂರು ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ಶಿಕ್ಷೆಗೆ ಒಳಗಾಗಿದ್ದರು. ಆ ಪ್ರಕರಣವನ್ನು ರಾಜ್ಯ ಉಚ್ಚ ನ್ಯಾಯಾಲಯ ಖುಲಾಸೆಗೊಳಿಸಿ ಆದೇಶ ಮಾಡಿತ್ತು.