ಚೆನ್ನೈ: ʼಕಂಗುವʼ ಬಳಿಕ ನಟ ಸೂರ್ಯ (Actor Suriya) ದೊಡ್ಡ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಕಾರ್ತಿಕ್ ಸುಬ್ಬರಾಜ್ (Karthik Subbaraj) ಜತೆಗಿನ ʼರೆಟ್ರೋʼ (Retro) ಆ ದೊಡ್ಡ ಗೆಲುವು ತಂದುಕೊಡುತ್ತದೆ ಎನ್ನುವ ಮಾತುಗಳು ಕಾಲಿವುಡ್ನಲ್ಲಿ ಕೇಳಿ ಬರುತ್ತಿದೆ.
ನಟ ಸೂರ್ಯ ಮಾಸ್ & ರೆಟ್ರೋ ಲುಕ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರೊಮ್ಯಾಂಟಿಕ್ ಕಂ ಆ್ಯಕ್ಷನ್ ಕಥೆ ʼರೆಟ್ರೋʼ ಇತ್ತೀಚೆಗೆ ಟೀಸರ್ ರಿಲೀಸ್ ಮಾಡಿ ಸದ್ದು ಮಾಡಿತ್ತು.
ದೇವಸ್ಥಾನವೊಂದರ ಮುಂದೆ ನಾಯಕಿ – ನಾಯಕಿ (ಸೂರ್ಯ – ಪೂಜಾ ಹೆಗ್ಡೆ) ʼಕೋಪವನ್ನು ಕಮ್ಮಿ ಮಾಡಿಕೊಳ್ಳುತ್ತೇನೆ. ನನ್ನ ತಂದೆ ಜತೆ ಮಾಡುತ್ತಿರುವ ಕೆಲಸವನ್ನು ಬಿಡುತ್ತೇನೆ. ರೌಡಿಸಂ, ಹಿಂಸೆ, ಹೊಡೆದಾಟ ಎಲ್ಲವನ್ನು ಈ ಕ್ಷಣದಿಂದಲೇ ಬಿಡುತ್ತೇನೆ. ನಾವು ನಗು ಹಾಗೂ ಸಂತೋಷದಿಂದ ಇರಲು ಪ್ರಯತ್ನಿಸುವ ಎಂದು ಹೇಳಿ ಮದುವೆ ಪ್ರಸ್ತಾಪವನ್ನು ಮಾಡುವ ದೃಶ್ಯವನ್ನು ಟೀಸರ್ ನಲ್ಲಿ ತೋರಿಸಲಾಗಿತ್ತು.
ಟೀಸರ್ ನೋಡಿದಾಗ ಇದೊಂದು ಹೈಆಕ್ಟೇನ್ ಆ್ಯಕ್ಷನ್ ಸಿನಿಮಾವೆನ್ನುವುದು ಗೊತ್ತಾಗುತ್ತದೆ. ಇದೀಗ ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಆಗಿದೆ.
ಈ ವರ್ಷದ ಮೇ 1 ರಂದು ʼರೆಟ್ರೋʼ ಚಿತ್ರ ರಿಲೀಸ್ ಆಗಲಿದೆ ಎಂದು ಪೋಸ್ಟರ್ವೊಂದರ ರಿಲೀಸ್ ಡೇಟ್ ಅನೌನ್ಸ್ ಮಾಡಿದ್ದಾರೆ. ರಿಲೀಸ್ ಡೇಟ್ ಕೇಳಿ ಸೂರ್ಯ ಫ್ಯಾನ್ಸ್ಗಳು ಕೇಳಿ ಥ್ರಿಲ್ ಆಗಿದ್ದಾರೆ.
ಚಿತ್ರದಲ್ಲಿ ಸೂರ್ಯ , ಪೂಜಾ ಅವರಲ್ಲದೆ ಜಯರಾಮ್, ಜೋಜು ಜಾರ್ಜ್, ಕರುಣಾಕರನ್, ನಾಸರ್, ಪ್ರಕಾಶ್ ರಾಜ್, ಸುಜಿತ್ ಶಂಕರ್, ಪ್ರೇಮ್ ಕುಮಾರ್ ಮುಂತಾದವರು ನಟಿಸಿದ್ದಾರೆ.