Advertisement

ರೈತರ ಮೇಲಿನ ಪ್ರಕರಣ ಹಿಂಪಡೆಯಿರಿ

02:18 PM Jun 02, 2019 | Team Udayavani |

ಹಾನಗಲ್ಲ: ರೈತರ ಮೇಲಿನ ಪ್ರಕರಣ ವಾಪಸ್‌ ಪಡೆಯುವಂತೆ ಒತ್ತಾಯಿಸಿ ಹಾನಗಲ್ಲ ತಾಲೂಕು ಹಸಿರು ಸೇನೆ ರೈತ ಸಂಘಟನೆ ತಾಲೂಕು ತಹಸೀಲ್ದಾರ್‌ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

Advertisement

ಶುಕ್ರವಾರ ತಹಸೀಲ್ದಾರ್‌ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ ತಾಲೂಕು ಹಸೀರು ಸೇನೆ ಜಿಲ್ಲಾ ಉಪಾಧ್ಯಕ್ಷ ಅಡಿವೆಪ್ಪ ಆಲದಕಟ್ಟಿ, ಸತತ 32 ವರ್ಷಗಳಿಂದ ರೈತಪರ ನ್ಯಾಯುತ ಹೋರಾಟ ಮಾಡಿ ಲಕ್ಷಾಂತರ ರೈತರಿಗೆ ನ್ಯಾಯಕೊಡಿಸಿದ ಕೀರ್ತಿ ಜಿಲ್ಲಾ ಹಾಗೂ ತಾಲೂಕು ಹಸೀರು ಸೇನೆ ರೈತ ಸಂಘಟನೆಗೆ ಸಲ್ಲುತ್ತದೆ. ಅಂಥ ನ್ಯಾಯಯುತ ಹೋರಾಟಗಾರರ ಮೇಲೆ ಹಿಂದಿನ ಜಿಲ್ಲಾಧಿಕಾರಿ ಪೊಲೀಸರನ್ನು ಬಳಸಿಕೊಂಡು ಸುಳ್ಳು ಪ್ರಕರಣ ದಾಖಲಿಸಿರುವುದು ಖಂಡನೀಯ. ರೈತರು ಪ್ರತಿ ಹೋರಾಟದಲ್ಲಿ ಯಾವುದೇ ಸರಕಾರಿ ಆಸ್ತಿ ಪಾಸ್ತಿ ಹಾನಿಯಾಗದಂತೆ ರೈತರ ಧ್ವ್ವನಿಯಾಗಿ ಚಳವಳಿ ಮಾಡುತ್ತ ಬಂದಿದೆ. ಆದಾಗ್ಯೂ ರೈತರ ಹೋರಾಟ ಹತ್ತಿಕ್ಕಲು ಜಿಲ್ಲಾಡಳಿತ ರೈತರ ವಿರುದ್ಧ ಸಂಚು ಮಾಡಿ, ಪೊಲೀಸರನ್ನು ಬಳಸಿಕೊಂಡು ತಾಲೂಕು ಹಾಗೂ ಜಿಲ್ಲಾ ಸಂಘಟನೆಯ ಸುಮಾರು 32 ರೈತರ ಮೇಲೆ ಮೂರು ಪ್ರಕರಣ ದಾಖಲಿಸಿ, ಜೈಲಿಗೆ ಕಳುಹಿಸುವ ಹುನ್ನಾರ ನಡೆಸಿದ್ದಾರೆ. ಈ ಘಟನೆಗೆ ಕಾರಣರಾದ ಹಿಂದಿನ ಜಿಲ್ಲಾಧಿಕಾರಿ ನಡವಳಿಕೆಯನ್ನು ತಾಲೂಕು ರೈತ ಸಂಘಟನೆ ಖಂಡಿಸುತ್ತದೆ. ಕೂಡಲೇ ಮುಖ್ಯಮಂತ್ರಿಗಳು ರೈತರ ಮೇಲಿನ ಸುಳ್ಳು ಪ್ರಕರಣಗಳನ್ನು ಹಿಂಪಡೆಯಬೇಕು. ಇಲ್ಲವಾದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ತಾಲೂಕು ಹಸಿರು ಸೇನೆ ರೈತ ಸಂಘಟನೆ ಅಧ್ಯಕ್ಷ ಮರಿಗೌಡ ಪಾಟೀಲ ಮಾತನಾಡಿ, ಕಳೆದ ವರ್ಷ ಧರ್ಮಾ ಜಲಾಶಯಕ್ಕೆ ನೀರು ಬಿಡುವಂತೆ ಒತ್ತಾಯಿಸಿ ಅಕ್ಕಿಆಲೂರಿನಲ್ಲಿ ಶಾಂತಿಯುತ ಪ್ರತಿಭಟನೆ ನಡೆಸಿದ್ದೇವು. ಆ ಪ್ರತಿಭಟನೆಯಲ್ಲಿ ನಮ್ಮ ತಾಲೂಕು ರೈತ ಸಂಘದ ಏಳು ಮಂದಿ ಪದಾಧಿಕಾರಿಗಳ ಮೇಲೆ ಸುಳ್ಳು ಪ್ರಕರಣ ದಾಖಲಿಸಿದ್ದಲ್ಲದೆ ಜಿಲ್ಲೆಯಲ್ಲಿ ಒಟ್ಟು 32 ರೈತರ ಮೇಲಿನ ಪ್ರಕರಣ ವಜಾ ಮಾಡಬೇಕೆಂದು ಆಕ್ರೋಶ ವ್ಯಕ್ತಪಡಿಸಿದರು. ಸದ್ಯ ತಾಲೂಕಿನಾದ್ಯಂತ 26 ಸಾವಿರ ರೈತರ ಖಾತೆಗೆ 19 ಕೋಟಿ 3 ಲಕ್ಷ ರೂ.ಗಳನ್ನು ಕೊಡಿಸುವಲ್ಲಿ ಸತತ ರೈತರ ಪ್ರಯತ್ನ ಹಾಗೂ ಕರ್ನಾಟಕ ರಾಜ್ಯ ಹಸಿರು ಸೇನೆ ರೈತ ಸಂಘಟನೆಯ ಹೋರಾಟದಿಂದ ಮಾತ್ರ ಸಾಧ್ಯ ಎಂದರು. ಮಲ್ಲೇಶಪ್ಪ ಪರಪ್ಪನವರ, ರುದ್ರಪ್ಪ ಹಣ್ಣಿ, ವಾಸುದೇವ ಕಮಾಟಿ, ಸೋಮಣ್ಣ ಜಡೆಗೊಂಡರ, ರಾಮಪ್ಪ ಕೋಟಿ, ಬಸನಗೌಡ ಪಾಟೀಲ, ಅಬ್ದುಲ್ಖಾದರ್‌ ಮುಲ್ಲಾ, ಕರಬಸಪ್ಪ ಮಾಕೊಪ್ಪದ, ಶ್ರೀಕಾಂತ ದುಂಡಣ್ಣನವರ, ಎಸ್‌.ಎಸ್‌. ಇನಾಂದಾರ್‌, ಮಾಲಿಂಗಪ್ಪ ಅಕ್ಕಿವಳ್ಳಿ, ಷಣ್ಮುಕಪ್ಪ ಆಂದಲಗಿ, ಮಾಲತೇಶ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next