ಕಾಬೂಲ್: ಉಗ್ರ ಸಂಘಟನೆಯಾದ ಜೈಶ್ ಇ ಮೊಹಮ್ಮದ್ ನಾಯಕ ಮಸೂದ್ ಅಜರ್ ಅಲ್ವಿ ಪಾಕಿಸ್ತಾನದಿಂದ ಅಫ್ಘಾನಿಸ್ತಾನಕ್ಕೆ ಸ್ಥಳಾಂತರಗೊಂಡಿದ್ದಾನೆ ಎಂಬ ಪಾಕಿಸ್ತಾನದ ಹೇಳಿಕೆಗೆ ತಾಲಿಬಾನ್ ವಕ್ತಾರ ಝಬಿವುಲ್ಲಾ ಮುಜಾಹಿದ್ ಪ್ರತಿಕ್ರಿಯೆ ನೀಡಿದ್ದು, ಮೌಲಾನಾ ಮಸೂದ್ ಅಫ್ಘಾನಿಸ್ತಾನದಲ್ಲಿದ್ದಾನೆ ಎಂಬ ಪಾಕ್ ಹೇಳಿಕೆಯನ್ನು ನಿರಾಕರಿಸಿ, ಆ ನಿಜಕ್ಕೂ ಪಾಕಿಸ್ತಾನದಲ್ಲಿಯೇ ಇದ್ದಿರುವುದಾಗಿ ತಿರುಗೇಟು ನೀಡಿರುವುದಾಗಿ ಅಫ್ಘಾನಿಸ್ತಾನದ ಸ್ಥಳೀಯ ಮಾಧ್ಯಮ ಟೋಲೊ ನ್ಯೂಸ್ ವರದಿ ಮಾಡಿದೆ.
ಇದನ್ನೂ ಓದಿ:ಕೆನಡಾ: ದೇವಾಲಯದಲ್ಲಿ ಭಾರತ ವಿರೋಧಿ ಘೋಷಣೆಗಳ ಬರಹ; ವಿವಾದ
ಜೈಶ್ ಇ ಮೊಹಮ್ಮದ್ ಉಗ್ರ ಸಂಘಟನೆಯ ನಾಯಕ ಮೌಲಾನಾ ಮಸೂದ್ ಅಜರ್ ನನ್ನು ಬಂಧಿಸುವಂತೆ ಪಾಕಿಸ್ತಾನ ಅಫ್ಘಾನಿಸ್ತಾನಕ್ಕೆ ಪತ್ರ ಬರೆದಿತ್ತು. ಮೌಲಾನಾ ಅಜರ್ ಪಾಕಿಸ್ತಾನದಿಂದ ಅಫ್ಘಾನಿಸ್ತಾನದ ನಂಗರ್ಹಾರ್ ಮತ್ತು ಕನ್ಹಾರ್ ಪ್ರದೇಶದಲ್ಲಿ ಅಡಗಿಕೊಂಡಿರಬೇಕು. ಆತ ಠಿಕಾಣಿ ಹೂಡಿರುವ ಸ್ಥಳ ಪತ್ತೆ ಹಚ್ಚುವುದಕ್ಕೆ ತಾಲಿಬಾನ್ ಸರ್ಕಾರ ಸಹಕರಿಸಬೇಕು ಎಂದು ಪಾಕ್ ಪತ್ರದಲ್ಲಿ ಮನವಿ ಮಾಡಿಕೊಂಡಿತ್ತು.
ಪಾಕ್ ಪತ್ರಕ್ಕೆ ತಿರುಗೇಟು ನೀಡಿರುವ ಝಬಿವುಲ್ಲಾ, ಜೈಶ್ ಇ ಮೊಹಮ್ಮದ್ ಸಂಘಟನೆಯ ನಾಯಕ ಅಫ್ಘಾನಿಸ್ತಾನದಲ್ಲಿ ಇಲ್ಲ. ಇದು ಪಾಕಿಸ್ತಾನದಲ್ಲಿ ಇರಬಹುದಾದ ಸಂಘಟನೆಯಾಗಿದೆ. ಏನೇ ಆದರು ನಾವು ಅಫ್ಘಾನಿಸ್ತಾನದ ಬಳಿ ಈ ರೀತಿ ಮನವಿ ಮಾಡಿಕೊಳ್ಳುವುದು ಸರಿಯಲ್ಲ. ಪಾಕ್ ಹೀಗೆ ಮನವಿ ಮಾಡಿಕೊಂಡಿದೆ ಎಂಬ ಸುದ್ದಿಯನ್ನು ನಾವು ಕೇಳಿದ್ದು, ಇದು ನಿಜವಲ್ಲ ಎಂಬುದು ನಮ್ಮ ಪ್ರತಿಕ್ರಿಯೆಯಾಗಿದೆ ಎಂದು ತಾಲಿಬಾನ್ ತಿಳಿಸಿರುವುದಾಗಿ ವರದಿ ವಿವರಿಸಿದೆ.