Advertisement

Puttur: ಕೆಎಸ್ಸಾರ್ಟಿಸಿ ನಿವೃತ್ತ ಸಂಚಾರ ನಿಯಂತ್ರಣಾಧಿಕಾರಿ ಆತ್ಮಹತ್ಯೆ

10:29 PM Dec 15, 2023 | Team Udayavani |

ಪುತ್ತೂರು: ಪುತ್ತೂರು ಕೆಎಸ್ಸಾರ್ಟಿಸಿ ಘಟಕದ ನಿವೃತ್ತ ಸಂಚಾರ ನಿಯಂತ್ರಣಾಧಿಕಾರಿ, ಬಪ್ಪಳಿಗೆ ನಿವಾಸಿ ಶಾಂತಾರಾಮ ವಿಟ್ಲ (55) ಅವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಡಿ. 15ರಂದು ಸಂಜೆ ನಡೆದಿದೆ.

Advertisement

ಮೃತರು ಪತ್ನಿ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಶಾಂತಾರಾಮ ಶೆಟ್ಟಿ ವಿಟ್ಲ ಅವರು ಮೂಲತಃ ಬಂಟ್ವಾಳ ತಾಲೂಕಿನ ವಿಟ್ಲ ಸಮೀಪದ ಸಾಲೆತ್ತೂರಿನವರಾಗಿದ್ದು, ಪುತ್ತೂರಿನ ಬಪ್ಪಳಿಗೆಯಲ್ಲಿ ನೆಲೆಸಿದ್ದರು. ಗೃಹ ಪ್ರವೇಶಕ್ಕೆ ತೆರಳಿದ್ದ ಪತ್ನಿ ಮನೆಗೆ ಬಂದ ವೇಳೆ ಆತ್ಮಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ.
ಶಾಂತಾರಾಮ ವಿಟ್ಲ ಅವರು ಪುತ್ತೂರು ಕೆಎಸ್ಸಾರ್ಟಿಸಿ ವಿಭಾಗದಲ್ಲಿ ಹಲವು ವರ್ಷಗಳ ಕಾಲ ಬಸ್‌ ನಿರ್ವಾಹಕರಾಗಿ, ಬಳಿಕ ಪುತ್ತೂರು ಕೆಎಸ್ಸಾರ್ಟಿಸಿ ಬಸ್‌ ನಿಲ್ದಾಣದಲ್ಲಿ ಸಂಚಾರ ನಿಯಂತ್ರಣಾಧಿಕಾರಿಯಾಗಿ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದಿದ್ದರು.

ಕೆಎಸ್ಸಾರ್ಟಿಸಿ ಮಜ್ದೂರ್‌ ಸಂಘದ ಜಿÇÉಾ ವಕ್ತಾರ ಹಾಗೂ ರಾಜ್ಯ ಕಾರ್ಯದರ್ಶಿಯಾಗಿದ್ದ ಶಾಂತಾರಾಮ ವಿಟ್ಲ ಅವರು ಹಲವು ಸಂದರ್ಭಗಳಲ್ಲಿ ಕೆಎಸ್ಸಾರ್ಟಿಸಿ ನೌಕರರ ಪರವಾಗಿ ಹೋರಾಟ ನಡೆಸಿ ನ್ಯಾಯ ಒದಗಿಸುವ ಕೆಲಸ ಮಾಡಿದ್ದರು. ಕಾಂಟ್ರಾಕ್ಟ್ ಕ್ಯಾರೇಜ್‌ ಬಸ್‌ ವ್ಯವಸ್ಥೆಯ ವಿರುದ್ಧವಾಗಿ ಪುತ್ತೂರಿನಲ್ಲಿ ಹಲವಾರು ಬಾರಿ ನಡೆದ ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಕಷ್ಟ ಕಾರ್ಪಣ್ಯ ಉಳ್ಳವರಿಗೆ ನೆರವು ನೀಡಿ ಜನಾನುರಾಗಿದ್ದರು. ಇತ್ತೀಚೆಗೆ ನಗರದಲ್ಲಿ ಜನಸೇವಾ ಕೇಂದ್ರವನ್ನು ತೆರೆದಿದ್ದರು. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next