Advertisement

Retired soldier: ಮಹಿಳೆ ಮನೆ ಮುಂದೆ ಗಾಳಿಗೆ ಗುಂಡು ಹಾರಿಸಿದ ನಿವೃತ್ತ ಯೋಧ ಬಂಧನ

11:30 AM Feb 07, 2024 | Team Udayavani |

ಬೆಂಗಳೂರು: ಪರಿಚಯಸ್ಥ ಮಹಿಳೆಯೊಬ್ಬರ ಮನೆ ಬಳಿ ಹೋಗಿ ಗಾಳಿಯಲ್ಲಿ ಗುಂಡು ಹಾರಿಸಿದ ನಿವೃತ್ತ ಸೈನಿಕನನ್ನು ಗಂಗಮ್ಮನಗುಡಿ ಪೊಲೀಸರು ಬಂಧಿಸಿದ್ದಾರೆ.

Advertisement

ಅಬ್ಬಿಗೆರೆ ನಿವಾಸಿ ಪರುಶುರಾಮ್‌(58) ಬಂಧಿತ ನಿವೃತ್ತ ಸೈನಿಕ.

ಆರೋಪಿ ಪರಶುರಾಮ್‌ ಅಬ್ಬಿಗೆರೆಯ ಲಕ್ಷ್ಮಮ್ಮ ಲೇಔಟ್‌ನಲ್ಲಿರುವ ಮಹಿಳೆ ಯೊ ಬ್ಬರ ಜತೆ ಆತ್ಮೀಯತೆ ಹೊಂದಿದ್ದ. ಈ ಹಿನ್ನೆಲೆಯಲ್ಲಿ ಸೋಮವಾರ ತಡರಾತ್ರಿ ಆಕೆ ಮನೆ ಬಳಿ ಹೋಗಿದ್ದಾನೆ. ಅದೇ ವೇಳೆ ಮಹಿಳೆಯ ಮಗ ಸೂರಜ್‌, ಆರೋಪಿಯನ್ನು ಗಮನಿಸಿ, “ಈ ಹೊತ್ತಿನಲ್ಲಿ ನಮ್ಮ ಮನೆ ಬಳಿ ಏಕೆ ಬಂದಿದ್ದಿರಾ’ ಎಂದು ಪ್ರಶ್ನಿಸಿದ್ದಾನೆ. ಈ ವೇಳೆ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಅದು ವಿಕೋಪಕ್ಕೆ ಹೋದಾಗ ಕೋಪಗೊಂಡ ಪರುಶುರಾಮ್‌, ಸೂರಜ್‌ನನ್ನು ಹೆದರಿಸಲು ತನ್ನ ಬಳಿಯಿದ್ದ ಪರವಾನಗಿ ಪಡೆದ ರಿವಾಲ್ವರ್‌ನಿಂದ ಒಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದ್ದಾನೆ. ಈ ಗುಂಡಿನ ಶಬ್ದದಿಂದ ಸೂರಜ್‌ ಮನೆಯವರು ಹಾಗೂ ಅಕ್ಕ-ಪಕ್ಕದ ಮನೆಯವರು ಹೊರಗಡೆ ಬರುತ್ತಿದ್ದಂತೆ ಆರೋಪಿ ಸ್ಥಳದಿಂದ ಪರಾರಿಯಾಗಿದ್ದ. ಈ ಸಂಬಂಧ ಆರೋಪಿಯನ್ನು ಬಂಧಿಸಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next