Advertisement

ನಾಶಿಕ್‌ : ಗುಂಡೆಸೆದುಕೊಂಡು ಆತ್ಮಹತ್ಯೆಗೈದ ನಿವೃತ್ತ ಸೇನಾ ಜವಾನ

12:23 PM Mar 06, 2018 | Team Udayavani |

ನಾಶಿಕ್‌ : 42ರ ಹರೆಯದ ನಿವೃತ್ತ ಸೇನಾ ಜವಾನ, ಸಂತೋಷ್‌ ಕುಮಾರ್‌ ಮಹೇಶ್ವರ್‌ ಚೌಧರಿ, ತನ್ನ ಗ್ರಾಮದಲ್ಲಿ ಬಯಲು ಪ್ರದೇಶದಲ್ಲಿ, ತನ್ನನ್ನು ತಾನು ಗುಂಡಿಕ್ಕಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

Advertisement

ನಾಶಿಕ್‌ ನಗರಕ್ಕೆ ಸಮೀಪದ ವಾದ್‌ನರ್‌ಗಾಂವ್‌ನಲ್ಲಿ ತನ್ನ ಕುಟುಂಬದವರೊಂದಿಗೆ ವಾಸವಾಗಿದ್ದ ಸಂತೋಷ್‌ ಕುಮಾರ್‌ ಮನೆಯಲ್ಲಿ ಯಾರೂ ಇಲ್ಲದಿದ್ದ ವೇಳೆ, ತನ್ನ ತಂದೆಯ ರೈಫ‌ಲ್‌ನಿಂದ, ಬಯಲು ಪ್ರದೇಶದಲ್ಲಿ ಗುಂಡೆಸೆದುಕೊಂಡು ಆತ್ಮಹತ್ಯೆ ಮಾಡಿಕೊಂಡನೆಂದು ಪೊಲೀಸ್‌ ಡೆಪ್ಯುಟಿ ಕಮಿಶನರ್‌ ಶ್ರೀಕೃಷ್ಣ ಕೋಕಟೆ ತಿಳಿಸಿದ್ದಾರೆ. 

ಸಂತೋಷ್‌ ಕುಮಾರ್‌ “ನನ್ನ ಸಾವಿಗೆ ಯಾರೂ ಕಾರಣರಲ್ಲ” ಎಂದು ಬರೆದಿಟ್ಟಿರುವ ಡೆತ್‌ ನೋಟ್‌ ಸಿಕ್ಕಿದೆ. ಆದರೆ ಆತ್ಮಹತ್ಯೆಗೆ ಏನು ಕಾರಣ ಎಂಬುದು ಗೊತ್ತಾಗಿಲ್ಲ. ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next