Advertisement
ಸ್ವಲ್ಪ ಸಮಯದ ಹಿಂದೆಯಷ್ಟೆ ತಡೆಗೋಡೆಯ ಕೆಳ ಭಾಗದ ಕೆಲವು ಸೀಮೆಂಟ್ ಸ್ಲ್ಯಾಬ್ ಗಳು ಹೊರ ಭಾಗಕ್ಕೆ ಸರಿದಿದ್ದವು. ಶನಿವಾರ ಸಂಜೆಯ ವೇಳೆಗೆ ಮತ್ತಷ್ಟು ಸಿಮೆಂಟ್ ಸ್ಲ್ಯಾಬ್ ಗಳು ಮುಂದಕ್ಕೆ ವಾಲಿಕೊಳ್ಳಲಾರಂಭಿಸಿದ್ದವು. ಲೋಕೋಪಯೋಗಿ ಇಲಾಖೆ ಸ್ಲ್ಯಾಬ್ ಗಳಿಗೆ ರಂಧ್ರಗಳನ್ನು ಕೊರೆದು, ನೀರು ಹರಿದುಹೋಗುವಂತೆ ಮಾಡಿ ಮಣ್ಣಿನ ಒತ್ತಡ ತಡೆಯುವ ವಿಫಲ ಯತ್ನ ನಡೆಸಿತ್ತು. ಅನಂತರ ಮತ್ತಷ್ಟು ಸ್ಲ್ಯಾಬ್ ಗಳು ಹೊರಚಾಚಿಕೊಳ್ಳಲಾ ರಂಭಿಸಿದ್ದವು. ಮತ್ತಷ್ಟು ಅನಾಹುತ ಸಂಭವಿಸುವ ಸಾಧ್ಯತೆಗಳ ಹಿನ್ನೆಲೆ ಶನಿವಾರ ರಾತ್ರಿ ಮಡಿಕೇರಿ-ಮಂಗಳೂರು ರಸ್ತೆ ಸಂಚಾರವನ್ನು ನಿರ್ಬಂಧಿಸಲಾಯಿತು.
ಜಿಲ್ಲಾಡಳಿತದ ಈ ಏಕಾಏಕಿ ನಿರ್ಧಾರವನ್ನು ವಿರೋಧಿಸಿ ರಾತ್ರಿಯ ಅವಧಿಯಲ್ಲಿ ಮಳೆಯ ನಡುವೆ ವಿವಿಧೆಡೆಗಳಿಂದ ಮಂಗಳೂರಿನತ್ತ ತೆರಳುತ್ತಿದ್ದ ಪ್ರಯಾಣಿಕರು ಹಾಗೂ ಸಾರ್ವಜನಿಕರು ಪ್ರತಿಭಟನೆ ನಡೆಸಿದ ಘಟನೆಯೂ ನಡೆದಿದೆ. ಮಂಗಳೂರಿಗೆ ಪರ್ಯಾಯ ಮಾರ್ಗ
ಮೇಕೇರಿ-ಕಾಟಕೇರಿ ಮಾರ್ಗದಲ್ಲಿ ವಾಹನಗಳ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ಈ ಸಮಸ್ಯೆಯಿಂದ ಮಂಗಳೂರು ಕಡೆಗೆ ತೆರಳುವವರು ಅಂದಾಜು 10 ಕಿ.ಮೀ. ಬಳಸು ಹಾದಿಯನ್ನು ಬಳಸುವುದು ಅನಿವಾರ್ಯ ವಾಗಿದೆ.