Advertisement

ಚಿಲ್ಲರೆ ಹಣದುಬ್ಬರ ಆಗಸ್ಟ್‌ನಲ್ಲಿ ಶೇ.7ಕ್ಕೆ ಏರಿಕೆ

07:11 PM Sep 12, 2022 | Team Udayavani |

ನವದೆಹಲಿ: ಚಿಲ್ಲರೆ ಹಣದುಬ್ಬರವು ಆಗಸ್ಟ್‌ನಲ್ಲಿ ಶೇ.7ಕ್ಕೆ ಏರಿಕೆಯಾಗಿದೆ.

Advertisement

ಇದು ಜುಲೈ ತಿಂಗಳಲ್ಲಿ ಶೇ.6.71ರಷ್ಟಿತ್ತು. ಕಳೆದ 8 ತಿಂಗಳುಗಳಿಂದ ಹಣದುಬ್ಬರ ಪ್ರಮಾಣ ಶೇ.6ಕ್ಕಿಂತ ಹೆಚ್ಚಾಗಿಯೇ ಇದೆ. ಆಗಸ್ಟ್‌ನಲ್ಲಿ ಆಹಾರ ಹಣದುಬ್ಬರ ಪ್ರಮಾಣ ಶೇ.7.62ಕ್ಕೇರಿರುವುದಾಗಿ ಸರ್ಕಾರ ತಿಳಿಸಿದೆ.

ಇದು ಜುಲೈನಲ್ಲಿ ಶೇ.6.69 ಹಾಗೂ 2021ರ ಆಗಸ್ಟ್‌ನಲ್ಲಿ ಶೇ.3.11ರಷ್ಟಿತ್ತು ಎಂದೂ ಹೇಳಿದೆ. ಇದೇ ವೇಳೆ, ದೇಶದಲ್ಲಿ ಕೈಗಾರಿಕಾ ಉತ್ಪಾದನೆಯು ಜುಲೈ ತಿಂಗಳಲ್ಲಿ ಶೇ.2.4 ಏರಿಕೆಯಾಗಿದೆ.

ಉತ್ಪಾದನಾ ವಿಭಾಗದ ಹೊರಹರಿವು ಶೇ.3.2 ಏರಿಕೆಯಾಗಿದೆ. ಹಾಗೆಯೇ ಗಣಿಗಾರಿಕೆಯ ಹೊರಹರಿವು ಶೇ.3.3 ಏರಿದೆ.

ವಿದ್ಯುತ್‌ ಉತ್ಪಾದನೆಯಲ್ಲಿ ಶೇ.2.3 ಏರಿಕೆಯಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next