Advertisement

ಯಡ್ಡಳ್ಳಿಯಲ್ಲಿ ಪುನರುತ್ಥಾನ ಉತ್ಸವ

05:23 PM Apr 23, 2019 | pallavi |

ಯಾದಗಿರಿ: ತಾಲೂಕಿನ ಯಡ್ಡಳ್ಳಿಯಲ್ಲಿ ರವಿವಾರ ಕ್ರೈಸ್ತ ಸಮುದಾಯದ ಜನರು ಯೇಸು ಕ್ರಿಸ್ತನ ಪುನರುಸ್ಥಾನ ಉತ್ಸವವನ್ನು ಶ್ರದ್ಧೆ ಭಕ್ತಿಯಿಂದ ಅದ್ಧೂರಿಯಾಗಿ ಆಚರಿಸಿದರು.

Advertisement

ಬೆಳಗ್ಗೆ ಗ್ರಾಮದ ಹೊರವಲಯದಲ್ಲಿರುವ ಕಲ್ವಾರಿ ಬೆಟ್ಟದಲ್ಲಿ ಯೇಸು ಶಿಲುಬೆಗೆ ತೆರಳಿ ಪ್ರಾರ್ಥನೆ ಸಲ್ಲಿಸಿ ಈಸ್ಟರ್‌ ಸಂಡೆ ಪ್ರಯುಕ್ತ ಶ್ರಂಗರಿಸಿದ

ಎತ್ತಿನ ಬಂಡಿ ಮೇಲೆ ಯೇಸುಕ್ರಿಸ್ತನ ಭಾವಚಿತ್ರವಿಟ್ಟು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಮೇಥೋಡಿಸ್ಟ್‌ ಚರ್ಚ್‌ಗೆ ತಲುಪಿತು. ಬಳಿಕ ಚರ್ಚ್‌ನಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

ಯೇಸು ಕ್ರಿಸ್ತನು ಲೋಕದ ಜನರ ಪಾಪಗಳ ನಿವಾರಣೆಗಾಗಿ ಶಿಲುಬೆ ಮೇಲೆ ಘೋರ ಮರಣವನ್ನಪ್ಪಿ ಮೂರನೇ ದಿನದಲ್ಲಿ ಎದ್ದು ಬಂದ ಈ ದಿನವನ್ನು ಕ್ರೈಸ್ತರು ಪುನರುತ್ಥಾನ ದಿನ ಎಂದು ಆಚರಣೆ ಮಾಡುವುದು ಸಂಪ್ರದಾಯ. ಮೆರವಣಿಗೆ ಉದಕ್ಕೂ ಗ್ರಾಮದ ಮಕ್ಕಳು, ಯುವಕರ ಲೇಜಿಮ್‌, ಕೋಲಾಟ ಹಾಗೂ ಭಜನೆ ಸಾರ್ವಜನಿಕರ ಗಮನ ಸೆಳೆಯಿತು.

ಪಾಸ್ಟರ್‌ ರೆ| ಜೈವಂತ ನೇತೃತ್ವದಲ್ಲಿ ನಡೆದ ಮೆರವಣಿಗೆಯಲ್ಲಿ ಜ್ಞಾನಮಿತ್ರ ಆಶ‌ನಾಳ, ಶಿರೋಮಣಿ ಕಿಲ್ಲನಕೇರಿ, ಶ್ಯಾಮಸುಂದರ್‌ ಮಾಸ್ಟರ್‌ ದಂಡಿನ, ಜ್ಞಾನಮಿತ್ರ ನರಸಣೋರ, ವಿಕ್ಟರ್‌ ರಾಜು, ಜೈವಂತ ದಂಡಿನ, ರಾಜಪ್ಪ ಆರಬೋಳ, ರವಿರಂಗಣೋರ, ಚಾರ್ಲಿ ಆಶನಾಳ, ಶ್ಯಾಮಸುಂದರ್‌ ದಂಡಿನ, ಆನಂದಪ್ಪ ಮಿಲಿó ರಗಣೋರ, ಪ್ರಭು ದಂಡಿನ, ರವಿ ನರಸಣ್ಣ, ಯಜ್ಕೇಲ್ ಕಿಲ್ಲನಕೆರಿ, ಸಾಲುಮನ ಯಡ್ಡಳ್ಳಿ ಗ್ರಾಪಂ ಸದಸ್ಯರಾದ ಮುನಿಂದ್ರ ದಂಡಿನ, ಕಮಲ್ಲಮ್ಮ ಯಂಕನೋರ ಸೇರದಂತೆ ನೂರಾರು ಕ್ರೈಸ್ತ ಬಾಂಧವರು ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next