Advertisement
ಗ್ರಾಮೀಣ ಪ್ರದೇಶಗಳಲ್ಲಿ ಮುಟ್ಟಿನ ಸ್ರಾವದ ನಿರ್ವಹಣೆಗೆ ಹಳೆಯ ಬಟ್ಟೆ ಬಳಸುವುದು ಮತ್ತು ಅವೈಜ್ಞಾನಿಕ ವಿಧಾನಗಳನ್ನು ಅನುಸರಿಸುತ್ತಿರುವುದರಿಂದ ಅನಾರೋಗ್ಯಕ್ಕೆ ಒಳಗಾಗುವುದು ಸಾಮಾನ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಹದಿಹರೆಯದ ಹೆಣ್ಮಕ್ಕಳಿಗೆ ಋತು (ಮುಟ್ಟಿನ) ಕಾಲದಲ್ಲಿ ಸ್ವತ್ಛತೆ ಅರಿವು ಮೂಡಿಸಲು ಶುಚಿ ಯೋಜನೆಯನ್ನು ಜಾರಿಗೊಳಿಸಲಾಗಿತ್ತು. ರಾಜ್ಯ ಸರಕಾರ ಆರೋಗ್ಯ ಇಲಾಖೆ ಮೂಲಕ ಪ್ರೌಢ ಹಾಗೂ ಪದವಿ ಪೂರ್ವ ಶಾಲೆಗಳ ಹೆಣ್ಮಕ್ಕಳಿಗೆ ಸ್ಯಾನಿಟರಿ ನ್ಯಾಪಕಿನ್ ವಿತರಿಸಲಾಗುತ್ತಿದೆ.
ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ಕೊನೆಯ ಹಂತದ ತಪಾಸಣೆ ಪೂರ್ಣಗೊಳಿಸಲಿದೆ. ಮುಂದಿನ ಹದಿನೈದು ದಿನಗಳಲ್ಲಿ ಅಂದರೆ ಜ.26ರೊಳಗೆ ಶುಚಿ ಯೋಜನೆಗೆ ಮರುಚಾಲನೆ ಸಿಗುವ ನಿರೀಕ್ಷೆ ಇದೆ. ಮೈಸೂರು ವಿಭಾಗದಲ್ಲಿ 3.24 ಲಕ್ಷ, ಕಲಬುರಗಿ 31.52 ಲಕ್ಷ, ಬೆಂಗಳೂರು ವಿಭಾಗ 48.55 ಲಕ್ಷ, ಬೆಳಗಾವಿ ವಿಭಾಗದಲ್ಲಿ 62.3 ಲಕ್ಷ ಸಹಿತ ಒಟ್ಟು 17.45 ಲಕ್ಷ ಅರ್ಹ ಫಲಾನುಭವಿಗಳಿದ್ದಾರೆ. ಒಬ್ಬರಿಗೆ 8 ಶುಚಿ ಸ್ಯಾನಿಟರಿ ನ್ಯಾಪ್‌ಕಿನ್ ಪ್ಯಾಕ್ ನೀಡಲಾಗುತ್ತದೆ. ಒಂದರಲ್ಲಿ 10 ನ್ಯಾಪ್‌ಕಿನ್‌ಗಳಂತೆ 80 ನ್ಯಾಪ್‌ಕಿನ್ ಏಕಕಾಲಕ್ಕೆ ವಿತರಿಸಲಾಗುತ್ತದೆ. ಇದರ ಬಳಕೆಗೆ ಎರಡು ವರ್ಷದ ಅವಧಿ ಇದೆ. ಶಾಲೆಗೆ ಸ್ಯಾನಿಟರಿ ಪ್ಯಾಡ್ ವಿತರಿಸುವ ಕೆಲಸವನ್ನು ಟೆಂಡರ್ ವಹಿಸಿಕೊಂಡ ಸಂಸ್ಥೆಯೇ ಮಾಡಲಿದೆ.
Related Articles
ರಾಜ್ಯದ ಶಾಲೆ, ಪದವಿಪೂರ್ವ ಹಾಗೂ ವಸತಿ ನಿಲಯದಲ್ಲಿರುವ ಹದಿಹರೆಯದ ಹೆಣ್ಮಕ್ಕಳಿಗೆ ಶುಚಿ ಯೋಜನೆಯಡಿ ಪ್ಯಾಡ್ ವಿತರಿಸಲು 40.50 ಕೋಟಿ ರೂ. ಮಂಜೂರು ಆಗಿದೆ. ಒಂದು ಯೂನಿಟ್ (8 ಸ್ಯಾನಿಟರಿ ನ್ಯಾಪ್‌ಕಿನ್)ಗೆ 27.70 ರೂ. ನಿಗದಿಪಡಿಸಿದ್ದು, ಆ ಮೂಲಕ ಒಬ್ಬ ಫಲಾನುಭವಿಗೆ ಸರಕಾರ ಸುಮಾರು 222 ರೂ. ನಿಗದಿಪಡಿಸಿದೆ.
Advertisement
ಶುಚಿ ಯೋಜನೆಯಡಿಯಲ್ಲಿ ಸ್ಯಾನಿಟರಿ ನ್ಯಾಪ್‌ಕಿನ್ ವಿತರಣೆಗೆ ಸಂಬಂಧಿಸಿ 4 ವಿಭಾಗದಲ್ಲಿ ಟೆಂಡರ್ ಪೂರ್ಣಗೊಂಡು, ವರ್ಕ್ ಆರ್ಡರ್ ನೀಡಲಾಗಿದೆ. ಕೊನೆ ಹಂತದ ತಪಾಸಣೆ ಶೀಘ್ರದಲ್ಲಿ ಪೂರ್ಣಗೊಳ್ಳಲಿದೆ.-ಚಿದಾನಂದ ಸದಾಶಿವ ವಟಾರೆ, ವ್ಯವಸ್ಥಾಪಕ ನಿರ್ದೇಶಕ, ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ಎಲ್ಲಿ, ಎಷ್ಟು ಸರಬರಾಜು?
ಮೈಸೂರು ವಿಭಾಗ 8,137, ಕಲಬುರಗಿ ವಿಭಾಗ 5,036, ಬೆಂಗಳೂರು ವಿಭಾಗ 10,193, ಬೆಳಗಾವಿ ವಿಭಾಗ 9,602 ಸೇರಿ ಒಟ್ಟು 32,968 ಶಾಲೆ, ಪ್ರೌಢ ಹಾಗೂ ಪದವಿ ಪೂರ್ವ ಕಾಲೇಜು, ವಸತಿ ನಿಲಯದ ಸಂಸ್ಥೆಗಳಿಗೆ ಸ್ಯಾನಿಟರಿ ಪ್ಯಾಡ್ ಸರಬರಾಜಾಗಲಿದೆ. ತೃಪ್ತಿ ಕುಮ್ರಗೋಡು