ಮುಂಬೈ: ಕೋವಿಡ್ ಕಾರಣದಿಂದ ಸ್ಥಗಿತವಾಗಿರುವ ಐಪಿಎಲ್ ಕೂಟದ ಮುಂದುವರಿದ ಭಾಗ ಯುಎಇ ನಲ್ಲಿ ನಡೆಯಲಿದೆ ಎಂದು ಬಿಸಿಸಿಐ ಈಗಾಗಲೇ ಖಚಿತ ಪಡಿಸಿದೆ. ಸೆ.19ರಂದು ಮೊದಲ ಪಂದ್ಯ ನಡೆಯಲಿದ್ದು, ಫೈನಲ್ ಪಂದ್ಯವು ಅಕ್ಟೋಬರ್ 15ರಂದು ನಡೆಯಲಿದೆ ಎಂದು ವರದಿಯಾಗಿದೆ.
ಬಿಸಿಸಿಐ ಅಧಿಕಾರಿಯೊಬ್ಬರು ಈ ಬಗ್ಗೆ ಎಎನ್ ಐ ಗೆ ಮಾಹಿತಿ ನೀಡಿದ್ದಾರೆ. ಬಿಸಿಸಿಐ ಮತ್ತು ಎಮಿರೇಟ್ಸ್ ಕ್ರಿಕೆಟ್ ಮಂಡಳಿಯ ಮಾತುಕತೆ ಫಲಪ್ರದವಾಗಿದೆ. ಐಪಿಎಲ್ ನ ಬಾಕಿ ಉಳಿದಿರುವ ಪಂದ್ಯಗಳು ಯುಎಇ ನಲ್ಲಿ ಯಶಸ್ವಿಯಾಗಿ ನಡೆಯುವ ಬಗ್ಗೆ ಬಿಸಿಸಿಐ ವಿಶ್ವಾಸ ಹೊಂದಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ:ಒಂದೇ ಪಂದ್ಯಕ್ಕೆ ಕ್ರಿಕೆಟ್ ಜೀವನ ಅಂತ್ಯ:ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ರಾಬಿನ್ಸನ್ ಅಮಾನತು
ಶಾರ್ಜಾ, ಅಬುಧಾಬಿ, ಮತ್ತು ದುಬೈನಲ್ಲಿ ಪಂದ್ಯಗಳು ನಡೆಯಲಿದೆ. 25 ದಿನಗಳ ಕಾಲ ನಡೆಯಲಿರುವ ಕೂಟದ ಫೈನಲ್ ಪಂದ್ಯ ಅ.25ರಂದು ನಡೆಯಲಿದೆ ಎನ್ನಲಾಗಿದೆ.
ವಿದೇಶಿ ಆಟಗಾರರ ಲಭ್ಯತೆಯ ಬಗ್ಗೆ ಮಾತನಾಡಿದ ಅವರು, ಈ ಬಗ್ಗೆ ಬಿಸಿಸಿಐ ಮಾತುಕತೆ ಜಾರಿಯಲ್ಲಿರಿಸಿದೆ. ಬಹುತೇಕ ಆಟಗಾರರು ಲಭ್ಯವಾಗಲಿದ್ದಾರೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಕ್ರಮ ವಹಿಸಲಿದೆ. ಈ ಮುಂದುವರಿದ ಕೂಟ ಯಶಸ್ವಿಯಾಗುವ ಬಗ್ಗೆ ಬಿಸಿಸಿಐ ವಿಶ್ವಾಸದಿಂದ ಇದೆ ಎಂದು ಹೇಳಿದ್ದಾರೆ.