ಮಹಾನಗರ : ಪಂಚ ರಾಜ್ಯಗಳಲ್ಲಿ ಮತದಾರರು ಬಿಜೆಪಿಗೆ ಸರಿಯಾದ ಪಾಠ ಕಲಿಸಿದ್ದಾರೆ. ಹಣ ಮತ್ತು ತೋಳ್ಬಲ ಉಪಯೋಗಿಸಿಯೂ ಬಿಜೆಪಿಯು ದೇಶದಿಂದಲೇ ಕಣ್ಮರೆಯಾಗುವತ್ತ ಹೆಜ್ಜೆ ಇಟ್ಟಿದೆ. ನರೇಂದ್ರ ಮೋದಿ ಹಾಗೂ ಅಮಿತ್ ಶಾ ಈ ಫಲಿತಾಂಶದಿಂದ ಬುದ್ಧಿ ಕಲಿಯಬೇಕಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್ ಹೇಳಿದರು.
ಪಂಚರಾಜ್ಯಗಳ ಚುನಾವಣೆ ಫಲಿತಾಂಶದಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದ ಹಿನ್ನೆಲೆಯಲ್ಲಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಮಲ್ಲಿಕಟ್ಟೆಯ ಪಕ್ಷದ ಕಚೇರಿ ಮುಂಭಾಗ ಮಂಗಳವಾರ ಸಂಭ್ರಮಾಚರಣೆ ನಡೆಯಿತು. ಕಾರ್ಯಕರ್ತರು ಸಿಹಿತಿಂಡಿ ಹಂಚಿ ಸಂಭ್ರಮಿಸಿದರು. ರಾಹುಲ್ ಗಾಂಧಿಯವರು ರಾಷ್ಟ್ರೀಯ ಕಾಂಗ್ರೆಸ್‌ನ ಅಧ್ಯಕ್ಷತೆ ವಹಿಸಿಕೊಂಡ ಸರಿಯಾಗಿ ಒಂದು ವರ್ಷದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮುನ್ನಡೆ ದೊರಕಿಸಿ ಕೊಟ್ಟು ಯಶಸ್ಸು ಕಂಡಿದ್ದಾರೆ ಎಂದರು.
ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಮಾತನಾಡಿ, ಪಂಚರಾಜ್ಯಗಳಲ್ಲಿ ಕಾಂಗ್ರೆಸ್ ಗೆದ್ದಿರುವ ರಾಜ್ಯಗಳ ವಿಜಯವು ರಾಹುಲ್ ಗಾಂಧಿಯವರ ಮುಖಂಡತ್ವಕ್ಕೆ ಜನತೆ ನೀಡಿರುವ ಮನ್ನಣೆಯಾಗಿದ್ದು, ಮುಂದಿನ ರಾಷ್ಟ್ರೀಯ ಚುನಾವಣೆಯಲ್ಲಿ ರಾಹುಲ್ ಗಾಂಧಿ ಪ್ರಧಾನಿಯಾಗುವತ್ತ ಮತ್ತೊಂದು ಹೆಜ್ಜೆಯಾಗಿದೆ ಎಂದರು.
ಕಾಂಗ್ರೆಸ್ ನಾಯಕರಾದ ಜೆ.ಆರ್. ಲೋಬೋ, ಶಶಿಧರ್ ಹೆಗ್ಡೆ, ಧನಂಜಯ ಅಡ್ಪಂಗಾಯ, ಸುರೇಶ್ ಬಲ್ಲಾಳ್, ಸದಾಶಿವ ಉಳ್ಳಾಲ್, ಶಾಹುಲ್ ಹಮೀದ್, ಎ.ಸಿ. ವಿನಯರಾಜ್, ಬಿ.ಎ. ಮಹಮ್ಮದ್ ಹನೀಫ್, ನವೀನ್ ಡಿ’ಸೋಜಾ, ಶಾಲೆಟ್ ಪಿಂಟೋ, ಅಬ್ದುಲ್ ರವೂಫ್, ದೀಪಕ್ ಪೂಜಾರಿ, ವಿಶ್ವಾಸ್ ಕುಮಾರ್‌ದಾಸ್, ಸುಹೈಲ್ ಕಂದಕ್, ಮೆರಿಲ್ ರೇಗೋ, ಗಿರೀಶ್ ಆಳ್ವ, ಯು.ಟಿ. ತೌಸಿಫ್, ಲಾರೆನ್ಸ್ ಡಿ’ಸೋಜಾ, ನಝೀರ್ ಬಜಾಲ್, ಅಪ್ಪಿ, ಬಿ.ಎಂ. ಭಾರತಿ, ಖಾಲಿದ್ ಉಜಿರೆ, ಆಶಾ ಡಿ’ಸಿಲ್ವಾ, ಟಿ.ಕೆ. ಸುಧೀರ್, ನೀರಜ್‌ಪಾಲ್, ಸವಾದ್ ಸುಳ್ಯ, ಶುಭೋದಯ ಆಳ್ವ, ಆರೀಫ್ ಬಾವಾ, ಬಿಲಾಲ್ ಮೊಯಿದಿನ್, ನಾಗವೇಣಿ, ಟಿ.ಕೆ. ಶೈಲಜಾ, ರಮಾನಂದ ಪೂಜಾರಿ, ಎಸ್.ಕೆ. ಸೌಹಾನ್, ಅನ್ಸಾರ್ ಸಾಲ್ಮಾರ್, ಸಿ.ಎಂ. ಮುಸ್ತಫ, ನೂರುದ್ಧೀನ್ ಬಜಾಲ್, ಮುನೀರ್ ಎಚ್.ಎಸ್. ಉಪಸ್ಥಿತದ್ದರು.