Advertisement

ಸಿಡಿಬಂಡಿ ಉತ್ಸವಕ್ಕೆ ನಿರ್ಬಂಧ: ಎಸಿ

08:12 PM Mar 16, 2021 | Team Udayavani |

ಬಳ್ಳಾರಿ: ಸಾರ್ವಜನಿಕರು ಮತ್ತು ಭಕ್ತಾದಿಗಳ ಆರೋಗ್ಯದ ಹಿತದೃಷ್ಟಿಯಿಂದ ಕೋವಿಡ್‌ 2ನೇ ಅಲೆಯ ಮಹಾಮಾರಿ ಹರಡದಂತೆ ತಡೆಗಟ್ಟುವ ಉದ್ದೇಶದಿಂದ ಮುಂಜಾಗ್ರತಾ ಕ್ರಮವಾಗಿ ಮಾ. 23ರಿಂದ 30ರ ವರೆಗೆ ನಡೆಯುವ ಬಳ್ಳಾರಿಯ ಶ್ರೀ ಕನಕದುರ್ಗಮ್ಮ ಸಿಡಿಬಂಡಿ ರಥೋತ್ಸವದ ಜಾತ್ರಾ ಮಹೋತ್ಸವಕ್ಕೆ ಸಾರ್ವಜನಿಕರ ಪಾಲ್ಗೊಳ್ಳುವಿಕೆಯನ್ನು ನಿಷೇಧಿ  ಸಲಾಗಿದ್ದು, ದೇವಸ್ಥಾನದ ಆಡಳಿತದ ಮಂಡಳಿಯವರು ದೇವಸ್ಥಾನಗಳಲ್ಲಿ ದಿನನಿತ್ಯದ ಪೂಜಾ ಧಾರ್ಮಿಕ ವಿಧಿ ವಿಧಾನಗಳನ್ನು ನಿರ್ವಹಿಸಲು ಅನುಮತಿಸಲಾಗಿದೆ ಎಂದು ಸಹಾಯಕ ಆಯುಕ್ತ ರಮೇಶ ಕೋನರೆಡ್ಡಿ ತಿಳಿಸಿದರು.

Advertisement

ನಗರದ ಶ್ರೀ ಕನಕ ದುರ್ಗಮ್ಮ ದೇವಸ್ಥಾನದ ಆವರಣದ ಯಾತ್ರಿ ನಿವಾಸದಲ್ಲಿ ಸೋಮವಾರ ನಡೆದ ಸಿಡಿಬಂಡಿ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

500 ಜನಕ್ಕೆ ಪ್ರವೇಶ: ಈ ಜಾತ್ರಾ ಮಹೋತ್ಸವದಲ್ಲಿ ಭಕ್ತಾದಿಗಳ ದೇವರ ದರ್ಶನಕ್ಕೆ ಯಾವುದೇ ಸಮಸ್ಯೆ ಇಲ್ಲ. ದೈನಂದಿನ ಪೂಜಾ ವಿಧಿ -ವಿಧಾನಗಳು ನಿರ್ವಿಘ್ನವಾಗಿ ನೆರವೇರಲಿವೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅದೇಶದಂತೆ ಯಾವುದೇ ಜಾತ್ರಾ ಸಮಾರಂಭದಲ್ಲಿ 500 ಜನಕ್ಕಿಂತ ಜಾಸ್ತಿ ಜನರ ಪ್ರವೇಶ ನಿಷೇಧಿ ಸಲಾಗಿದೆ ಎಂದ ಅವರು ಸಿಡಿಬಂಡಿ ರಥೋತ್ಸವಕ್ಕೆ ಜಿಲ್ಲಾದಂಡಾಧಿಕಾರಿ ಅನುಮತಿ ನೀಡಿದಲ್ಲಿ ಕೋವಿಡ್‌ ಮಾರ್ಗಸೂಚಿ ಅನುಸಾರ ಹಾಗೂ ಸಮಯ ಬದಲಾವಣೆ ಮಾಡಿಕೊಂಡು ಅತ್ಯಂತ ಸರಳವಾಗಿ ಸಾರ್ವಜನಿಕರ ಪ್ರವೇಶ ನಿರ್ಬಂಧ ವಿಧಿಸಿ ಸಿಡಿಬಂಡಿ ರಥೋತ್ಸವ ಮಾಡಲಾಗುವುದು.

ಸಂಪ್ರದಾಯದ ಪ್ರಕಾರ ವಿಧಿವಿಧಾನಗಳನ್ನು ಮಾಡಲು ಅವಕಾಶವಿದೆ. ಪೂಜೆ ಸಮಯದಲ್ಲಿ ಭಕ್ತರ ಪ್ರವೇಶಕ್ಕೆ ಯಾವುದೇ ನಿರ್ಬಂಧವಿ ಧಿಸಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಈ ಜಾತ್ರಾ ಮಹೋತ್ಸ ನಡೆಯುವ ಮಾ. 23ರ ಮೂರು ದಿನಗಳ ಮುಂಚೆ ಹಾಗೂ ಜಾತ್ರೆಯ ಮೂರು ದಿನಗಳವರೆಗೆ ನಿರಂತರವಾಗಿ ದೇವಸ್ಥಾನದ ಆವರಣದಲ್ಲಿ ಸ್ಯಾನಿಟೈಸ್‌ ಮಾಡಬೇಕು ಎಂದು ಮಹಾನಗರ ಪಾಲಿಕೆ ಅಧಿ ಕಾರಿಗಳಿಗೆ ಸೂಚಿಸಿದರು.

ಮಹಾನಗರ ಪಾಲಿಕೆ ಸಿಬ್ಬಂದಿ ದೇವಸ್ಥಾನದ ಆವರಣವನ್ನು ಸ್ವತ್ಛಗೊಳಿಸುವುದರ ಜತೆಗೆ ಅಗತ್ಯ ಕುಡಿಯುವ ನೀರಿನ ಸೌಕರ್ಯ ಮತ್ತು ದೀಪದ ವ್ಯವಸ್ಥೆ ಹಾಗೂ ಇನ್ನಿತರ ವ್ಯವಸ್ಥೆಗಳನ್ನು ನಿಯಮಾನುಸಾರ ಮಾಡುವಂತೆ ಅವರು ಸೂಚಿಸಿದರು. ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತ ಪ್ರಕಾಶ್‌ ರಾವ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಭೆಯಲ್ಲಿ ಭಕ್ತಾದಿಗಳಾದ ಬಿ.ಎಂ.ಪಾಟೀಲ್‌, ಮುಂಡರಗಿ ನಾಗರಾಜ, ವಿಜಯಕುಮಾರ್‌, ಗೋವಿಂದರಾಜಲು, ಕೃಷ್ಣಯ್ಯ, ಪ್ರಕಾಶಬಾಬು, ದೇವಿಪ್ರಸಾದ್‌, ಪ್ರೊಬೆಷನರಿ ಐಎಎಸ್‌ ಅ ಧಿಕಾರಿ ರಾಹುಲ್‌ ಸಂಕನೂರು, ಡಿವೈಎಸ್ಪಿ ರಮೇಶಕುಮಾರ್‌, ಪ್ರಧಾನ ಅರ್ಚಕ ಪಿ. ಗಾದೆಪ್ಪ ಮಾತನಾಡಿದರು. ಈ ಸಂದರ್ಭದಲ್ಲಿ ದೇವಸ್ಥಾನದ ಕಾರ್ಯನಿರ್ವಾಹಕ ಅ ಧಿಕಾರಿ ಹನುಮಂತಪ್ಪ, ಅರ್ಚಕ ಬಿ.ಎಂ. ರಾಜಶೇಖರ ಸೇರಿದಂತೆ ಅನೇಕರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next