ಹೊನ್ನಾವರ: ತಾಲೂಕಿನ ಕೆಳಗಿನ ಇಡಗುಂಜಿ, ಮಾಳ್ಕೋಡ ಕುಮಾರರಾಮ, ಜೈನ ಜಟಗೇಶ್ವರ ಹಾಗೂ ಪರಿವಾರ ದೇವತೆಗಳ ಪುನರ್ ಪ್ರತಿಷ್ಠೆ ಹಾಗೂ ಶಿಖರ ಪ್ರತಿಷ್ಠಾ ಮಹೋತ್ಸವ ಏ.23 ರಿಂದ 25ರ ವರೆಗೆ ನಡೆಯಲಿದೆ. ಹಾಗೂ ಧರ್ಮಸ್ಥಳ ಶ್ರೀರಾಮ ಕ್ಷೇತ್ರದ ಮಠಾಧಿಧೀಶ ಸದ್ಗುರು ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಗುರುವಂದನಾ ಕಾರ್ಯಕ್ರಮ ನಡೆಯಲಿದೆ.
ಏ.25 ರಂದು ಸದ್ಗುರು ಬ್ರಹ್ಮಾನಂದ ಸರಸ್ವತಿ ಸ್ವ್ವಾಮೀಜಿ ಪುರ ಪ್ರವೇಶ, ಪೂರ್ಣಾಹುತಿ, ಮಹಾಮಂಗಳಾರತಿ, ಸಾಮೂಹಿಕ ಸತ್ಯನಾರಾಯಣ ಕಲಶ ಪೂಜೆ, ಸದ್ಗುರು ಬ್ರಹ್ಮಾನಂದ ಸರಸ್ವತಿ ಸ್ವ್ವಾಮೀಜಿಗಳ ಪಾದಪೂಜೆಯೊಂದಿಗೆ ಗುರುವಂದನಾ ಕಾರ್ಯಕ್ರಮ. ಗುರುಗಳ ಆಶೀರ್ವಚನ, ಮಹಾ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 7ರಿಂದ ಮಕ್ಕಳ ಮನರಂಜನಾ ಕಾರ್ಯಕ್ರಮ, ರಾತ್ರಿ 9ರಿಂದ ಯಕ್ಷಗಾನ ನಡೆಯಲಿದೆ. ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಿಗೆ ಭಕ್ತಾದಿಗಳು ಪ್ರತಿದಿನವೂ ಆಗಮಿಸಿ ತನು-ಮನ-ಧನಗಳಿಂದ ಸಹಾಯ ಸಹಕಾರ ನೀಡಿ ದೇವರ ಹಾಗೂ ಗುರುಗಳ ಕೃಪೆಗೆ ಪಾತ್ರರಾಗಬೇಕಾಗಿ ಸಮಿತಿ ವಿನಂತಿಸಿಕೊಂಡಿದೆ.
Advertisement
ಪುರಾತನ ಕಾಲದಿಂದಲೂ ಪ್ರಸಿದ್ಧವಾದ ದೇವಾಲಯವನ್ನು ವಾಸ್ತು ಪ್ರಕಾರ ನಿರ್ಮಿಸಲಾಗಿದೆ. ಶಿಲಾಮಯ ವಾಸ್ತು ಇರುವ ನೂತನ ದೇವಾಲಯವನ್ನು ವೇ. ಜಯರಾಮ ಅಡಿಗಳ ಅಧ್ವರ್ಯದಲ್ಲಿ ಏ.23 ರಿಂದ 25ರ ವರೆಗೆ ನೆರವೇರಿಸಲಾಗುತ್ತಿದೆ. ಏ.24 ರಂದು ಕ್ಷೇತ್ರಪಾಲ, ಜಟಗೇಶ್ವರ, ಚೌಡೇಶ್ವರಿ, ಬೀರ, ಬಾಲರಾಮ. ಕಾಳರಾಮ, ಯಕ್ಷಿ, ನಾಗ, ಕಾಳು ದೇವತೆಗಳ ಪುನರ್ ಪ್ರತಿಷ್ಠಾಪನಾ ಹಾಗೂ ಶಿಖರ ಪ್ರತಿಷ್ಠೆ, ತತ್ವನ್ಯಾಸ ಪ್ರತಿಷ್ಠಾ ಹವನ, ಶಕ್ತಿ-ತತ್ವ ಕಲಾ ಪ್ರಾಣ ಪ್ರತಿಷ್ಠಾ ನಿರೀಕ್ಷೆ ಇತ್ಯಾದಿ ನಡೆಯಲಿದೆ.